ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರುː ರಾಷ್ಟ್ರಪತಿ ಬರುವ ದಾರಿ ಸುಗಮವಾಗಿರಲಿ

|
Google Oneindia Kannada News

ಬೆಂಗಳೂರು, ನ. 24: ನಗರದ ಮಲ್ಲೇಶ್ವರಂ ಬಳಿಯ ಜೆಎನ್ ಟಾಟಾ ಆಡಿಟೋರಿಯಂ ನಲ್ಲಿ ನವೆಂಬರ್ 25 ರಂದು ಮೊದಲನೆ ಕಾಮನ್ ವೆಲ್ತ್ ಸೈನ್ಸ್ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸಲಿದ್ದು ಪೊಲೀಸ್ ಇಲಾಖೆ ಅನೇಕ ಸೂಚನೆಗಳನ್ನು ನೀಡಿದೆ.

ಸಂಜೆ ನಾಲ್ಕು ಗಂಟೆಗೆ ನಗರಕ್ಕೆ ಆಗಮಿಸಲಿರುವ ರಾಷ್ಟ್ರಪತಿಗಳು ಯಲಯಂಕ-ಬಿಎಸ್ಎಫ್-ಬಾಗಲೂರು ಕ್ರಾಸ್-ವೆಂಕಟಾಲ -ಕೋಗಿಲು ಕ್ರಾಸ್-ಕೆಂಪಾಪುರ ಕ್ರಾಸ್ - ಹೆಬ್ಬಾಳ ಮೇಲು ಸೇತುವೆ - ಸಿಬಿಐ- ಸಂಜಯನಗರ ಕ್ರಾಸ್ - ಮೇಕ್ರಿ ವೃತ್ತ ಅಪ್ -ಸಿ.ವಿ.ರಾಮನ್ ರಸ್ತೆ ಮೂಲಕ ಟಾಟಾ ಅಡಿಟೋರಿಯಂ ತಲುಪಲಿದ್ದಾರೆ.[ಅಗ್ನಿ-2 ಕ್ಷಿಪಣಿ ಯಶಸ್ಸಿಗೆ ರಾಷ್ಟ್ರಪತಿ ಅಭಿನಂದನೆ]

president

ಈ ವೇಳೆ ಭದ್ರತೆ ಮತ್ತು ಸಂಚಾರ ಹಿತದೃಷ್ಟಿ ಮುಖ್ಯವಾಗಿದ್ದು ನಾಗರಿಕರು ಬೇರೆ ಮಾರ್ಗದಲ್ಲಿ ಸಂಚರಿಸುವುದು ಒಳಿತು. ಅಲ್ಲದೇ ವಾಹನಗಳನ್ನು ಅಡ್ಡಾದಿಡ್ಡಿ ನಿಲುಗಡೆ ಮಾಡಬಾರದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಅನೇಕ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ವಿಮಾನ ನಿಲ್ದಾಣ ರಸ್ತೆಯೂದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗುವುದು. ಬೆಳಗ್ಗೆಯಿಂದಲೇ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

English summary
Bengaluru: President Pranab Mukherjee will inaugurate the First Commonwealth Science event at JN Tata auditorium on 25, November. Although Bengaluru Police also take some instruction on President way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X