ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಪ್ರಾಂಶುಪಾಲರು

|
Google Oneindia Kannada News

ಬೆಂಗಳೂರು, ಆ.6 : ಶಾಲೆಯಲ್ಲಿ ಮಕ್ಕಳ ಜೊತೆ ಜಗಳವಾಡಿದ ಕಾರಣಕ್ಕೆ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರೊಬ್ಬರನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಬಂಧಿತ ಪ್ರಾಂಶುಪಾಲರನ್ನು ಹನುಂತನಗರದ ಖಾಸಗಿ ಪ್ರೌಢಶಾಲೆಯ ಜಗನ್ನಾಥ್ ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ತರಗತಿಗೆ ಹಾಜರಾದ ವಿದ್ಯಾರ್ಥಿ, ಇತರ ಮಕ್ಕಳ ಜತೆ ಜಗಳವಾಡುತ್ತಿದ್ದ. ಈ ವೇಳೆ ಶಾಲೆಯ ಪ್ರಾಂಶು­ಪಾಲ ಜಗನ್ನಾಥ್ ಅವರು ಆತನಿಗೆ ಕೋಲಿನಿಂದ ಮನ­ಬಂದಂತೆ ಥಳಿಸಿದ್ದಾರೆ.

school

ಮನಗೆ ಬಂದ ವಿದ್ಯಾರ್ಥಿ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಬಾಲಕನ ಮೈ, ಕಾಲುಗಳ ಮೇಲೆ ಬಾಸುಂಡೆ ಬಂದಿದ್ದು, ಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪೋಷಕರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಈ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. [ಶಾಲೆಯಲ್ಲಿ ಪ್ರಾಂಶುಪಾಲರ ಪಾನಗೋಷ್ಠಿ]

ಘಟನೆಯಿಂದ ಆತಂಕಗೊಂಡಿದ್ದ ಪೋಷಕರು ಪೊಲೀಸರಿಗೆ ದೂರು ನೀಡಲು ಸಿದ್ಧರಿರಲಿಲ್ಲ. ಅವರಿಗೆ ರಕ್ಷಣೆಯ ಭರವಸೆ ನೀಡಿ, ಹನುಂತನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಪಿ.ಎನ್.ಬಸವರಾಜ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಪ್ರಾಂಶುಪಾಲ ಜಗನ್ನಾಥ್ ವಿರುದ್ಧ ಹಲ್ಲೆ (ಐಪಿಸಿ 354), ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ ಆರೋಪ (ಐಪಿಸಿ 504), ಬಾಲ ನ್ಯಾಯ ಕಾಯ್ದೆ ಹಾಗೂ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

English summary
Bangalore : Hanumanthnagar high school principal Jagannath was arrested on Tuesday for allegedly caning a 12-year-old boy after he was found quarreling with another student in the classroom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X