ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಪುನರ್ಜನ್ಮ ನೀಡಿದ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

|
Google Oneindia Kannada News

ಬೆಂಗಳೂರು, ಜೂನ್ 2: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಸಮಾಜವನ್ನು ಕಾಡಿದ ನಂತರ ಗುಣಮಟ್ಟದ ಆಸ್ಪತ್ರೆಗಳ ಅಗತ್ಯ ಹೆಚ್ಚಾಗಿದೆ ಎಂದು ಉನ್ನತ ಶಿಕ್ಷಣ ಸಚಿವರ ಡಾ. ಸಿ. ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಲ್ಯ ಆಸ್ಪತ್ರೆಯನ್ನು ಉತ್ಕೃಷ್ಟ ಮಟ್ಟದಲ್ಲಿ ನವೀಕರಿಸಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ದಿಪಡಿಸಲಾಗಿದ್ದು, ನಗರದ ಹೃದಯ ಭಾಗದಲ್ಲಿ ಈ ಆಸ್ಪತ್ರೆ ತಲೆ ಎತ್ತಿರುವುದು ಬಹಳ ಸಂತಸದ ವಿಷಯ ಎಂದರು.

ಬಜೆಟ್ 2022: ಕೇಂದ್ರ ಸರ್ಕಾರ ಘೋಷಿಸಿದ ಪ್ರಮುಖ ಅಂಶಗಳ ಪಟ್ಟಿ ಬಜೆಟ್ 2022: ಕೇಂದ್ರ ಸರ್ಕಾರ ಘೋಷಿಸಿದ ಪ್ರಮುಖ ಅಂಶಗಳ ಪಟ್ಟಿ

ಮೂರು ದಶಕಗಳಿಂದ ಬೆಂಗಳೂರಿನ ಹೃದಯಭಾಗದಲ್ಲಿ ಹೆಲ್ತ್‌ಕೇರ್ ಹೆಗ್ಗುರುತಾಗಿರುವ ಮಲ್ಯ ಆಸ್ಪತ್ರೆಯು ತನ್ನೆಲ್ಲ ಪಂಚತಾರಾ ಸೇವೆಗಳನ್ನು ಇದೇ ಜೂನ್ 2 ರಿಂದ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (VSH) ಹೆಗಲಿಗೆ ವಹಿಸಲಾಗಿದೆ. ಈ ಮೂಲಕ ವೈದೇಹಿ ಆಸ್ಪತ್ರೆಯು ಆರೋಗ್ಯ ಸೇವೆ ನೀಡುವ ತನ್ನ ಕಾರ್ಯವನ್ನು ವಿಸ್ತರಿಸಿಕೊಂಡಿದೆ. ವೈದೇಹಿ ಆಸ್ಪತ್ರೆಯು ಈಗ 'ವೈದೇಹಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್' ಆಗಿ ಪುನರ್ಜನ್ಮ ಪಡೆದುಕೊಳ್ಳುತ್ತಿದೆ. ದಿವಂಗತ ಡಾ ಡಿ.ಕೆ. ಆದಿಕೇಶವುಲು ಅವರ ಮಾರ್ಗದರ್ಶನದಲ್ಲಿ ಹಾಗೂ ಅವರ ಮೌಲ್ಯಗಳ ಆಧಾರದ ಮೇಲೆ ಡಾಲ್ವಕೋಟ್ ಈ ಆಸ್ಪತ್ರೆಯನ್ನು ನಿರ್ವಹಿಸಲಿದೆ.

ಮಲ್ಯ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿದ ಸಚಿವ ಅಶ್ವತ್ಥ ನಾರಾಯಣ

ಮಲ್ಯ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿದ ಸಚಿವ ಅಶ್ವತ್ಥ ನಾರಾಯಣ

ನೂತನ ಆಸ್ಪತ್ರೆಯನ್ನು ಉದ್ಘಾಟಿಸಿ ಸಚಿವ ಡಾ. ಸಿ.ಎನ್‌ ಅಶ್ವತ್ಥ ನಾರಾಯಣ, ಕೊರೊನಾವೈರಸ್ ಸಾಂಕ್ರಾಮಿಕ ರೋಗ ಸಮಾಜವನ್ನು ಕಾಡಿದ ನಂತರ ಗುಣಮಟ್ಟದ ಆಸ್ಪತ್ರೆಗಳ ಅಗತ್ಯ ಹೆಚ್ಚಾಗಿದೆ. ಬೆಂಗಳೂರು ನಗರದ ಜನರಿಗೆ ಇಂತಹ ಆಸ್ಪತ್ರೆಗಳ ಅಗತ್ಯ ಇನ್ನೂ ಹೆಚ್ಚಿದೆ ಎಂದರು.

ನಗರದ ಹೃದಯ ಭಾಗದಲ್ಲಿ ಈ ಆಸ್ಪತ್ರೆ ಪ್ರಾರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗಳ ಮತ್ತು ಇನ್ನಿತರ ಸೇವೆಗಳು ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು ಎನ್ನುವುದು ಪ್ರತಿಯೊಬ್ಬರ ನಿರೀಕ್ಷೆ. ವೈದೇಹಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯು ಇದನ್ನು ಸಾಕಾರಗೊಳಿಸಬೇಕಿದೆ. ಅದರ ಜೊತೆಯಲ್ಲೇ, ಸಂಶೋಧನೆಗೆ ಒತ್ತು ನೀಡುವ ಮೂಲಕ ವಿನೂತನ ಚಿಕಿತ್ಸಾ ಪದ್ದತಿಗಳನ್ನು ವೈದ್ಯಕೀಯ ಸಮುದಾಯ ಆವಿಷ್ಕರಿಸಬೇಕು ಎಂದು ಕರೆ ನೀಡಿದರು.

ಕೊರೊನಾವೈರಸ್ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ

ಕೊರೊನಾವೈರಸ್ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ

ಕೊರೊನಾವೈರಸ್ ರೀತಿಯ ಸಾಂಕ್ರಾಮಿಕ ಪಿಡುಗು ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಇಂದು ಅದು ಜಗತ್ತನ್ನೇ ಅಲ್ಲೋಲ-ಕಲ್ಲೋಲಗೊಳಿಸಿದೆ. ಇದರ ಜೊತೆ ಆಧುನಿಕ ಜೀವನ ಶೈಲಿ ಸಂಕೀರ್ಣತೆ ಮತ್ತು ಅದು ಸೃಷ್ಟಿಸುತ್ತಿರುವ ಆತಂಕ ಹಾಗೂ ಒತ್ತಡದಿಂದ ಹಲವು ಕಾಯಿಲೆಗಳು ಅಂಟಿಕೊಳ್ಳುತ್ತಿವೆ. ಅಂಥ ಕಾಯಿಲೆಗಳ ನಿವಾರಣೆಗೆ ವೈದ್ಯರು ಶ್ರಮಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಾ ಆರೋಗ್ಯ ವಲಯಕ್ಕೆ ಸಾಕಷ್ಟು ಮಹತ್ವ ಕೊಟ್ಟಿವೆ. ಇದರ ಜೊತೆ ಖಾಸಗಿ ಆಸ್ಪತ್ರೆಗಳು ಕೂಡಾ ಸಾಮಾಜಿಕ ಕಳಕಳಿಯೊಂದಿಗೆ ಕೈಜೋಡಿಸಿ ಜನಸಮುದಾಯಗಳ ಸಬಲೀಕರಣಕ್ಕೆ ಇಂಬು ನೀಡಬೇಕು ಎಂದು ಹೇಳಿದರು.

ಮಲ್ಯ ಆಸ್ಪತ್ರೆಗೆ ಹೊಸ ರೂಪ ನೀಡಿದ ವೈದೇಹಿ ಆಸ್ಪತ್ರೆ

ಮಲ್ಯ ಆಸ್ಪತ್ರೆಗೆ ಹೊಸ ರೂಪ ನೀಡಿದ ವೈದೇಹಿ ಆಸ್ಪತ್ರೆ

ನಗರದ ಮಲ್ಯ ಆಸ್ಪತ್ರೆಯಿಂದ ಒದಗಿಸಲಾದ ಸೂಪರ್‌ ಫೌಂಡೇಷನ್‌ನನ್ನು ನಿರ್ಮಿಸಿರುವ ವೈದೇಹಿ ಆಸ್ಪತ್ರೆಯು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೆ. ಸುಧಾರಿತ ತಂತ್ರಜ್ಞಾನ, ಉನ್ನತ ದರ್ಜೆಯ ಮೂಲಸೌಕರ್ಯ ಒದಗಿಸುವುದು, ಹೆಸರಾಂತ ವೈದ್ಯ ತಜ್ಞರ ತಂಡವನ್ನು ಪರಿಚಯಿಸುವುದು ಸೇರಿದಂತೆ ಹಲವು ಹೊಸ ಬದಲಾವಣೆ ಮಾಡಲು ಸನ್ನದ್ಧವಾಗಿದೆ.

ವೈದೇಹಿ ಆಸ್ಪತ್ರೆಯು ಹಿಂದಿನಿಂದಲೂ ಉತ್ತಮ ಆರೋಗ್ಯ ಸೇವೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಈಗ ಇದರ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಅಪಘಾತ ನಡೆದ ಸಂದರ್ಭದಲ್ಲಿ ಗೋಲ್ಡನ್‌ ಅವರ್‌ನಲ್ಲಿ ಅಪಘಾತಗೊಂಡ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಬದುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವೇಳೆಯಲ್ಲಿ ಒಂದು ನಿಮಿಷ ಕೂಡ ಹೆಚ್ಚು ಮುಖ್ಯವಾಗುತ್ತದೆ. ನಮ್ಮ ವೈದೇಹಿ ಆಸ್ಪತ್ರೆಯ ವೈದ್ಯರು ಇಂಥ ಟ್ರಾಮ್ ಪ್ರಕರಣಗಳನ್ನು ಅತ್ಯಂತ ಜಾಗರೂಕರಾಗಿ ನಿಭಾಹಿಸಿದ್ದಾರೆ. ವೈದೇಹಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯು ದೇಶಾದ್ಯಂತ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬರಿಗೂ ವಿಶೇಷ ಕಾಳಜಿ ವಹಿಸಿ ಸೇವೆ ಸಲ್ಲಿಸಲು ಬದ್ಧವಾಗಿದೆ. ಅದರಲ್ಲೂ ತುರ್ತು ಆರೈಕೆಗೆ ಆದ್ಯತೆ ನೀಡುವುದರಿಂದ ಹಿಡಿದು ಒಂದೇ ಸೂರಿನಡಿ 30+ ಸೂಪರ್-ಸ್ಪೆಷಾಲಿಟಿಗಳೊಂದಿಗೆ ವೈದ್ಯಕೀಯ ತುರ್ತು ಪ್ರಕರಣಗಳನ್ನು ನಿಭಾಯಿಸಲು ಸಿದ್ಧವಿದೆ ಎಂದರು.

ಕ್ರಿಟಿಕಲ್-ಕೇರ್ ಸೇವೆ:

ಕ್ರಿಟಿಕಲ್-ಕೇರ್ ಸೇವೆಗಳ ಸ್ಪೆಕ್ಟ್ರಮ್ ತುರ್ತು ಔಷಧಿ ಮತ್ತು ಆಘಾತ ಆರೈಕೆ, ಇಂಟರ್ವೆನ್ಷನಲ್ ಕಾರ್ಡಿಯಾಲಜಿ / ಟಿಎವಿಆರ್, ಅತ್ಯಾಧುನಿಕ ಹೃದಯ ಶಸ್ತ್ರಚಿಕಿತ್ಸೆಗಳು, ಪಾರ್ಶ್ವವಾಯು ನಿರ್ವಹಣೆ, ಹೈಪರ್‌ಬೇರಿಕ್ ಚೇಂಬರ್‌ನೊಂದಿಗೆ ಸುಧಾರಿತ ಗಾಯದ ಆರೈಕೆ, ಸೌಂದರ್ಯಶಾಸ್ತ್ರ, ಆರ್ಥೊಡಾಂಟಿಕ್ಸ್, ಜೆನೆಟಿಕ್ ಪ್ರೊಫೈಲಿಂಗ್, ಸುಧಾರಿತ ಐಸಿಯುಗಳು ಮತ್ತು ಇನ್ನೂ ಹೆಚ್ಚಿನ ಸೇವೆಯನ್ನು ನೀಡುತ್ತಿದೆ ಎಂದು ಆಸ್ಪತ್ರೆ ನಿರ್ವಹಣಾ ತಂಡ ಹೇಳಿದೆ.

'V' ಅಕ್ಷರದಿಂದ ಪ್ರೇರಿತಗೊಂಡ ಸಂಸ್ಥೆ

'V' ಅಕ್ಷರದಿಂದ ಪ್ರೇರಿತಗೊಂಡ ಸಂಸ್ಥೆ

ಮಲ್ಯ ಆಸ್ಪತ್ರೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಬಳಿಕವೂ ವೈದೇಹಿ ಆಸ್ಪತ್ರೆಯು ತನ್ನ ಹೆಸರನ್ನು ವೈದೇಹಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿಯೇ ಮುಂದುವರೆಸಲಿದ್ದು, 'V' ಅಕ್ಷರದಿಂದ ಸಂಸ್ಥೆಯು ಪ್ರೇರಿತವಾಗಿದೆ ಎಂದು ವಿವರಿಸಿದೆ. ಈ 'V' ಆಕಾರವು ಗಡಿಯಾರದ ಮುಳ್ಳುಗಳಂತೆ ವಿನ್ಯಾಸಗೊಳಿಸಲಾಗಿದೆ. ಯಾವುದೇ ತುರ್ತುಸ್ಥಿತಿ ಮತ್ತು ಆಘಾತಕ್ಕೆ ಸನ್ನದ್ಧತೆಯ ಭಾವವನ್ನು ಬಲವಾಗಿ ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಮಳೆಬಿಲ್ಲು ಕ್ರಿಟಿಕಲ್-ಕೇರ್ ಸೇವೆಗಳು ಮತ್ತು ಒದಗಿಸಿದ ವಿಶೇಷತೆಗಳ ವರ್ಣಪಟಲಕ್ಕೆ ಒಂದು ರೂಪಕವಾಗಿದೆ.

ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಅಸ್ಕರ್ ISO 9001:2008 ಪ್ರಮಾಣೀಕರಣವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಾನವ ಸ್ಪರ್ಶದೊಂದಿಗೆ ಗುಣಮಟ್ಟದ ರೋಗಿಗಳ ಆರೈಕೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯ ರಕ್ಷಣೆ ನೀಡವುದು ಮತ್ತು ತ್ವರಿತ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ.

English summary
Bengaluru Prestigious Mallya Hospital is now a Vaidehi Super Specialty Hospital, says Minister CN Ashwaththa Narayana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X