ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೊಬ್ಬರ ಜೀವದ ಬಗ್ಗೆ ಕಾಳಜಿ ವಹಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಕಥೆ !

|
Google Oneindia Kannada News

ಬೆಂಗಳೂರು, ಮಾರ್ಚ್‌ 22: ಮನೆಯೊಳಗೆ ಯಾರೂ ಏಕಾಏಕಿ ಮನೆಯೊಳಗೆ ಪ್ರವೇಶ ಮಾಡಬೇಡಿ. ಈ ಮಾರ್ಗದಲ್ಲಿ ಮನೆಗೆ ಬಂದರೂ, ಮೊದಲು ಕಿಟಕಿ ತೆರೆಯಿರಿ. ಸ್ವಲ್ಪ ಸಮಯದ ನಂತರ ಲೈಟ್ ಆನ್ ಮಾಡಿ ! ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗುವ ಮುನ್ನ ಮನೆ ಬಾಗಿಲು ಇಂತಹ ಸೂಚನಾ ಫಲಕ ಅಂಟಿಸಿದ್ದ ! ತಾನಾಗಲೀ, ತನ್ನಿಂದಲಾಗಿ ಇನ್ನೊಬ್ಬರಿಗೆ ತೊಂದರೆ ಆಗಬಾರದು ಎಂದು ಸಾಯುವ ಮುನ್ನ ಕೂಡ ಪರರ ಯೋಗ ಕ್ಷೇಮದ ಬಗ್ಗೆ ಆಲೋಚಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನ ಕಣ್ಣೀರಿನ ಕಥೆಯಿದು.

ಹೌದು. ಆತನ ಹೆಸರು ಜೀವನ್ ಅಂಬಟಿ. ವಯಸ್ಸು ಇನ್ನೂ 29 ವರ್ಷ. ಬೀದರ್ ಮೂಲದವ. ಬೆಂಗಳೂರಿನ ಮಹದೇವಪುರದ ಲಕ್ಷ್ಮೀ ನಗರ ಲೇಔಟ್ ನಲ್ಲಿ ವಾಸವಾಗಿದ್ದ. ಅಮೆಜಾನ್ ಕಂಪನಿಯಲ್ಲಿ ಕಳೆದ ಐದು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ. ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದ ಜೀವನ್ ಪೋಷಕರ ಮಾತು ಕೇಳುತ್ತಿರಲಿಲ್ಲ. ಹೀಗಾಗಿ ಸುಲಭವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯುಟೂಬ್ ವಿಡಿಯೋ ನೋಡಿದ್ದ. ನೈಟ್ರೋಜನ್ ಗ್ಯಾಸ್ ಸೇವಿಸಿದರೆ ಸುಲಭವಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದಿದ್ದ. ಅದರಂತೆ ಮಾ. 13 ರಂದು ನೈಟ್ರೋಜನ್ ಗ್ಯಾಸ್ ತಂದಿದ್ದಾನೆ.

ಬೆಂಗಳೂರು: ಕೆಲಸ ನಿರ್ವಹಿಸುತ್ತಿದ್ದ ಕಂಪನಿಯಲ್ಲೇ ಐಟಿ ಉದ್ಯೋಗಿ ಆತ್ಮಹತ್ಯೆಬೆಂಗಳೂರು: ಕೆಲಸ ನಿರ್ವಹಿಸುತ್ತಿದ್ದ ಕಂಪನಿಯಲ್ಲೇ ಐಟಿ ಉದ್ಯೋಗಿ ಆತ್ಮಹತ್ಯೆ

ಸಾವಿಗೂ ಶರಣಾಗುವ ಮುನ್ನ ಡೆತ್ ನೋಟ್ ಬರೆದಿದ್ದಾನೆ. ನಾನು ಅಂದುಕೊಂಡಿದ್ದು ಸಾಧಿಸಲಾಗಲಿಲ್ಲ. ಯಂತ್ರದಂತೆ ಬದುಕುತ್ತಿದ್ದೇನೆ. ಈ ಜೀವನದಿಂದ ಏನೂ ಪ್ರಯೋಜನವಿಲ್ಲ. ನನ್ನ ಆತ್ಮಹತ್ಯೆಗೆ ಯಾರೂ ಕಾರಣವಲ್ಲ ಎಂದು ಬರೆದಿಟ್ಟಿದ್ದಾನೆ. ಆನಂತರ ಮನೆ ಬಾಗಿಲ ಮೇಲೂ ಸಹ ಯಾರೂ ಬರಬೇಡಿ ಎಂದು ಎಚ್ಚರಿಕೆ ಫಲಕ ಹಾಕಿದ್ದಾನೆ. ಮನೆಗೆ ಹೇಗೆ ಬರಬೇಕು ಎಂದು ಡಯಾಗ್ರಾಮ್ ಕೂಡ ಹಾಕಿದ್ದಾನೆ. ಫಲಕದಲ್ಲಿ ಯಾರೂ ಮನೆಗೆ ಏಕಾಏಕಿ ಪ್ರವೇಶ ಮಾಡಬೇಡಿ. ಮಾಡಿದರೂ ಮೊದಲು ಕಿಟಕಿ ಬಾಗಿಲು ತೆರೆಯಿರಿ. ಆನಂತರವಷ್ಟೇ ಲೈಟ್ ಆನ್ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.

Bengaluru: private company employee committed suicide by consuming nitrogen gas

ಹೀಗೆ ಸಾವಿಗೂ ಮುನ್ನ ತನ್ನಿಂದ ಇನ್ನೊಬ್ಬರ ಜೀವಕ್ಕೆ ಹಾನಿಯಾಗಬಾರದು ಎಂದು ಕಾಳಜಿ ವಹಿಸಿದ್ದಾನೆ. ವಿಪರ್ಯಾಸವೆಂದರೆ ನೈಟ್ರೋಜನ್ ಗ್ಯಾಸ್ ಸೇವಿಸಿ ಮಾ. 13 ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಷ್ಟು ದಿನವಾದರೂ ಆಚೆ ಬಂದಿಲ್ಲ. ಮೃತ ದೇಹ ಕೊಳೆತ ವಾಸನೆ ನೋಡಿ ಅಕ್ಕ ಪಕ್ಕದವರು ಮನೆ ಬಳಿ ಹೋದಾಗ ಆತ್ಮಹತ್ಯೆಯ ಸಂಗತಿ ಹೊರಗೆ ಬಂದಿದೆ. ಜೀವನ್ ಮಾನಸಿಕ ಖಿನ್ನತೆಗ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಆತ್ಮಹತ್ಯೆಗೂ ಮುನ್ನ ಆತ ಮನೆ ಬಾಗಿಲು ಮೇಲೆ ಹಾಕಿರುವ ಸೂಚನಾ ಫಲಕದಲ್ಲಿ ಇನ್ನೊಬ್ಬರ ಜೀವದ ಬಗ್ಗೆ ವಹಿಸಿರುವ ಕಾಳಜಿ ನೋಡಿ ನೆರೆ ಹೊರೆಯವರು ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ.

Bengaluru: private company employee committed suicide by consuming nitrogen gas

ಆತ್ಮಹತ್ಯೆ ಗೆ ಯಾವುದೂ ಸುಲಭ ಮಾರ್ಗವಲ್ಲ. ತನ್ನ ಜೀವವನ್ನು ತಾನೇ ತೆಗೆದುಕೊಳ್ಳುವುದು ಬಹುದೊಡ್ಡ ಕಷ್ಟದ ಕೆಲಸವೇ. ಹೀಗಾಗಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಜೀವನದಲ್ಲಿ ಕಷ್ಟ, ಸುಖ, ಎಲ್ಲವೂ ಬರುತ್ತವೆ. ಅವನ್ನು ಎದುರಿಸಬೇಕು. ಬದುಕಿಗಾಗಿ ದುಡಿಮೆ ಮಾಡಬೇಕೆ ವಿನಃ, ದುಡಿಮೆಯೇ ಬದುಕು ಆಗಬಾರದು ಎಂದು ಡಾ. ಶಿವಲಿಂಗಯ್ಯ ಕಿವಿಮಾತು ಹೇಳಿದ್ದಾರೆ.

Recommended Video

ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 14ಕ್ಕೆ ಏರಿಕೆ-2 ಹೊಸ ವಾರ್ಡ್ ಸೇರ್ಪಡೆಗೊಳಿಸಿದ ಬಿಬಿಎಂಪಿ | Oneindia Kannada

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

English summary
A private company employee committed suicide by consuming nitrogen gas now more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X