ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್-19 ತಪಾಸಣೆಗೆ ನಿರಾಕರಿಸಿದ ಖಾಸಗಿ ಲ್ಯಾಬ್ ಗಳಿಗೆ ಬೀಗ!

|
Google Oneindia Kannada News

ಬೆಂಗಳೂರು, ಆಗಸ್ಟ್.20: ಕರ್ನಾಟಕದಲ್ಲಿ ಖಾಸಗಿ ಪ್ರಯೋಗಾಲಯಗಳು ಕೊವಿಡ್-19 ಸೋಂಕು ತಪಾಸಣೆಗೆ ಮಾದರಿ ಸಂಗ್ರಹಿಸಲು ನಿರಾಕರಿಸಿದ್ದಲ್ಲಿ ಅಂತಹ ಲ್ಯಾಬ್ ಗಳ ವಿರುದ್ಧ ದಂಡದ ಜೊತೆಗೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

Recommended Video

ಲಸಿಕೆ ರಾಜತಾಂತ್ರಿಕತೆ:Bangladeshಗೆ ಮೊದಲ ಆದ್ಯತೆ | Oneindia Kannada

ಬೆಂಗಳೂರು ಮಹಾನಗರ ಪಾಲಿಕೆ, ರಾಜ್ಯದ ಸ್ಥಳೀಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜೊತೆಗೆ ನಡೆದ ವಿಡಿಯೋ ಸಂವಾದದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರು ಈ 7 ಅಂಶಗಳನ್ನು ಪಾಲಿಸಿ ಕೊರೊನಾ ಸೋಂಕಿನಿಂದ ಗುಣಮುಖರಾದವರು ಈ 7 ಅಂಶಗಳನ್ನು ಪಾಲಿಸಿ

ರಾಜ್ಯಾದ್ಯಂತ ಕೊರೊನಾವೈರಸ್ ಸೋಂಕು ಪರೀಕ್ಷೆ ನಡೆಸುವುದಕ್ಕೆ ಮಾದರಿ ಸಂಗ್ರಹಿಸಲು ಖಾಸಗಿ ಪ್ರಯೋಗಾಲಯಗಳು ಹಿಂದೇಟು ಹಾಕುತ್ತಿರುವ ವಿಚಾರ ಸಭೆಯಲ್ಲಿ ಚರ್ಚೆಯಾಯಿತು. ಅಂತಹ ಲ್ಯಾಬ್ ಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊರೊನಾವೈರಸ್ ವರದಿಯಲ್ಲಿ ವಿಳಂಬ

ಕೊರೊನಾವೈರಸ್ ವರದಿಯಲ್ಲಿ ವಿಳಂಬ

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆಗೆ ಮಾದರಿ ಸಂಗ್ರಹಿಸಿದ ಅದೆಷ್ಟು ದಿನಗಳಿಗೆ ವರದಿ ಬರುತ್ತಿದೆ. ಈ ವಿಳಂಬಕ್ಕೆ ಕಾರಣವೇನು ಎಂದು ಚರ್ಚಿಸಿದ ಸಂದರ್ಭದಲ್ಲಿ ಖಾಸಗಿ ಪ್ರಯೋಗಾಲಯಗಳು ಮಾದರಿ ಪರೀಕ್ಷಿಸಲು ಹಿಂದೇಟು ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಪ್ರತಿನಿತ್ಯ 1 ಲಕ್ಷಕ್ಕಿಂತ ಹೆಚ್ಚು ಜನರ ಮಾದರಿಯನ್ನು ಸಂಗ್ರಹಿಸಲಾಗುತ್ತಿದ್ದು, ವರದಿ ಬರುವುದರಲ್ಲಿ ವಿಳಂಬವಾಗುತ್ತಿದೆ. ಸರ್ಕಾರಿ ಅಷ್ಟೇ ಅಲ್ಲದೇ ಖಾಸಗಿ ಲ್ಯಾಬ್ ಗಳಲ್ಲೂ ಮಾದರಿ ಪರೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದ್ದರು.

ಮಾದರಿ ಸಂಗ್ರಹಿಸಲು ಹಿಂದೇಟು ಹಾಕುತ್ತಿರುವುದೇಕೆ ಲ್ಯಾಬ್?

ಮಾದರಿ ಸಂಗ್ರಹಿಸಲು ಹಿಂದೇಟು ಹಾಕುತ್ತಿರುವುದೇಕೆ ಲ್ಯಾಬ್?

ರಾಜ್ಯದ ಹಲವು ಖಾಸಗಿ ಲ್ಯಾಬ್ ಗಳು ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಮಾದರಿ ಸಂಗ್ರಹಿಸಲು ಹಿಂದೇಟು ಹಾಕುತ್ತಿವೆ. ಏಕೆಂದರೆ ಈಗಾಗಲೇ ಸಂಗ್ರಹಿಸಿರುವ ಮಾದರಿಯ ವರದಿಯನ್ನೇ ಇನ್ನೂ ನೀಡಿಲ್ಲ. ಸೌಲಭ್ಯ ಮತ್ತು ಮಾನವಶಕ್ತಿ ಕೊರತೆಯಿಂದಾಗಿ ಸಾಕಷ್ಟು ವರದಿಗಳನ್ನು ನೀಡುವುದು ಬಾಕಿ ಉಳಿದಿದೆ. ಇದರ ನಡುವೆಯೂ ಹೊಸ ಮಾದರಿಗಳನ್ನು ಸಂಗ್ರಹಿಸಿದ್ದಲ್ಲಿ ಒತ್ತಡ ಹೆಚ್ಚಾಗಲಿದೆ ಎಂದು ಖಾಸಗಿ ಲ್ಯಾಬ್ ಗಳು ಕೊವಿಡ್-19 ಮಾದರಿ ಸಂಗ್ರಹಿಸಲು ಹಿಂದೇಟು ಹಾಕುತ್ತಿವೆ.

ಸರ್ಕಾರದ ಆದೇಶವನ್ನು ಪಾಲಿಸದ ಲ್ಯಾಬ್ ಗಳ ಪಟ್ಟಿ

ಸರ್ಕಾರದ ಆದೇಶವನ್ನು ಪಾಲಿಸದ ಲ್ಯಾಬ್ ಗಳ ಪಟ್ಟಿ

ಕೊರೊನಾವೈರಸ್ ಸೋಂಕಿನ ತಪಾಸಣೆಗಾಗಿ ತುರ್ತು ಪರಿಸ್ಥಿತಿಯಲ್ಲಿ ಸ್ವಯಂ ಚಾಲಿತ ಯಂತ್ರಗಳನ್ನು ಹೊಂದುವಂತೆ ಸರ್ಕಾರವು ಆದೇಶಿಸಿದೆ. ಇದರ ಹೊರತಾಗಿ ಆರ್ ಟಿ-ಪಿಸಿಆರ್ ತಪಾಸಣೆಯನ್ನು ಸಿಬ್ಬಂದಿಯಿಂದ ಮಾಡಿಸಲಾಗುತ್ತಿದೆ. ಒಂದೇ ಶಿಫ್ಟ್ ನಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ವರದಿ ನೀಡಲು ವಿಳಂಬವಾಗಲು ಕಾರಣವಾಗುತ್ತಿದೆ. ಅಂತಹ ಲ್ಯಾಬ್ ಗಳನ್ನು ಪಟ್ಟಿ ಮಾಡುವಂತೆ ಸರ್ಕಾರವು ಈಗಾಗಲೇ ಸೂಚನೆ ನೀಡಿದೆ. ಕಿದ್ವಾಯ್ ಮತ್ತು ನಿಮ್ಹಾನ್ಸ್ ಪ್ರಯೋಗಾಲಯಗಳಲ್ಲಿ ಲ್ಯಾಬ್ ಅಗ್ರಿಗೇಟರ್ಗಳು, ಸ್ವ್ಯಾಬ್ ಅಗ್ರಿಗೇಟರ್ಗಳು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳೊಂದಿಗೆ ಸಿಬ್ಬಂದಿ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ.

ಖಾಸಗಿ ಲ್ಯಾಬ್ ಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನೆ

ಖಾಸಗಿ ಲ್ಯಾಬ್ ಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನೆ

ರಾಜ್ಯದ ಸರ್ಕಾರಿ ಪ್ರಯೋಗಾಲಯಗಳಲ್ಲಿ ಯಂತ್ರಗಳು ಮತ್ತು ಸಿಬ್ಬಂದಿಯ ಸಂಖ್ಯೆಯನ್ನು ಸರ್ಕಾರವು ಹೆಚ್ಚಿಸುತ್ತದೆ. ಆದರೆ ಖಾಸಗಿ ಲ್ಯಾಬ್ ಗಳಿಗೆ ಸರ್ಕಾರವೇ ಹಣವನ್ನು ನೀಡುತ್ತಿದ್ದು, ಯಂತ್ರಗಳನ್ನು ಹೊಂದುವುದು ಮತ್ತು ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು. ಇದು ಆಗದಿದ್ದಲ್ಲಿ ಅಂಥ ಲ್ಯಾಬ್ ಗಳು ಬಾಗಿಲು ಹಾಕಿಕೊಂಡು ಹೋಗಲಿ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಬೆಂಗಳೂರು ಒಂದರಲ್ಲೇ ಎಂಟು ಸರ್ಕಾರಿ ಪ್ರಯೋಗಾಲಯಗಳು ಮತ್ತು 21 ಖಾಸಗಿ ಪ್ರಯೋಗಾಲಯಗಳಿವೆ. ಹೀಗಿದ್ದರೂ 30 ಸಾವಿರದಿಂದ 40 ಸಾವಿರದವರೆಗೂ ಕೊರೊನಾವೈರಸ್ ಸೋಂಕಿತರ ಮಾದರಿ ತಪಾಸಣೆಯ ವರದಿ ಬರುವುದು ಬಾಕಿ ಉಳಿದಿದೆ.

English summary
Private Labs Rejecting Test Samples For COVID-19 Testing Will Be Panalised And Booked: Dr.K.Minister Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X