• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವರಮಹಾಲಕ್ಷ್ಮಿ ಹಬ್ಬ: ಹೂ, ಹಣ್ಣುಗಳ ಬೆಲೆ ಏರಿಕೆ

By Ashwath
|

ಬೆಂಗಳೂರು,ಆ.6: ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನೇನು ಎರಡು ದಿನ ಇರುವಾಗಲೇ ಕೆ.ಆರ್‌.ಮಾರುಕಟ್ಟೆ ಗ್ರಾಹಕರಿಂದ ಗಿಜಿಗಿಡುತ್ತಿದೆ. ಹೂವು, ಹಣ್ಣಿನ ಬೆಲೆಗಳು ಗಗನಕ್ಕೇರಿದ್ದರೂ ಖರೀದಿ ಜೋರಾಗಿಯೇ ನಡೆಯುತ್ತಿದೆ.

ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಏರಿದ್ದ ತರಕಾರಿ ಬೆಲೆ ಈಗ ಕಡಿಮೆಯಾಗಿದೆ. ಆದರೆ ಹೂವು ಹಣ್ಣುಗಳ ಬೆಲೆ ತುಂಬಾ ಏರಿಕೆಯಾಗಿದೆ.

ಕೆ.ಆರ್‌ ಮಾರುಕಟ್ಟೆಯಲ್ಲಿ ಕೆ.ಜಿ ಮಲ್ಲಿಗೆ ಮೊಗ್ಗಿಗೆ 500 ರೂ., ಕನಕಾಂಬರ 800 ರೂ, ಬಿಡಿ ಸೇವಂತಿಗೆ 350 ರೂ. ಇದೆ. ಇನ್ನು ಒಂದು ಮಾರು ಮಿಕ್ಸೆಡ್‌ ಸೇವಂತಿಗೆ-150 ರೂ, ಗುಂಡು ಮಲ್ಲಿಗೆ 50 ರೂ., ಕಾಕಡ ಮಲ್ಲಿಗೆ 60 ರೂ., ಚೆಂಡು ಹೂ 50 ರೂ. , ಕಣಗಿಲೆ 40 ರೂ., ತುಳಸಿ 20 ರೂ.ಇದೆ.[ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ ಹೇಗೆ?]

ಇನ್ನು ಜೋಡಿ ತಾವರೆಗೆ 40 ರೂ, ಜೋಡಿ ಸಣ್ಣ ಬಾಳೆಗಿಡಕ್ಕೆ 30 ರೂ., ಸುಗಂಧರಾಜ ಸಣ್ಣ ಮಾಲೆ 40 ರೂ. ಇದೆ. ಒಂದು ಗುಲಾಬಿ 8-10 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ.

ನೂರು ವೀಳ್ಯದೆಲೆಗೆ 40 ರೂ., ಒಂದು ಸಣ್ಣ ತೆಂಗಿನಕಾಯಿಗೆ 25 ರೂ., ಒಂದು ದೊಡ್ಡ ತೆಂಗಿನಕಾಯಿಗೆ 30 ರೂ., ಒಂದು ಬಾಳೆ ಎಲೆಗೆ 3 ರೂ. ಇದೆ.

ಹಬ್ಬದ ಹಿನ್ನಲೆಯಲ್ಲಿ ಬಾಳೆಹಣ್ಣಿನ ದರ ಗಗನಕ್ಕೇರಿದೆ. ಈಗ ಏಲಕ್ಕಿ ಬಾಳೆಹಣ್ಣಿಗೆ ಕೆ.ಜಿ. 70 ರೂ. ಇದೆ. ಅದರೆ ಹಬ್ಬದ ಸಮಯದಲ್ಲಿ ಹಣ್ಣಾಗಲಿರುವ ಏಲಕ್ಕಿ ಬಾಳೆಕಾಯಿ ಕೆ.ಜಿ.ಗೆ 100 ರೂ. ಇದೆ. ಪಚ್ಚೆಬಾಳೆ 40 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.[ದುಡ್ಡಿನ ದೇವತೆಗೆ ಶೃಂಗಾರ ಮಾಡುವ ಪರಿ ಹೀಗೆ]

ಕೆ.ಜಿ. ಸೇಬಿಗೆ 150 ರೂ., ಶಿಮ್ಲಾ ಸೇಬು 120 ರೂ., ಮೂಸಂಬಿ 50 ರೂ. ಕಿತ್ತಾಳೆ 100 ರೂ., ದಾಳಿಂಬೆ 80 ರೂ., ದ್ರಾಕ್ಷಿ 100 ರೂ., ಸಪೋಟ 80 ರೂ.ಗೆ ಏರಿದೆ.

ಹಬ್ಬದ ಎರಡು ದಿನಗಳ ಹಿಂದೆ ಇಷ್ಟು ಬೆಲೆಯಿದ್ದರೂ. ಬುಧವಾರ ಮತ್ತು ಗುರುವಾರ ಹೂ ಮತ್ತು ಹಣ್ಣುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ ಬೀನ್ಸ್‌ 54 ರೂ. ಬೀಟ್‌ರೋಟ್‌ 40ರೂ. ಕ್ಯಾಬೇಜ್‌ 19 ರೂ., ಮೂಲಂಗಿ 18, ಟೊಮೆಟೋ 55 ರೂ.,ಈರುಳ್ಳಿ 36 ರೂ. ,ಆಲೂಗೆಡ್ಡೆ 38. ರೂ ಇದೆ.[ಬುಧವಾರದ ಹಾಪ್‌ಕಾಮ್ಸ್‌ ಬೆಲೆಯನ್ನು ತಿಳಿಯಲು ಕ್ಲಿಕ್‌ ಮಾಡಿ:ಹಾಪ್‌ಕಾಮ್ಸ್‌ ಬೆಲೆ]

ಬೆಲೆ ಏರಿಕೆ ಮಧ್ಯೆ ವ್ಯಾಪಾರ ಹೇಗಿದೆ?

"ಬೆಲೆ ಯಾವ ವರ್ಷ ಇಳಿದಿಲ್ಲ ಹೇಳಿ?. ಪ್ರತಿ ವರ್ಷವೂ ಬೆಲೆ ಏರಿಕೆ ಆಗುತ್ತಲೇ ಇದೆ. ಹಾಗೆಂದು ಜನ ಬರೋದು ಕಡಿಮೆಯಾಗಿಲ್ಲ. ನಮ್ಮ ವ್ಯಾಪಾರ ಏನು ಕಡಿಮೆಯಾಗಿಲ್ಲ. ಎಲ್ಲಾ ಬೆಲೆ ಏರಿಕೆಯಾಗುತ್ತಿರುವಾಗ ಹೂವು, ಹಣ್ಣಿನ ಬೆಲೆಯೂ ಏರಿಕೆ ಆಗುತ್ತೆ"

- ಕಮಲಮ್ಮ, ಹೂ ಮಾರಾಟ ಮಾಡುವ ವ್ಯಾಪಾರಿ

ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಪ್ರಕಟವಾದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್‌ ಮಾಡಿ: ವರಮಹಾಲಕ್ಷ್ಮಿ ಹಬ್ಬ

English summary
The devout and the general public shopping traditional items on the eve of Varamahalakshmi puja in the city were in for a shock as there was a steep increase in the price of flowers and fruits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more