• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಮ್ ಆದ್ಮಿ ಪಕ್ಷ ಕರ್ನಾಟಕದ ಪೃಥ್ವಿ ರೆಡ್ಡಿ ಅವರಿಂದ "ಶಾಕ್ ಬೇಡ" ಆ್ಯಪ್ ಬಿಡುಗಡೆ

|

ಬೆಂಗಳೂರು, ನ.13: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿ ಹೃದಯಹೀನರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರ್ತಿಸುತ್ತಿದ್ದಾರೆ. ಈ ವಿದ್ಯುತ್ ದರ ಏರಿಕೆ ವಿರುದ್ದ ಆಮ್ ಆದ್ಮಿ ಪಕ್ಷ ''ಶಾಕ್ ಬೇಡಾ- ಕಡಿಮೆ ಮಾಡಿ ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿ'' ಎನ್ನುವ ಘೋಷ ವಾಕ್ಯದೊಂದಿಗೆ ಬೃಹತ್‌ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು. ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶಾಕ್ ಬೇಡ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದರು.

ಎಎಪಿ "ಶಾಕ್ ಬೇಡ" ಎನ್ನುವ ನೂತನ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಿದ್ದು, ಇದರಲ್ಲಿ ಬೆಂಗಳೂರಿನ ಜನರು ತಮ್ಮ ಪ್ರಸ್ತುತ ವಿದ್ಯುತ್ ಬಳಕೆಯನ್ನು ನಮೂದಿಸುವ ಮೂಲಕ, ಅವರು 2020 ರ ನವೆಂಬರ್‌ನಿಂದ ಎಷ್ಟು ವಿದ್ಯುತ್‌ ಬಿಲ್‌ ಪಾವತಿಸುತ್ತಾರೆ ಮತ್ತು ಅಷ್ಟೇ ಪ್ರಮಾಣದ ವಿದ್ಯುತ್‌ ಉಪಯೋಗಿಸುವ ದೆಹಲಿಯ ನಿವಾಸಿಗಳು ಎಷ್ಟು ಬಿಲ್‌ ಪಾವತಿಸುತ್ತಾರೆ ಎನ್ನುವುದನ್ನು ತುಲನೆ ಮಾಡಿ ನೋಡಬಹುದು ಎಂದು ಹೇಳಿದರು.

ಬಿಬಿಎಂಪಿಯಲ್ಲಿ ಎಎಪಿ ಗೆಲ್ಲಿಸಿ. ವರ್ಷಕ್ಕೆ 3 ಲಕ್ಷ ಹಣ ಉಳಿಸಿ

ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ದೀಪಾವಳಿಯ ನಂತರ ಬೆಂಗಳೂರಿನ ಮನೆ ಮನೆಗೆ ತೆರಳಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಹಿಂದಿನ ಸರ್ಕಾರಗಳ ದುಷ್ಕೃತ್ಯಗಳು ಮತ್ತು ಭ್ರಷ್ಟಾಚಾರಗಳ ಬಗ್ಗೆ ಜನರಿಗೆ ತಿಳಿಸಲಿದ್ದಾರೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಉಪಾಧ್ಯಕ್ಷ ಸುರೇಶ್ ರಾಥೋಡ್, ಮುಖ್ಯ ವಕ್ತಾರ ಶರತ್ ಖಾದ್ರಿ, ಜ್ಯೋತಿಷ್, ಮುಖಂಡರಾದ ಪ್ರಕಾಶ್ ನೆಡಂಗಡಿ, ಶಾಷವಲಿ ಇದ್ದರು.

ಹೊರೆಯನ್ನು ಜನರ ಮೇಲೆ ಹಾಕಿದ ಎಲ್ಲಾ 3 ಪಕ್ಷ

ಹೊರೆಯನ್ನು ಜನರ ಮೇಲೆ ಹಾಕಿದ ಎಲ್ಲಾ 3 ಪಕ್ಷ

ವಿದ್ಯುತ್ ಸೋರಿಕೆ, ಕಳ್ಳತನ, ತಡೆಗಟ್ಟದೆ ಆ ಹೊರೆಯನ್ನು ಜನರ ಮೇಲೆ ಹಾಕಿದ ಎಲ್ಲಾ 3 ಪಕ್ಷಗಳು ಇಂದಿನ ಈ ಪರಿಸ್ಥಿತಿಗೆ ಕಾರಣ‌. ಈ ಕೂಡಲೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಅವೈಜ್ಞಾನಿಕ ದರ ಹೆಚ್ಚಳದ ಆದೇಶವನ್ನು ಈ ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು.

ನಮ್ಮ ದೇಶದ ಜನರ ಆದಾಯದಲ್ಲಿ ಸರಾಸರಿ 50% ಕಡಿಮೆ ಆಗಿದೆ ಎಂದು ಅಂದಾಜಿಸಲಾಗಿದೆ. ಇಂತಹ ಸಮಯದಲ್ಲಿ ಯಡಿಯೂರಪ್ಪ ಸರ್ಕಾರ ಅತ್ಯಗತ್ಯವಾದ ವಿದ್ಯುತ್ ದರವನ್ನು ಶೇ 6ರಷ್ಟು ಹೆಚ್ಚಳ ಮಾಡಿ ಹೃದಯಹೀನವಾಗಿ ವರ್ತಿಸಿದೆ.

ದೆಹಲಿಯಲ್ಲಿ ಒಂದು ರೂಪಾಯಿ ಹೆಚ್ಚಳ ಮಾಡಿಲ್ಲ

ದೆಹಲಿಯಲ್ಲಿ ಒಂದು ರೂಪಾಯಿ ಹೆಚ್ಚಳ ಮಾಡಿಲ್ಲ

ಲಾಕ್‌ಡೌನ್‌ ಕಾರಣದಿಂದಾಗಿ ಆದಾಯವಿಲ್ಲದೆ, ಉದ್ಯೋಗವಿಲ್ಲದೆ ಬದುಕುತ್ತಿರುವ ಜನರಿಗೆ ವಾರ್ಷಿಕ ಸಾವಿರಾರು ರೂಪಾಯಿಗಳ ಹೊರೆ ಹಾಕಿದೆ.

ಎಎಪಿ ಸರ್ಕಾರ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗಿನಿಂದ, ದೆಹಲಿ ಜನತೆ 200 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಮತ್ತು 200 ಯುನಿಟ್‌ ಮೇಲ್ಪಟ್ಟ ಬಳಕೆಗೆ ಕಡಿಮೆ ದರವನ್ನು ಪಾವತಿಸುತ್ತಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ದೆಹಲಿಯ ವಿದ್ಯುತ್ ಬೆಲೆಯಲ್ಲಿ ಇದುವರೆಗೂ ಒಂದೇ ಒಂದು ರೂಪಾಯಿ ಹೆಚ್ಚಳ ಮಾಡಿಲ್ಲ.

ವಿತರಣೆ ಸಂಪೂರ್ಣವಾಗಿ ಸರ್ಕಾರದ ಬಳಿ ಇದೆ

ವಿತರಣೆ ಸಂಪೂರ್ಣವಾಗಿ ಸರ್ಕಾರದ ಬಳಿ ಇದೆ

ಇನ್ನೊಂದು ಕುತುಹಲಕಾರಿ ಸಂಗತಿ ಎಂದರೆ ದೆಹಲಿ ರಾಜ್ಯ ವಿದ್ಯುತ್ ಉತ್ಪಾದಿಸುವುದಿಲ್ಲ, ಅಲ್ಲಿನ ವಿದ್ಯುತ್ ವಿತರಣೆಯನ್ನು ಸಂಪೂರ್ಣವಾಗಿ ಖಾಸಗಿ ಕಂಪನಿಗಳ ಕೈಯಲ್ಲಿದೆ.

ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆ ಸಂಪೂರ್ಣವಾಗಿ ಸರ್ಕಾರದ ಬಳಿ ಇದೆ. ಆದರೂ ಕರ್ನಾಟಕದಲ್ಲಿ ವಿದ್ಯುತ್ ಬೆಲೆ ದೆಹಲಿಗಿಂತ 10 ರಿಂದ 15% ಕಡಿಮೆ ಇರಬೇಕಿತ್ತು ಆದರೆ ಇದೆಯೇ?

  ಪತ್ರಿಕಾ ರಂಗದ ದೊಡ್ಡ ಕೊಂಡಿ ಇಂದು ನಮ್ಮನ್ನು ಬಿಟ್ಟು ಹೋಗಿದ್ದೆ | Oneindia Kannada
  ಸುಮಾರು 70 ಪೈಸೆ ಪ್ರತಿ ಯೂನಿಟ್‌ಗೆ ಕಡಿಮೆ

  ಸುಮಾರು 70 ಪೈಸೆ ಪ್ರತಿ ಯೂನಿಟ್‌ಗೆ ಕಡಿಮೆ

  ನಮ್ಮನ್ನು ಸತತವಾಗಿ ಆಳಿದ ಎಲ್ಲಾ ಸರ್ಕಾರಗಳು ವಿದ್ಯುತ್‌ ಖರೀದಿಯಲ್ಲಿ ಮಾಡಿರುವ ವ್ಯಾಪಕ ಭ್ರಷ್ಟಾಚಾರ, ವಿತರಣೆ ಮಾಡಿವಾಗ ಆಗುವ ನಷ್ಟ ಅಥವಾ ವಿದ್ಯುತ್ ಕಳ್ಳತನವನ್ನು ಕಡಿಮೆ ಮಾಡುವ ಯಾವುದೇ ಪ್ರಯತ್ನವನ್ನು ಮಾಡದೆ ಆ ನಷ್ಟವನ್ನು ಸಾಮಾನ್ಯ ಜನರ ತಲೆಯ ಮೇಲೆ ಹೊರಿಸಿ ಹೊಟ್ಟೆ ಹೊರೆಯುತ್ತಿವೆ.

  ದೆಹಲಿ ಮತ್ತು ಬೆಸ್ಕಾಮ್ ನಡುವಿನ ವಿದ್ಯುತ್ ಖರೀದಿ ವೆಚ್ಚ ಮತ್ತು AT&C - ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳ ಹೋಲಿಕೆ ಮಾಡಿದಾಗ 6% ರಷ್ಟು ಹೆಚ್ಚುತ್ತಿರುವ ವೆಚ್ಚವನ್ನು ಬಿಟ್ಟರೂ ಪ್ರಾಮಾಣಿಕ ಮತ್ತು ದಕ್ಷ ಜನರ ಪರವಾದ ಸರ್ಕಾರವು ವಿದ್ಯುತ್ ವೆಚ್ಚವನ್ನು ಈಗ ಇರುವ ದರಕ್ಕಿಂತ ಶೇ 12 ಅಥವಾ ಸುಮಾರು 70 ಪೈಸೆ ಪ್ರತಿ ಯೂನಿಟ್‌ಗೆ ಕಡಿಮೆ ಮಾಡಬಹುದು.

  English summary
  Yeddyurappa is behaving really insensitive by increasing electricity tariffs. Prithvi Reddy warned the BJP state Government that if they don’t reduce the electricity bill, Aam Aadmi Party would go on a big protest against this, with their slogan “Reduce the electricity bill or leave Karnataka governance”.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X