• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ನೊಬಿಲಿಯಾ ಜರ್ಮನ್ ಮಾಡ್ಯುಲರ್ ಕಿಚನ್ ಸೆಂಟರ್ ಆರಂಭ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ವಿಶ್ವದ ಅತಿದೊಡ್ಡ ಮಾಡ್ಯೂಲರ್‌ ಕಿಚನ್‌ ತಯಾರಕ ಸಂಸ್ಥೆಯಾಗಿರುವ ನೊಬಿಲಿಯಾ ದೇಶದ ಸಮಗ್ರ ಲೈಫ್‌ ಸ್ಟೈಲ್‌ ಸೋಲ್ಯೂಶನ್ಸ್‌ ಪೂರೈಕೆದಾರ ಸಂಸ್ಥೆಯಾಗಿರುವ ಪ್ರಿಸ್ಮ್‌ ಜಾನ್ಸನ್‌ ಲಿಮಿಟೆಡ್‌ ಸಹಯೋಗದಲ್ಲಿ ಬೆಂಗಳೂರಿನ ಹೆಣ್ಣೂರಿನಲ್ಲಿ ತನ್ನ ಎಕ್ಸ್ ಕ್ಲೂಸಿವ್ ಸ್ಟೋರ್ ಅನ್ನು ಆರಂಭಿಸಿದೆ. ಜಾನ್ಸನ್ ಬಾತ್ ರೂಮ್ಸ್ & ನೊಬಿಲಿಯಾ ಕಿಚನ್ಸ್‌ನ ಅಧ್ಯಕ್ಷರಾಗಿರುವ ಪ್ರಿಸ್ಮ್ ಜಾನ್ಸನ್‌ನ ಪಂಕಜ್ ಶರ್ಮಾ ಅವರು ಈ ನೂತನ ಸ್ಟೋರ್ ಅನ್ನು ಉದ್ಘಾಟಿಸಿದರು.

ನೊಬಿಲಿಯಾ ಮಾಡ್ಯೂಲರ್‌ ಕಿಚನ್‌ ಮೂಲಕ ಪ್ರಿಸ್ಮ್‌ ಜಾನ್ಸ್‌ನ ದೇಶದ ನಾಗರೀಕರಿಗೆ ಐಷಾರಾಮಿ ಹಾಗೂ ಅನನ್ಯವಾದ ಜರ್ಮನ್ ನಿರ್ಮಿತ ಮಾಡ್ಯುಲರ್ ಕಿಚನ್‌ಗಳನ್ನು ನೀಡುವ ಉದ್ದೇಶದ ಹೊಂದಿದೆ. ಈ ಮೂಲಕ ಭಾರತದಲ್ಲಿ ಕಿಚನ್ ಆಲಂಕಾರ ವಹಿವಾಟಿನಲ್ಲಿ ಜಾಗತಿಕ ಟ್ರೆಂಡ್ ಗಳನ್ನು ನೀಡಲಿದೆ. ನೊಬಿಲಿಯಾ ವಿಶ್ವದ ಅತಿ ದೊಡ್ಡ ಕಿಚನ್ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾಗಿದೆ. ಇದರ ಹೊಸ ಸ್ಟೋರ್‌ನ ವಿಳಾಸ: ವಿಸ್ಮಯ ಗ್ಯಾಲೇರಿಯಾ, ಡಿಮಾರ್ಟ್ ಬಳಿ, ಹೆಣ್ಣುರು ಮುಖ್ಯರಸ್ತೆ, ಬೆಂಗಳೂರು- 560043.

ನೂತನ ಸ್ಟೋರ್‌ ಉದ್ಘಾಟಿಸಿ ಮಾತನಾಡಿದ ಜಾನ್ಸನ್ ಬಾತ್ ರೂಮ್ಸ್ & ಜಾನ್ಸನ್ ಕಿಚನ್ಸ್‌ನ ಅಧ್ಯಕ್ಷ ಪಂಕಜ್ ಶರ್ಮಾ ಅವರು, ''ಬೆಂಗಳೂರಿನಲ್ಲಿ ನೊಬಿಲಿಯಾ ಎಕ್ಸ್ ಪೀರಿಯನ್ಸ್ ಸೆಂಟರ್ ನೊಬಿಲಿಯಾದ ವಿಶ್ವ ದರ್ಜೆಯ ತಂತ್ರಜ್ಞಾನದ ಸಿನರ್ಜಿಯ ಪ್ರತೀಕವಾಗಿದೆ. ಅಲ್ಲದೇ ಜಾನ್ಸನ್ ಪರಂಪರೆಯನ್ನು ಸೂಚಿಸುತ್ತದೆ. ಪ್ರಿಸ್ಮ್ ಜಾನ್ಸನ್ ಲಿಮಿಟೆಡ್ ತನ್ನ ಮಾಡ್ಯುಲರ್ ಕಿಚನ್ ವ್ಯವಹಾರಗಳತ್ತ ಆದ್ಯತೆ ನೀಡುತ್ತಾ ಬಂದಿದೆ. ಬೆಂಗಳೂರು ಮತ್ತು ಇತರ ನಗರಗಳಲ್ಲಿ ಹೈಎಂಡ್ ಲಕ್ಷುರಿ ಉತ್ಪನ್ನಗಳಿಗೆ ಸಾಕಷ್ಟು ಅವಕಾಶಗಳಿವೆ. ಈ ದಿಸೆಯಲ್ಲಿ ಹಲವಾರು ಬ್ರ್ಯಾಂಡ್ ಗಳು ಈ ಮಾರುಕಟ್ಟೆಗಳ ಸ್ಥಳೀಯ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ನಾವು ಉತ್ಸಾಹಿ ಉದ್ಯಮಿಯಾಗಿರುವ ಪ್ರನೀತ್ ರೆಡ್ಡಿ (ಎಂಜಿನಿಯರ್) ಅವರೊಂದಿಗೆ ಸಹಭಾಗಿತ್ವ ಮಾಡಿಕೊಳ್ಳಲು ಹೆಮ್ಮೆ ಎನಿಸುತ್ತಿದೆ,'' ಎಂದರು.

Prism Johnson Ltd. inaugurated the new Nobilia Experience Centre in Bengaluru.
   Narendra Modi ಲಸಿಕೆಯ ವಿಚಾರವಾಗಿ ಹೇಳಿದ್ದೇನು | Oneindia Kannada

   ಈ ಸ್ಟೋರ್‌ನಲ್ಲಿ ನೊಬಿಲಿಯಾದ ವಾಟರ್ ಪ್ರೂಫ್ ಕಿಚನ್ ವರ್ಕ್ ಟಾಪ್ಸ್, ಫ್ರೀ ಸ್ಟಾಂಡಿಂಗ್ ವಾಶಿಂಗ್ ಮಶೀನ್ ಅಥವಾ ಡಿಶ್ ವಾಶರ್ ಸಲೂಷನ್, ಆಂಟಿ-ಫಿಂಗರ್ ಪ್ರಿಂಟ್ ಶಟರ್ಸ್, ವೆನೀರ್ ಮತ್ತು ಗ್ಲಾಸ್ ಫಿನಿಶ್‌ನ ಉತ್ಪನ್ನಗಳು ಲಭ್ಯವಿವೆ. ಈ ನವೀನ ಸಲೂಶನ್‌ಗಳು ಅನನ್ಯವಾಗಿದ್ದು, ಏಷ್ಯನ್ ಪೆಸಿಫಿಕ್ ಪ್ರದೇಶದ ಅಗತ್ಯತೆಗಳನ್ನು ಪೂರೈಸಲಿವೆ.

   English summary
   Prism Johnson Ltd., India’s leading Integrated Lifestyle Solutions provider, announced the expansion of its strategic partnership with Germany’s Nobilia, the world’s biggest manufacturer of modular kitchens, by expanding its operations and opening an exclusive store in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X