• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಸಿಎಸ್ ಐಟಿ ಕ್ವಿಜ್ ಗೆದ್ದ ಪ್ರೆಸಿಡೆನ್ಸಿ ಶಾಲೆ ವಿದ್ಯಾರ್ಥಿಗಳು

By Mahesh
|

ಬೆಂಗಳೂರು, ಆಗಸ್ಟ್ 4, 2016: ಭಾರತದ ಅತ್ಯಂತ ದೊಡ್ಡ ಅಂತರ ಶಾಲಾ ಕ್ವಿಜ್ ಆಗಿರುವ ಟಿಸಿಎಸ್ ಐಟಿ ವಿಜ್ ನಲ್ಲಿ ಬೆಂಗಳೂರಿನ ಹಲವು ಶಾಲೆಗಳ ಸುಮಾರು 1000 ವಿದ್ಯಾರ್ಥಿಗಳು ಉತ್ಸಾಹ ಮತ್ತು ವಿಶ್ವಾಸದಿಂದ ಪಾಲ್ಗೊಂಡಿದ್ದರು. 5 ಸುತ್ತುಗಳ ನಂತರ ಪ್ರಾದೇಶಿಕ ಫೈನಲ್ಸ್ ನಲ್ಲಿ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಗಳಾದ ಸಮರ್ಥ್ ಡಿ ರಾಜು ಮತ್ತು ಸುಕೇತ್ ಕೆಎಸ್ ಅವರು ಪ್ರಶಸ್ತಿ ಗೆದ್ದರು.

ಈ ಪ್ರಾದೇಶಿಕ ಫೈನಲ್ ನಲ್ಲಿ ಗೆದ್ದ ತಂಡದ ವಿದ್ಯಾರ್ಥಿಗಳು ಐಪಾಡ್ ಏರ್ ಅನ್ನು ಬಹುಮಾನವಾಗಿ ಪಡೆದರು. ಅದೇರೀತಿ ದ್ವಿತೀಯ ಸ್ಥಾನ ಅಂದರೆ ರನ್ನರ್‍ಅಪ್ ಆದ ಶ್ರೀಕುಮಾರನ್ಸ್ ಚಿಲ್ಡರ್ನ್ಸ್ ಹೋಮ್ ಶಾಲೆಯ ವಿದ್ಯಾರ್ಥಿಗಳಾದ ವಲ್ಲಭ್ ರಾಮಕಾಂತ್ ಮತ್ತು ಮೋಹಿತ್ ದೋಶಿ ಅವರು ಐಪಾಡ್ ಮಿನಿಯನ್ನು ಬಹುಮಾನ ರೂಪದಲ್ಲಿ ಪಡೆದರು. ಇದರೊಂದಿಗೆ ವರ್ಣರಂಜಿತವಾದ ಟ್ರೋಫಿ ಮತ್ತು ಪದಕಗಳನ್ನೂ ಬಹುಮಾನ ವಿಜೇತರಿಗೆ ವಿತರಿಸಲಾಯಿತು.

ಅಲ್ಲದೇ, ಫೈನಲ್ ಗೆ ಅರ್ಹತೆ ಪಡೆದಿದ್ದ ಎಲ್ಲಾ 6 ತಂಡಗಳ ಸದಸ್ಯರಿಗೆ ಟಿಸಿಎಸ್ ವತಿಯಿಂದ ಸ್ಪೇಸ್ ಪ್ಯಾಕ್, ಸೆಲ್ಫಿ ಸ್ಟಿಕ್, ಇಯರ್ ಫೋನ್, ಬ್ಲೂಟೂತ್ ಸ್ಪೀಕರ್ ಗಳು ಮತ್ತು ಪೆನ್ ಡ್ರೈವ್ ಗಳನ್ನು ಬಹಮಾನವಾಗಿ ನೀಡಲಾಯಿತು.

Presidency schools win TCS IT Wiz 2016 – Bengaluru edition

ಮಾಹಿತಿ ತಂತ್ರಜ್ಞಾನ ಸೇವೆಗಳು, ಸಲಹೆಗಳು ಮತ್ತು ವ್ಯವಹಾರ ಪರಿಹಾರಗಳನ್ನು ಪೂರೈಕೆ ಮಾಡುತ್ತಿರುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಬೆಂಗಳೂರಿನ ವೈಯಾಲಿಕಾವಲ್ ನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಆಗಸ್ಟ್ 4 ಗುರುವಾರ ಆಯೋಜಿಸಿದ್ದ ಈ ಟಿಸಿಎಸ್ ಐಟಿ ವಿಜ್ಹ್ ವಿದ್ಯಾರ್ಥಿಗಳ ಜ್ಞಾನವನ್ನು ಹೊರೆಗೆ ಹಚ್ಚಿತು. 8 ರಿಂದ 12 ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಉಚಿತವಾಗಿ ಈ ಕ್ವಿಜ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಈ ವರ್ಷದ ಕ್ವಿಜ್‍ನ ವಿಷಯ DEFAULT IS DIGITAL. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಟ್ರೆಂಡ್ ಹೇಗಿದೆ ಎಂಬುದರ ಬಗ್ಗೆ ಈ ಕ್ವಿಜ್ ಕೇಂದ್ರೀಕೃತವಾಗಿತ್ತು. ವಿದ್ಯಾರ್ಥಿಗಳು ಇಲ್ಲಿ ಪಾಲ್ಗೊಂಡು ಮನನ ಮಾಡಿಕೊಂಡ ತಂತ್ರಜ್ಞಾನ ಟ್ರೆಂಡ್ ಮತ್ತು ವಿವಿಧ ತಂತ್ರಜ್ಞಾನಗಳ ಆಧಾರದಲ್ಲಿ ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಯಿತು. ಇಲ್ಲಿ ಸ್ಪರ್ಧಿಸಿದ್ದ ವಿದ್ಯಾರ್ಥಿಗಳ ತಂಡಗಳ ಪೈಕಿ ಮೊದಲ ಆರು ತಂಡಗಳು ಪ್ರಾದೇಶಿಕ ಫೈನಲ್ ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದವು.

ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಆರ್.ಹಿತೇಂದ್ರ ಮತ್ತು ಟಿಸಿಎಸ್‍ನ ಹೈಟೆಕ್ ಇಂಡಸ್ಟ್ರಿ ಸಲೂಶನ್ಸ್ ಯೂನಿಟ್‍ನ ಜಾಗತಿಕ ಮುಖ್ಯಸ್ಥರಾದ ನಾಗರಾಜ್ ಇಜಾರಿ ಅವರು ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು. ಈ ಕ್ವಿಜ್ ಅನ್ನು ದೇಶದ ಖ್ಯಾತ ಕ್ವಿಜ್ ಮಾಸ್ಟರ್ ಎನಿಸಿರುವ ಬಾಲಸುಬ್ರಮಣ್ಯನ್ ಅವರು ನಡೆಸಿಕೊಟ್ಟರು.

ಟಿಸಿಎಸ್ ವಿಜ್ಹ್ 2016 ದೇಶದ ಒಟ್ಟು 15 ಸ್ಥಳಗಳಲ್ಲಿ ನಡೆಯುತ್ತಿದೆ. ಅಹ್ಮದಾಬಾದ್, ಬೆಂಗಳೂರು, ಭುವನೇಶ್ವರ, ಚೆನ್ನೈ, ಕೊಯಮತ್ತೂರು, ದೆಹಲಿ, ಹೈದ್ರಾಬಾದ್, ಇಂದೋರ್, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ಪುಣೆ ಮತ್ತು ವಿಶಾಖಪಟ್ಟಣದಲ್ಲಿ ಈ ಕ್ವಿಜ್ ನಡೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata Consultancy Services (TCS), a leading IT services, consulting and business solutions firm, today jointly conducted Bengaluru edition of TCS IT Wiz 2016 – India’s largest technology quiz for schools. Presidency schools won the bengaluru edition and will compete in national level to be held at Mumbai

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more