• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಭವನದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಏನಿದರ ರಹಸ್ಯ?

By ಅನಿಲ್ ಬಾಸೂರ್
|

ಬೆಂಗಳೂರು, ಜ. 01: ಗಣ್ಯಾತೀಗಣ್ಯರು ರಾಜ್ಯ ಪ್ರವಾಸ ಕೈಗೊಂಡಾಗ ರಾಜಭವನದಲ್ಲಿಯೆ ವಾಸ್ತವ್ಯ ಮಾಡುವುದು ವಾಡಿಕೆ. ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಇವತ್ತು ರಾಜಭನವದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಇದಕ್ಕೆ ಭದ್ರತಾ ಕಾರಣ ಒಂದಾದರೆ, ಮತ್ತೊಂದು ಕಾರಣ ರಾಜಭವನಕ್ಕೆ ಇರುವ ಇತಿಹಾಸ. ಸುಮಾರು 180 ವರ್ಷಗಳ ಇತಿಹಾಸ ಹೊಂದಿರುವ ಇಂದಿನ ರಾಜಭವನ ಮೂಲತಃ ಖಾಸಗಿ ಕಟ್ಟಡ ಎಂದರೆ ಸೋಜಿಗವಾಗದೆ ಇರದು.

ಹೌದು ಮೂಲ ಕಟ್ಟಡ ಬ್ರಿಟಿಷ್ ಅಧಿಕಾರಿಯೊಬ್ಬರ ಖಾಸಗಿ ನಿವಾಸವಾಗಿತ್ತು. ರಾಜಭವನದ ಇತಿಹಾಸ ನೋಡುತ್ತಾ ಹೋದರೆ ಇಂತಹ ಅನೇಕ ಕೌತುಕಗಳು ನಮ್ಮನ್ನು ಸೆಳೆಯುತ್ತವೆ.

ಖಾಸಗಿ ವಾಸ್ತವ್ಯಕ್ಕೆ ರಾಜಭವನ ನಿರ್ಮಾಣ ಮಾಡಿದ್ದು ಬ್ರಿಟಿಷ್ ಅಧಿಕಾರಿ

ಖಾಸಗಿ ವಾಸ್ತವ್ಯಕ್ಕೆ ರಾಜಭವನ ನಿರ್ಮಾಣ ಮಾಡಿದ್ದು ಬ್ರಿಟಿಷ್ ಅಧಿಕಾರಿ

ಈಗಿನ ರಾಜಭವನ ಮೂಲತಃ ಬೆಂಗಳೂರಿಗೆ ಹಲವು ಕೊಡುಗಳನ್ನು ಕೊಟ್ಟಿರುವ ಬ್ರಿಟಿಷ್ ಅಧಿಕಾರಿಯಾಗಿದ್ದ ಸರ್ ಮಾರ್ಕ್‌ ಕಬ್ಬನ್ ಅವರು ಖಾಸಗಿ ವಾಸ್ತವ್ಯಕ್ಕೆ ನಿರ್ಮಿಸಿಕೊಂಡಿದ್ದ ಕಟ್ಟಡ. 1834 ರಿಂದ 1860ರ ವರೆಗೆ ಮೈಸೂರು ಪ್ರಾಂತ್ಯದ ಕಮೀಷನರ್ ಆಗಿದ್ದ ಮಾರ್ಕ್‌ ಕಬ್ಬನ್ 1840 ರಿಂದ 42ರ ಅವಧಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಿದ್ದರು. ಅವಿವಾಹಿತರಾಗಿದ್ದ ಸರ್ ಕಬ್ಬನ್ ಅವರು ತಮ್ಮ 86ನೇ ವಯಸ್ಸಿನಲ್ಲಿ ಅಸೌಖ್ಯದಿಂದ ತಮ್ಮ ತವರೂರು ಇಂಗ್ಲೆಂಡಿಗೆ ಹೋಗಲು ನಿರ್ಧಾರಿಸಿ, ತಮ್ಮ ಸ್ವಂತ ಹಣದಿಂದ ಕಟ್ಟಿಸಿದ್ದ ಕಟ್ಟಡವನ್ನು ಮಾರಾಟಕ್ಕೆ ಇಟ್ಟಿದ್ದರು.

ಮೇಜರ್ ಫ್ರೆಡ್ರಿಕ್ ಗ್ರೇಯ್ ಎಂಬ ಎಜಂಟ್ ಸಹಾಯದಿಂದ ಬಂಗಲೆಯನ್ನು ಮಾರಾಟಕ್ಕೆ ಇಡಲಾಗಿತ್ತಾದರೂ ಕಮಿಷನರ್ ಕಚೇರಿಯಾಗಿಯೆ ಮುಂದುವರೆದಿತ್ತು. ಪ್ರತಿ ತಿಂಗಳು 2 ನೂರು ರೂಪಾಯಿಗಳ ಬಾಡಿಗೆಯನ್ನು ಮೈಸೂರು ಸಂಸ್ಥಾನ ಭರಿಸುತ್ತಿತ್ತು. ಸರ್ ಕಬ್ಬನ್ ನಂತರದ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡ ಲೆವಿನ್ ಬೆಂಥಮ್ ಕಟ್ಟಡವನ್ನು ನವೆಂಬರ್ 13, 1862ರಲ್ಲಿ ಸರ್ಕಾರದ ಅನುದಾನದಿಂದ ಖರೀದಿಸುವ ಮೂಲಕ ಅಧಿಕೃತವಾಗಿ ಕಮೀಷನರ್ ಕಚೇರಿಯನ್ನಾಗಿ ಮಾಡಿದರು. ಅಂದಿನಿಂದ ಇಂದಿನವರೆಗೆ ಇಂಗ್ಲೆಂಡಿನ ರಾಜಕುಮಾರ ಸೇರಿದಂತೆ ಹಲವು ಗಣ್ಯರು ಈಗಿನ ರಾಜಭವನದಲ್ಲಿ ವಾಸ್ತವ್ಯ ಮಾಡಿದ್ದಾರೆ.

PM Modi in Karnataka: ರಾಜಭವನ ತಲುಪಿದ ಮೋದಿ

ಕುದುರೆ ವ್ಯಾಪಾರಿ ಇರಾನಿನ ಅಗಾ ಅಲಿ ಅಸ್ಕರ್ ಖರೀದಿಗೆ ಮುಂದಾಗಿದ್ದರು

ಕುದುರೆ ವ್ಯಾಪಾರಿ ಇರಾನಿನ ಅಗಾ ಅಲಿ ಅಸ್ಕರ್ ಖರೀದಿಗೆ ಮುಂದಾಗಿದ್ದರು

ಸರ್ ಮಾರ್ಕ್‌ ಕಬ್ಬನ್ ಬಂಗಲೆಯನ್ನು ತೊರೆದ ಬಳಿಕ ಕಮೀಷನರ್ ವಿಲಿಯಂ ಬೆಂಥಮ್ 1860ರಲ್ಲಿ ಬಂಗಲೆ ಖರೀದಿ ಮಾಡದೆ ಇದ್ದಿದ್ದರೆ ಇವತ್ತು ರಾಜಭವನ ಖಾಸಗಿಯವರ ಪಾಲಾಗಿರುತ್ತಿತ್ತು. ಬ್ರಿಟಿಷ್ ಸೇನೆ ಹಾಗೂ ಮೈಸೂರು ಅರಮನೆಗೆ ಪರ್ಶಿಯನ್ ಕುದುರೆಗಳನ್ನು ಸರಬರಾಜು ಮಾಡುತ್ತಿದ್ದ ಇರಾನ್ ಮೂಲದ ಕುದುರೆ ವ್ಯಾಪಾರಿ ಅಗಾ ಅಲಿ ಅಸ್ಕರ್, ಆಗಿನ ಕಾಲದಲ್ಲೆ 28 ಸಾವಿರ ರೂಪಾಯಿಗಳಿಗೆ ಬಂಗಲೆ ಖರೀದಿಗೆ ಮುಂದಾಗಿದ್ದರಂತೆ.

ಆದರೆ ಆಗ ಕಮೀಷನರ್ ಆಗಿದ್ದ ವಿಲಿಯಂ ಬೆಂಥಮ್ ಸರ್ಕಾರದ ಅನುದಾನದಲ್ಲಿ ಬಂಗಲೆ ಖರೀದಿಸಿ ಕಮೀಷನರ್ ಕಚೇರಿಯನ್ನಾಗಿ ಪರಿವರ್ತಿಸಿದ ಬಳಿಕ ಅಂದಿನಿಂದ ರೂಪಾಂತರಗೊಂಡು ಈಗ ರಾಜಭವನವಾಗಿದೆ. ಮುಂದೆ ಅಗಾ ಅಲಿ ಅಸ್ಕರ್ ಅವರ ಮೊಮ್ಮಗ ಸರ್ ಮಿರ್ಜಾ ಇಸ್ಮಾಯಿಲ್ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದ್ದು ಇತಿಹಾಸ.

1881ರಲ್ಲಿ ಪ್ರಾಂತೀಯ ಅಧಿಕಾರವನ್ನು ಮೈಸೂರು ರಾಜಮನೆತನಕ್ಕರ ಹಸ್ತಾಂತರಿಸಿದಾಗ, ಕಮೀಷನರ್ ಕಚೇರಿ ರದ್ದುಪಡಿಸಾಯ್ತು. ನಂತರ ಈ ಬಂಗಲೆಗೆ 'ಬೆಂಗಳೂರು ರೆಸಿಡೆನ್ಸಿ' ಎಂದು ಕರೆಯಲಾಯಿತು. ಭಾರತಕ್ಕೆ ಸ್ವಾತಂತ್ರ ಬಂದ ಬಳಿಕ 'ಬೆಂಗಳೂರು ರೆಸಿಡೆನ್ಸಿ'ಯನ್ನೂ ರದ್ದುಗೊಳಿಸಿ 'ರಾಜಭವನ' ಎಂದು ನಾಮಕರಣ ಮಾಡಲಗಿದೆ.

ಭಲಾ, ರಾಜಭವನಕ್ಕೆ 4 ಕೋಟಿ ಖರ್ಚು ಮಾಡಿದ ವಾಲಾ!

ಇತ್ತೀಚಿನವರೆಗೆ ಒಂದೇ ಅಂತಸ್ತಿನ ಕಟ್ಟಡವಾಗಿತ್ತು ರಾಜಭವನ

ಇತ್ತೀಚಿನವರೆಗೆ ಒಂದೇ ಅಂತಸ್ತಿನ ಕಟ್ಟಡವಾಗಿತ್ತು ರಾಜಭವನ

ಮುಂದೆ ಬ್ರಿಟಿಷ್ ಆಡಳಿತದ ಕಾಲದಿಂದಲೂ ಅನೇಕ ಗಣ್ಯರು ಈಗಿನ ರಾಜಭವನದಲ್ಲಿ ಬೆಂಗಳೂರಿಗೆ ಬಂದಾಗ ವಾಸ್ತವ್ಯ ಮಾಡಿದ್ದಾರೆ. ಸರ್ ಮಾರ್ಕ್‌ ಕಬ್ಬನ್ ಕಮಿಷನರ್ ಆಗಿದ್ದಾಗ ಲಾರ್ಡ್‌ ಮೆಕಾಲೆ ಇಲ್ಲಿ 3 ದಿನಗಳ ಕಾಲ ಅತಿಥಿಯಾಗಿ ವಾಸ್ತವ್ಯ ಮಾಡಿದ್ದರಂತೆ. ಬೌರಿಂಗ್ ರೆಸಿಡೆಂಟ್ ಆಗಿದ್ದಾಗ 1868ರ ಡಿಸೆಂಬರ್ ಮೊದಲ ವಾರದಲ್ಲಿ ಶೃಂಗೇರಿ ಶಾರದಾ ಪೀಠದ ಶ್ರೀ ಸಚ್ಚಿದಾನಂದ ಶಿವಾಭಿನವನರಸಿಂಹ ಭಾರತೀ ತೀರ್ಥ ಸ್ವಾಮೀಜಿ ಭೇಟಿ ಕೊಟ್ಟಿದ್ದರಂತೆ. ನಂತರ 1889 ಹಾಗೂ 1909ರಲ್ಲಿ ವೇಲ್ಸ್ ರಾಜಕುಮಾರರು ಬೆಂಗಳೂರಿಗೆ ಪ್ರವಾಸ ಬಂದಾಗ ಆಗ ರೆಸಿಡೆನ್ಸಿ ಆಗಿದ್ದ ಈಗಿನ ರಾಜಭವನದಲ್ಲಿ ವಾಸ್ತವ್ಯ ಮಾಡಿದ್ದರಂತೆ.

ನಂತರ ಭಾರತ ಸ್ವತಂತ್ರವಾದ ಬಳಿಕ ರಾಜ್ಯಪಾಲರ ಭವನ ಎಂದು ಬದಲಾಗಿ 'ರಾಜಭವನ'ವಾಗಿ ಮಾರ್ಪಾಡಾಗಿದೆ. ಮುಂದೆ 1967ರಲ್ಲಿ ವಿ.ವಿ. ಗಿರಿ ಹಾಗೂ ಜಿ.ಎಸ್. ಪಾಠಕ್ ಅವರುಗಳು ರಾಜ್ಯಪಾಲರಾಗಿದ್ದಾಗ ರಾಜಭವನದಲ್ಲಿ ಮೊದಲ ಮಹಡಿ ನಿರ್ಮಾಣ ಮಾಡಲಾಗಿದೆ. ಅಲ್ಲಿಯವರೆಗೆ ಒಂದೆ ಅಂತಸ್ತಿನ ಕಟ್ಟಡವಾಗಿದ್ದ ರಾಜಭವನವನ್ನು ನವೀಕರಣ ಗೊಳಿಸಿದ್ದು ಗೊತ್ತಾಗದ ಹಾಗೇ ಎರಡನೇ ಅಂತಸ್ತು ನಿರ್ಮಾಣ ಮಾಡಲಾಗಿದೆ. 1994-95ರಲ್ಲಿ ಖುರ್ಷಿದ್ ಆಲಂಖಾನ್ ರಾಜ್ಯಪಾಲರಾಗಿದ್ದಾಗ ಆರ್‌ಸಿಸಿ ಛಾವಣಿಯನ್ನು ಹಾಕಲಾಗಿದೆ. ಒಟ್ಟಾರೆ ಮೂಲ ಕಟ್ಟಡಕ್ಕೆ ಒಂಚೂರು ದಕ್ಕೆ ಆಗದಂತೆ ಇಲ್ಲಿಯವರೆಗೆ ನವೀಕರಣ ಮಾಡಲಾಗಿದೆ.

ನೆರೆ ಪರಿಹಾರ ಬಂದಿಲ್ಲ: ಮೋದಿ ಎದುರೇ ಯಡಿಯೂರಪ್ಪ ಅಸಮಾಧಾನ

ಸಾರ್ವಜನಿಕರ ವೀಕ್ಷಣೆಗೆ ರಾಜಭವನಕ್ಕೆ ಪ್ರವೇಶವಿದೆ

ಸಾರ್ವಜನಿಕರ ವೀಕ್ಷಣೆಗೆ ರಾಜಭವನಕ್ಕೆ ಪ್ರವೇಶವಿದೆ

92.3 ಎಕರೆ ಭೂಮಿಯಲ್ಲಿ ರಾಜಭನವ ವಿಶಾಲವಾಗಿ ಹರಡಿಕೊಂಡಿದೆ. ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳು ಸಾಮಾನ್ಯವಾಗಿ ಪ್ರಮಾಣವಚನ ಸ್ವೀಕರಿಸುವ ಸಂಪ್ರದಾಯವಿದೆ. ಆದರೆ ಸಾಮಾನ್ಯರಿಗೆ ದೂರವಾಗಿದ್ದ ರಾಜಭವನಕ್ಕೆ ಜನಸಾಮಾನ್ಯರಿಗೆ ಪ್ರವೇಶ ಕಲ್ಪಸಿದ್ದು ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಅವರು. 1999-2002ರ ಅವಧಿಯಲ್ಲಿ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಅವರು ಮೊದಲ ಬಾರಿ ರಾಜಬವನಕ್ಕೆ ಜನಸಾಮನ್ಯರಿಗೆ ಪ್ರವೇಶ ಕೊಟ್ಟಿದ್ದರು.

ಎಸ್. ರಮಾದೇವಿ ಅವರು ಸಾಮಾನ್ಯರಿಗೆ ಪ್ರವೇಶ ಕೊಡುವವರೆಗೆ ಸಮುದ್ರ ಮಟ್ಟದಿಂದ 3,031 ಅಡಿ ಎತ್ತರದಲ್ಲಿರುವ ರಾಜಭವನಕ್ಕೆ ಜನಸಾಮನ್ಯರೂ ಪ್ರವೇಶ ಸಿಕ್ಕಿರಲೇ ಇಲ್ಲ. ಅದಾದ ಬಳಿಕ ರಾಜ್ಯಪಾಲರಾದ ವಜೂಬಾಯಿ ವಾಲಾ ಅವರು ಅಧಿಕಾರವಹಿಸಿಕೊಂಡ ಬಳಿಕ 2018ರಲ್ಲಿ ಮತ್ತೊಮ್ಮೆ ಸಾರ್ವಜನಿಕರಿಗೆ ರಾಜಭವನದ ಬಾಗಿಲನ್ನು ತೆರೆದಿದ್ದರು. ಇವತ್ತು ಪ್ರಧಾನಿ ಮೋದಿ ರಾಜಭವನದಲ್ಲಿ ವಾಸ್ತವ್ಯ ಮಾಡಿದ್ದಾರೆ, ಗಣ್ಯರು ರಾಜಭವನದಲ್ಲಿ ವಾಸ್ತವ್ಯ ಮಾಡಿರುವ ಸಂದರ್ಭಗಳಲ್ಲಿ ಅತ್ಯಂತ ಹೆಚ್ಚಿನ ಭದ್ರತೆಯನ್ನು ರಾಜಭನವನಕ್ಕೆ ಒದಗಿಸಲಾಗಿರುತ್ತದೆ.

English summary
What is the secrete behind prime minister narendra modi's stay in rajabhavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X