ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ, ಪಾತಾಳಕ್ಕಿಳಿದ ಟೊಮೆಟೋ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಗೌರಿ-ಗಣೇಶ ಹಬ್ಬ ಹಾಗೂ ವರಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿ ಹೆಚ್ಚಾಗಿದ್ದ ತರಕಾರಿ ಬೆಲೆ ಈಗ ಕೊಂಚ ಕಡಿಮೆಯಾಗಿದೆ.

Recommended Video

ಭಾರತದಾದ್ಯಂತ ಜೂನ್ 1 ರಿಂದ 10 ರವರೆಗೆ ಹಾಲು ಮತ್ತು ತರಕಾರಿಗಳನ್ನು ನಗರಗಳಿಗೆ ತರದಂತೆ ನಿರ್ಧಾರ | Oneindia Kannada

ಆದರೆ ಈರುಳ್ಳಿ ಬೆಲೆ ಮಾತ್ರ ಗಗನಕ್ಕೇರಿದ್ದು, ಟೊಮೆಟೋ ಬೆಲೆ ಪಾತಾಳಕ್ಕೆ ಕುಸಿದಿದೆ.ಟೊಮೆಟೋ ಈಗ ಸಗಟು ಖರೀದಿಸಿದರೆ 6-8 ರೂಗೆ ಲಭ್ಯವಾಗಲಿದೆ. ಬಹುತೇಕ ತರಕಾರಿ ಬೆಲೆಯಲ್ಲಿ ಶೇ.20ರಷ್ಟು ಕಡಿಮೆಯಾಗಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ವಿವಿಧ ರೀತಿಯ ತರಕಾರಿಗಳನ್ನು ಸಾಕಷ್ಟು ಬೆಳೆಯಲಾಗಿದೆ.

ನಾಡಿನ ಸಮಸ್ತ 'ಈರುಳ್ಳಿ' ಬಳಕೆದಾರರಿಗೆ ಮಹಾರಾಷ್ಟ್ರದಿಂದ ಶಾಕಿಂಗ್ ನ್ಯೂಸ್!ನಾಡಿನ ಸಮಸ್ತ 'ಈರುಳ್ಳಿ' ಬಳಕೆದಾರರಿಗೆ ಮಹಾರಾಷ್ಟ್ರದಿಂದ ಶಾಕಿಂಗ್ ನ್ಯೂಸ್!

ಕೆಲವೆಡೆ ಉತ್ತಮ ಮಳೆಯಾಗಿದೆ, ಇನ್ನೂ ಕೆಲವೆಡೆ ಮಳೆ ಹೆಚ್ಚಾಗಿ ಬೆಳೆ ಸಂಪೂರ್ಣ ನಾಶವಾಗಿದೆ. ಕೊಳೆತು ಹೋಗಿವೆ.

 ಕಲಾಸಿಪಾಳ್ಯದ ಮಾರುಕಟ್ಟೆಗೆ ಎಲ್ಲೆಲ್ಲಿಂದ ತರಕಾರಿ ಬರುತ್ತೆ

ಕಲಾಸಿಪಾಳ್ಯದ ಮಾರುಕಟ್ಟೆಗೆ ಎಲ್ಲೆಲ್ಲಿಂದ ತರಕಾರಿ ಬರುತ್ತೆ

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾಸಿಪಾಳ್ಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಸೇರಿದಂತೆ ತರಕಾರಿ, ಸೊಪ್ಪು ಆವಕ ಆಗುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ.

ಕೆಲವು ದಿನಗಳ ಹಿಂದಷ್ಟೇ ಬೆಲೆ ಏರಿಕೆಯಿಂದ ಕೆಂಗೆಟ್ಟಿದ್ದ ಟೊಮೆಟೋ ಸಗಟು ದರ ಕೆಜಿಗೆ 6-8 ರೂಗೆ ಬಂದು ತಲುಪಿದೆ.

 ಪ್ರಸ್ತುತ ಈರುಳ್ಳಿ ಬೆಲೆ ಎಷ್ಟಿದೆ?

ಪ್ರಸ್ತುತ ಈರುಳ್ಳಿ ಬೆಲೆ ಎಷ್ಟಿದೆ?

ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಯನ್ನೇ ನೆಪವಾಗಿಷ್ಟುಟಕೊಂಡು ವರ್ತಕರು ಸಾಸ್ತಾನುಗಾರರು ಈರುಳ್ಳಿಗೆ ಬೇಡಿಕೆ ಸೃಷ್ಟಿಸಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ದಪ್ಪ ಗಾತ್ರದ ಈರುಳ್ಳಿ ಕೆಜಿ 27-30, ಹೊಸ ಈರುಳ್ಳಿ ಕೆಜಿ 27-28 ನಿಗದಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 45-50ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

ಕೆಜಿ ಈರುಳ್ಳಿಗೆ 1 ರೂ.! ಬೆಳೆದವರ ಕಣ್ಣೀರು ಕೇಳೋರ್ಯಾರು?ಕೆಜಿ ಈರುಳ್ಳಿಗೆ 1 ರೂ.! ಬೆಳೆದವರ ಕಣ್ಣೀರು ಕೇಳೋರ್ಯಾರು?

 ಹೊಸ ಬೆಳೆ ಬರುವವರೆಗೂ ದರ ಏರಿಕೆ

ಹೊಸ ಬೆಳೆ ಬರುವವರೆಗೂ ದರ ಏರಿಕೆ

ಕರ್ನಾಟಕದಲ್ಲಿ ಹೊಸ ಬೆಳೆ ಬರುವವರೆಗೂ ದರ ಏರಿಕೆಯತ್ತ ಸಾಗಲಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬೆಳೆ ಕಟಾವಿದೆ ಬರುವುದರಿಂದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಸದ್ಯ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದೆ. ಎಪಿಎಂಸಿಗೆ ಶುಕ್ರವಾರ 150 ಲೋಡ್, ಶನಿವಾರ 200 ಲೋಡ್ ಈರುಳ್ಳಿ ಬಂದಿದೆ.

 ಉಳಿದ ತರಕಾರಿ ಬೆಲೆ ಎಷ್ಟಿದೆ?

ಉಳಿದ ತರಕಾರಿ ಬೆಲೆ ಎಷ್ಟಿದೆ?

ಬೀನ್ಸ್‌-25-40, ಕ್ಯಾರೇಟ್ 25-32 ರೂ., ಬೀಟ್ರೋಟ್ 22-26 ರೂ, ಬೆಂಡೇಕಾಯಿ 16-22 ರೂ. ನವಿಲುಕೋಸು 10-16 ರೂ, ಹೀರೇಕಾಯಿ 22-26 ರೂ. ಮೂಲಂಗಿ 10-14 ರೂಗೆ ಮಾರಾಟವಾಗುತ್ತಿದೆ.

English summary
Vegetable prices, which have gone up during the Gauri-Ganesha and Varamahalakshmi festivals, have come down slightly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X