ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ಶುಲ್ಕ ವಿವಾದ: ಮಧ್ಯಂತರ ಅರ್ಜಿಯಲ್ಲಿ ಸರ್ಕಾರದ ನಡೆ ಬಯಲು

|
Google Oneindia Kannada News

ಬೆಂಗಳೂರು, ಜೂ.15: ಕೊರೊನಾ ಸೋಂಕು ಸೃಷ್ಟಿಸಿರುವ ಖಾಸಗಿ ಶಾಲಾ ಶುಲ್ಕದ ಬಿಕ್ಕಟ್ಟು ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಖಾಸಗಿ ಶಾಲಾ ಶುಲ್ಕದ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಮಿತಿ ರಚನೆ ಮಾಡಲು ಸರ್ಕಾರ ಹೊರಟಿದೆ.

ಖಾಸಗಿ ಶಾಲಾ ಶುಲ್ಕದ ವಿಚಾರವಾಗಿ ಸರ್ಕಾರದ ತೀರ್ಮಾನದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು 2017 ರಿಂದಲೂ ಕಾನೂನು ಸಮರ ಮಾಡುತ್ತಿವೆ. ಈ ಪ್ರಕರಣದ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿದ್ದು, ಖಾಸಗಿ ಶಾಲಾ ಶುಲ್ಕದ ಗೊಂದಲ ಇತ್ಯರ್ಥಕ್ಕೆ ಸರ್ಕಾರ ಪ್ರತ್ಯೇಕ ಸಮಿತಿ ರಚನೆ ಮಾಡುವುದಾಗಿ ಸರ್ಕಾರ ಹೆಚ್ಚುವರಿ ಅರ್ಜಿ ಸಲ್ಲಿಸಿದೆ. ಕಳೆದ ಮೂರು ವರ್ಷದಿಂದ ವಿವಾದಕ್ಕೆ ನಾಂದಿ ಹಾಡಿರುವ ಖಾಸಗಿ ಶಾಲಾ ಶುಲ್ಕದ ಗೊಂದಲ ಇದೀಗ ಹೈಕೋರ್ಟ್ ಅಂಗಳದಲ್ಲಿ ಕಾನೂನು ಸಮರಕ್ಕೆ ನಾಂದಿ ಹಾಡಿದೆ.

 ಶಾಲಾ ಶುಲ್ಕ: ಖಾಸಗಿ ಶಾಲೆಗಳ ಲಾಬಿಗೆ ಮಣಿಯಿತೇ ರಾಜ್ಯ ಬಿಜೆಪಿ ಸರ್ಕಾರ? ಶಾಲಾ ಶುಲ್ಕ: ಖಾಸಗಿ ಶಾಲೆಗಳ ಲಾಬಿಗೆ ಮಣಿಯಿತೇ ರಾಜ್ಯ ಬಿಜೆಪಿ ಸರ್ಕಾರ?

ಖಾಸಗಿ ಶಾಲೆಗಳು ವಿರೋಧ

ಪ್ರತ್ಯೇಕ ಸಮಿತಿ ರಚನೆ ಮಾಡುವ ಸರ್ಕಾರದ ತೀರ್ಮಾನಕ್ಕೆ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಸಂವಿಧಾನದ ಶೈಕ್ಷಣಿಕ ಹಕ್ಕು ಪ್ರಕಾರ ಖಾಸಗಿ ಸಂಸ್ಥೆಗಳು ಶಿಕ್ಷಣವನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳುವಂತಿಲ್ಲ. ಶಿಕ್ಷಣ ಸಂಸ್ಥೆ ನಿರ್ವಹಣೆ ಮಾಡಲು ಬೇಕಾಗುವಷ್ಟು ವೆಚ್ಚವನ್ನು ಸರಿದೂಗಿಸಲು ಸಂವಿಧಾನದಲ್ಲಿ ಅವಕಾಶವಿದೆ. ಲಾಭವೂ ಮಾಡಿಕೊಳ್ಳುವಂತಿಲ್ಲ. ನಷ್ಟವೂ ಅನುಭವಿಸುವಂತಿಲ್ಲ.

Private School Fee Dispute: Karnataka Government Will Formulate Committee To Settle Private School Fee Dispute

''ಆದರೆ, ಶಿಕ್ಷಣ ಸಂಸ್ಥೆಗಳ ಪ್ರಗತಿಗಷ್ಟೇ ಶಾಲಾ ಶುಲ್ಕ ವ್ಯಯಿಸಲು ಅವಕಾಶವಿದೆ. ಖಾಸಗಿ ಶಾಲಾ ಸಂಸ್ಥೆಗಳು ಮನಸೋ ಇಚ್ಛೆ ಶುಲ್ಕ ವಿಧಿಸುವಂತಿಲ್ಲ. ಶಾಲೆಯಲ್ಲಿನ ಸೌಲಭ್ಯ, ಶಿಕ್ಷಣ, ಶಿಕ್ಷಕರ ವೇತನದ ವೆಚ್ಚ ಎಲ್ಲ ಮಾನದಂಡ ಅನುಸರಿಸಿಯೇ ಶುಲ್ಕ ನಿಗದಿ ಮಾಡಬೇಕು. ಕೆಳ ಹಾಗೂ ಮಧ್ಯಮ ವರ್ಗದ ಬಹುತೇಕ ಶಾಲೆಗಳು ಈ ಮಾನದಂಡದ ಅಡಿಯಲ್ಲಿಯೇ ಶುಲ್ಕವನ್ನು ವಿಧಿಸುತ್ತಿವೆ. ಆದರೆ, ಶಿಕ್ಷಣ ಇಲಾಖೆ ವಿನಾಃ ಕಾರಣ ಗೊಂದಲ ಸೃಷ್ಟಿಸುತ್ತಿದೆ. ಕಮಿಟಿ ರಚನೆ ಮಾಡುವ ಸರ್ಕಾರದ ನಿರ್ಣಯವನ್ನು ನಾವು ಒಪ್ಪುವುದಿಲ್ಲ ಈ ಕುರಿತು ನ್ಯಾಯಾಲಯದ ಮೊರೆ ನಾವು ಹೋಗುತ್ತೇವೆ,'' ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.

ಗೊಂದಲದ ತೀರ್ಮಾನ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾದರು. ಶಾಲಾ ಶುಲ್ಕದ ಬಗ್ಗೆ ವಿವಾದ ಉಂಟಾಯಿತು. ಈ ವೇಳೆ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವನ್ನು ಪಡೆಯಬಾರದು. ಇದರ ಜತೆಗೆ ಇರುವ ಬೋಧನಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿತ ಮಾಡಬೇಕು ಎಂದು ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದರು.

Private School Fee Dispute: Karnataka Government Will Formulate Committee To Settle Private School Fee Dispute

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತೆಗೆದುಕೊಂಡ ಅವೈಜ್ಞಾನಿಕ ತೀರ್ಮಾನವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ರಾಜ್ಯದಲ್ಲಿ ಎಷ್ಟು ಖಾಸಗಿ ಶಾಲೆಗಳಿವೆ? ಎಷ್ಟು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಶಾಲಾ ಶುಲ್ಕ ನಿಗದಿ ವಿಚಾರದಲ್ಲಿ ಕನಿಷ್ಠ ಶುಲ್ಕ ವಿಧಿಸುತ್ತಿರುವ ಶಾಲೆಗಳ ಪಟ್ಟಿ, ಕಾರ್ಪೋರೇಟ್ ಶಾಲೆಗಳ ಶುಲ್ಕದ ವಿವರ ಸಂಗ್ರಹಿಸಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿತ್ತು. ಅಂತಿಮವಾಗಿ ವಿವಾದ ಕೋರ್ಟ್ ಮೆಟ್ಟಿಲೇರಿದೆ.

Recommended Video

Sanchari Vijay ಗೆ ಹುಟ್ಟೂರಿನಲ್ಲಿ ಸರ್ಕಾರಿ ಗೌರವ ಸಿಕ್ಕಿದ್ದು ಹೀಗೆ... | Oneindia Kannada

ಇದೀಗ ಕಮಿಟಿ ರಚನೆ ಮಾಡಿ, ಕಮಿಟಿ ಅಧ್ಯಯನ, ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣದ ಬಗ್ಗೆ ನಿಜವಾಗಿಯೂ ತೀರ್ಮಾನ ತೆಗೆದುಕೊಳ್ಳುವುದೇ ? ಈಗಾಗಲೇ 2021 - 22 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿರುವ ಕಾರಣ ಮತ್ತೆ ಖಾಸಗಿ ಶಾಲಾ ಶುಲ್ಕ ಗೊಂದಲಕ್ಕೆ ಎಡೆ ಮಾಡಿಕೊಡಲಿದೆಯೇ ಎಂಬ ಪ್ರಶ್ನೆ ಮೂಡಿದೆ.

English summary
The interim petition filed by the Government was quoted as saying that a committee would be formed to settle the private school fees dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X