• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿತ್ಯಾನಂದನ ಹೊಸ ದೇಶಕ್ಕೆ ಪ್ರಧಾನಿ, ಕ್ಯಾಬಿನೆಟ್ ರಚನೆ

|
   Nityananda creates his own 'Kailasaa' | Oneindia Kannada

   ಬೆಂಗಳೂರು, ಡಿಸೆಂಬರ್ 03: ಸ್ವಯಂ ಘೋಷಿತ ದೇವ ಮಾನವನೆಂದೇ ಹೇಳಿಕೊಳ್ಳುವ ಅತ್ಯಾಚಾರದ ಆರೋಪಿಯಾಗಿರುವ ನಿತ್ಯಾನಂದ, ಆಶ್ರಮಗಳ ನಂತರ ಈಗ ತನ್ನದೇ ಆದ ದೇಶ ಕಟ್ಟಲು ಮುಂದಾಗಿದ್ದಾನೆ.

   ಈಕ್ವೆಡಾರ್ ಎಂಬಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿ ಮಾಡಿದ್ದು, ಇದು ನನ್ನದೇ ದೇಶ ಎಂದು ಹೇಳಿಕೊಳ್ಳುತ್ತಿದ್ದಾನೆ. ಈ ದೇಶಕ್ಕಾಗಿ ಧ್ವಜ, ಲಾಂಛನ, ಪ್ರತ್ಯೇಕ ಪಾಸ್ ಪೋರ್ಟ್ ನ್ನು ಸಿದ್ದಪಡಿಸಿಕೊಂಡಿದ್ದಾನೆ. ಅಲ್ಲದೇ ಈ ದೇಶಕ್ಕೆ 'ಕೈಲಾಸ' ಎಂದು ಹೆಸರಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.

   ಭಕ್ತರ ಭೇಟಿಗೆ ನೇರವಾಗಿ ಸಿಗದ ಸ್ವಾಮಿ ನಿತ್ಯಾನಂದ; ಎಲ್ಲಿದ್ದೀರಾ ಬಿಡದಿ ಸ್ವಾಮಿ?

   ಈ ನೂತನ ದೇಶವು ಟ್ರಿನಿಡಾಡ್ ಮತ್ತು ಟೊಬ್ಯಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಇದನ್ನು ಹಿಂದೂ ರಾಷ್ಟ್ರವೆಂದು ಕರೆದಿದ್ದಾನೆ. ಈ ದೇಶಕ್ಕೆ ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ರಚಿಸಿದ್ದು, ಈ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾನೆ. ಈ ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವವನ್ನು ಪಡೆಯಬೇಕು, ಇದು ಅದಾವಕಾಶ ಎಂದಿದ್ದಾನೆ.

   ಹಿಂದೂಗಳಿಗೆ ಮುಕ್ತ ಪ್ರವೇಶ

   ಹಿಂದೂಗಳಿಗೆ ಮುಕ್ತ ಪ್ರವೇಶ

   ಈಕ್ವೆಡಾರ್ ಎಂಬಲ್ಲಿ ದ್ವೀಪ ಖರೀದಿ ಮಾಡಿದ್ದು, ಇದು ನನ್ನದೇ ದೇಶ ಎಂದು ಹೇಳಿಕೊಳ್ಳುತ್ತಿದ್ದಾನೆ. ಈ ದೇಶಕ್ಕಾಗಿ ಧ್ವಜ, ಲಾಂಛನ, ಪ್ರತ್ಯೇಕ ಪಾಸ್ ಪೋರ್ಟ್ ನ್ನು ಸಿದ್ದಪಡಿಸಿಕೊಂಡಿದ್ದಾನೆ. ಅಲ್ಲದೇ ಈ ದೇಶಕ್ಕೆ 'ಕೈಲಾಸ' ಎಂದು ಹೆಸರಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.

   ಈ ನೂತನ ದೇಶವು ಟ್ರಿನಿಡಾಡ್ ಮತ್ತು ಟೊಬ್ಯಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಇದನ್ನು ಹಿಂದೂ ರಾಷ್ಟ್ರವೆಂದು ಕರೆದಿದ್ದಾನೆ. ಈ ದೇಶಕ್ಕೆ ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ರಚಿಸಿದ್ದು, ಈ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾನೆ. ಈ ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವವನ್ನು ಪಡೆಯಬೇಕು, ಇದು ಅದಾವಕಾಶ ಎಂದಿದ್ದಾನೆ.

   ಲಾಂಛನಗಳು ಸಿದ್ದವಾಗಿವೆ

   ಲಾಂಛನಗಳು ಸಿದ್ದವಾಗಿವೆ

   ಕೈಲಾಸ ದೇಶವು ರಾಜಕೀಯದಿಂದ ಮುಕ್ತವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕಬಹುದು ಎಂದು ಹೇಳಿದ್ದಾನೆ. ಇಲ್ಲಿ ಅಧೀಕೃತವಾಗಿ ಹಿಂದೂ ಧರ್ಮದ ತಳಹದಿಯ ಮೇಲೆ ದೇಶ ಕಟ್ಟಲಾಗಿದ್ದು, ಪ್ರಬುದ್ಧ ನಾಗರೀಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದರ ಬಗ್ಗೆ ಕೈಲಾಸ ದೇಶದ ಪ್ರಮುಖ ಉದ್ದೇಶವಾಗಿದೆ ಎಂದು ಬರೆದುಕೊಂಡಿದ್ದಾನೆ.

   ಕೈಲಾಸ ದೇಶದ ಪಾಸ್ ಪೋರ್ಟ್ ನ ಎರಡು ಮಾದರಿಗಳು ಈಗಾಗಲೇ ಅಂತಿಮವಾಗಿದ್ದು, ಒಂದು ಬಂಗಾರದ ಬಣ್ಣದ್ದಾಗಿದೆ. ಇನ್ನೊಂದು ಕೆಂಪು ಬಣ್ಣದ್ದಾಗಿದೆ. ಎರಡು ಲಾಂಛನಗಳಿದ್ದು, ಒಂದರಲ್ಲಿ ನಿತ್ಯಾನಂದ, ಇನ್ನೊಂದರಲ್ಲಿ ನಂದಿ ಚಿತ್ರಗಳಿವೆ.

   ಅಪಹರಣ: ಸ್ವಾಮಿ ನಿತ್ಯಾನಂದ ವಿರುದ್ಧ ಎಫ್‌ಐಆರ್, ಶಿಷ್ಯೆಯರ ಬಂಧನ

   ಸರ್ಕಾರದ ಇಲಾಖೆಗಳು ಕಾರ್ಯರೂಪಕ್ಕೆ

   ಸರ್ಕಾರದ ಇಲಾಖೆಗಳು ಕಾರ್ಯರೂಪಕ್ಕೆ

   ನಿತ್ಯಾನಂದ ಕೈಲಾಸ ದೇಶಕ್ಕೆ ಪ್ರಧಾನಿಯನ್ನು ಸೂಚಿಸಿದ್ದು, ಮಾ ಎಂಬ ಹೆಸರಿನವ ಪ್ರಧಾನಿಯಾಗಿದ್ದಾನೆ. ಪ್ರತಿನಿತ್ಯ ನಿತ್ಯಾನಂದ ಸಚಿವ ಸಂಪುಟ ಸಭೆ ಕರೆಯುತ್ತಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.

   ಕೈಲಾಸ ದೇಶಕ್ಕೆ ಯಾವುದೇ ನಿರ್ಭಂಧಗಳನ್ನು ವಿಧಿಸಿರುವುದಿಲ್ಲ. ವಿಶ್ವದ ಯಾವುದೇ ಕಡೆಗಳಿಂದ ಹಿಂದೂಗಳು ಈ ದೇಶಕ್ಕೆ ಬರಬಹುದಾಗಿದೆ. ಈ ದೇಶದಲ್ಲಿ 10 ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಒಂದು ಶ್ರೀ ನಿತ್ಯಾನಂದ ಪರಮಶಿವಂ, ಕೈಲಾಸ ಸರ್ಕಾರದ ಅಂತರಾಷ್ಟ್ರೀಯ ಸಂಬಂಧ, ಡಿಜಿಟಲ್ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಸೇರಿಕೊಂಡಿವೆ.

   ನಕಲಿ ಪಾಸ್ ಪೋರ್ಟ್ ಬಳಸಿ ಪರಾರಿ

   ನಕಲಿ ಪಾಸ್ ಪೋರ್ಟ್ ಬಳಸಿ ಪರಾರಿ

   ಗೃಹ, ರಕ್ಷಣೆ, ವಾಣಿಜ್ಯ ಹಾಗೂ ಶಿಕ್ಷಣ ಸೇರಿದಂತೆ ಅನೇಕ ಇಲಾಖೆಗಳನ್ನು ರಚಿಸಿಕೊಂಡಿದ್ದಾನೆ. ಕೈಲಾಸದ ಕಾನೂನು ತಂಡ ಈ ಹೊಸ ದೇಶವನ್ನು ಘೋಷಣೆ ಮಾಡಲು ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಲಿದೆ. ಭಾರತದಲ್ಲಿ ಬೆದರಿಕೆ ಇರುವ ಬಗ್ಗೆಯೂ ಉಲ್ಲೇಖಿಸಲಾಗಿದೆ.

   ಪಾಸ್ ಪೋರ್ಟ್ ಅವಧಿ ಮುಕ್ತಾಯವಾದಾಗ ನೇಪಾಳದ ಮೂಲಕ ಭಾರತವನ್ನು ತೊರೆದು ಹೋಗಿದ್ದಾನೆ. ನಕಲಿ ಪಾಸ್ ಪೋರ್ಟ್ ಬಳಸಿ ವೆನೆಜುವೆಲಾ ಪಾಸ್ ಪೋರ್ಟ್ ಪಡೆದು ದೇಶ ತೊರೆದು ಹೋಗಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.

   English summary
   Nityananda, a Self Proclaimed Rape Victim, Is Now Set To Build His Own Country After Ashrams. Bought a Private Snowpack In Ecuador, Claiming It Was My Own Country. He Has a Flag, Logo And a Separate Passport For This Country.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more