ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಟಿಯೊಳಗೆ ಖಾಸಗಿ ಬಸ್‌ಗಳಿಗೆ ಬ್ರೇಕ್: 3 ಬಸ್ ಟರ್ಮಿನಲ್‌ ನಿರ್ಮಾಣ

|
Google Oneindia Kannada News

ಬೆಂಗಳೂರು, ಜನವರಿ 19: ಬೆಂಗಳೂರು ನಗರದಲ್ಲಿ ಖಾಸಗಿ ಬಸ್‌ಗಳ ಹಾವಳಿ ಮಿತಿ ಮೀರಿದೆ. ಸರ್ಕಾರಿ ಬಸ್‌ಗಳಿಗೆ ಟಕ್ಕರ್ ಕೊಡುವಂತೆ ಖಾಸಗಿ ಬಸ್‌ಗಳ ತಲೆ ಎತ್ತಿವೆ. ಎಲ್ಲಿ ನೋಡಿದರೂ ಖಾಸಗಿ ಬಸ್‌ಗಳೇ ಕಾಣಿಸುತ್ತಿವೆ.ಇದಕ್ಕೊಂದು ಅಂತ್ಯ ಹಾಡಲು ಸಾರಿಗೆ ಇಲಾಖೆ ಮುಂದಾಗಿದೆ.

ಬಿಎಂಟಿಸಿ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ಬಿಎಂಟಿಸಿ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಚಿಂತನೆ

ಈಗಾಗಲೇ ಚಾಮರಾಜಪೇಟೆ, ಆನಂದರಾವ್ ವೃತ್ತ, ಕಲಾಸಿಪಾಳ್ಯ ಮಾರುಕಟ್ಟೆ, ಟಿಪ್ಪು ಸುಲ್ತಾನ್ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಖಾಸಗಿ ಬಸ್‌ಗಳೇ ಹೆಚ್ಚಿವೆ, ಅವರು ಮನಸ್ಸಿಗೆ ಬಂದ ಜಾಗಗಳಲ್ಲಿ ಬಸ್‌ಗಳನ್ನು ನಿಲ್ಲುತ್ತಾರೆ ಇದರಿಂದ ನಿತ್ಯ ಸಂಚರಿಸುವ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತೊಂದರೆಯಾಗಿ ಪರಿಣಮಿಸಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ಸಿಲ್ಕ್ ಬೋರ್ಡ್, ಪೀಣ್ಯ ಹಾಗೂ ಬೈಯಪ್ಪನಹಳ್ಳಿಯಲ್ಲಿ ಟರ್ಮಿನಲ್ ನಿರ್ಮಿಸಲು ಮುಂದಾಗಿದೆ. ಈಗಾಗಲೇ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ರಸ್ತೆಯ ಪಕ್ಕ ಬಸ್‌ಗಳನ್ನು ನಿಲ್ಲಿಸುವ ಪರಿಪಾಠವನ್ನು ಅವರು ಬಿಡುತ್ತಿಲ್ಲ ಹೀಗಾಗಿ ನಗರದೊಳಗ ಖಾಸಗಿ ಬಸ್‌ಗಳು ಬಾರದಂತೆ ಮಾಡಲು ಸಾರಿಗೆ ಇಲಾಖೆಯು ಬೆಂಗಳೂರು ಹೊರ ವಲಯದಲ್ಲಿ ಮೂರು ಕಡೆ ಖಾಸಗಿ ವಾಹನಗಳಿಗೆ ನಿಲುಗಡೆಗೆ ಅವಕಾಶ ನೀಡಲು ನಿರ್ಧರಿಸಿದೆ.

Private buses will get three terminals in Bengaluru

ಈಗಾಗಲೇ ರಸ್ತೆ, ಬಸ್‌ ಮಾರ್ಗಗಳ ಕುರಿತು ಸಮೀಕ್ಷೆ ನಡೆಸುತ್ತಿದ್ದು ಜನವರಿ ಅಂತ್ಯದೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದೆ. ಹಾಗೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಾರಿಗೆ ಇಲಾಖೆ ಹಾಗೂ ಮೆಟ್ರೋ ನಿಗಮಕ್ಕೆ ಬೈಯಪ್ಪನಹಳ್ಳಿ, ಸಿಲ್ಕ್ ಬೋರ್ಡ್ ಬಳಿ ಸರ್ಕಾರದ ಎಷ್ಟು ವಿಸ್ತೀರ್ಣದ ಖಾಲಿ ಜಾಗವಿದೆ ಎಂದು ತಿಳಿಸಲು ಸೂಚನೆ ನೀಡಿದ್ದಾರೆ.

English summary
Haphazard parking of private buses at major commercial hubs and residential areas in the city may end soon, with some progress being made on allotment of land for bus terminals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X