ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಸಿಎಸ್ ಐಟಿ ವಿಜ್ 2019: ಆರ್. ಟಿ ನಗರದ ಪ್ರೆಸಿಡೆನ್ಸಿ ಶಾಲೆಗೆ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಆಗಸ್ಟ್ 8, 2019: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಜಾಗತಿಕವಾಗಿ ಮುಂಚೂಣಿಯಲ್ಲಿರುವ ಐಟಿ, ಕನ್ಸಲ್ಟಿಂಗ್ ಮತ್ತು ಬ್ಯುಸಿನೆಸ್ ಸಲ್ಯೂಷನ್ ಸೇವೆ ಒದಗಿಸುವ ಸಂಸ್ಥೆಯಾಗಿದ್ದು, ಭಾರತದ ಅತಿದೊಡ್ಡ ಅಂತರ ಶಾಲಾ ಟೆಕ್ನಾಲಜಿ ಕ್ವಿಜ್ ಸ್ಪರ್ಧೆ ವಿಜೇತರನ್ನು ಪ್ರಕಟಿಸಿದೆ.

ಆರ್ ಟಿ ನಗರದ ಪ್ರೆಸಿಡೆನ್ಸಿ ಶಾಲೆಗೆ ಸೇರಿದ ಅನನ್ಯ ಪಾಟಿಲ್ ಮತ್ತು ದಕ್ಷ ಶೆಟ್ಟರ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಲಿಟಿಲ್ ಫ್ಲವರ್ ಪಬ್ಲಿಕ್ ಶಾಲೆಯ ಶಶಾಂಕ್ ಶೆಣೈ ಮತ್ತು ಅನಿರುದ್ದ್ ಆರ್ ರನ್ನರ್ ಆಪ್ ಆಗಿದ್ದಾರೆ.

ಕರ್ನಾಟಕದ 64% ಶಾಲೆಗಳಲ್ಲಿ ಆಟದ ಮೈದಾನ, ದೇಶದಲ್ಲೇ ಅಧಿಕ!ಕರ್ನಾಟಕದ 64% ಶಾಲೆಗಳಲ್ಲಿ ಆಟದ ಮೈದಾನ, ದೇಶದಲ್ಲೇ ಅಧಿಕ!

ಈ ವರ್ಷ ಟಿಸಿಎಸ್ ಐಟಿ ವಿಜ್, ಬೆಂಗಳೂರು ಆವೃತ್ತಿಯಲ್ಲಿ 8 ರಿಂದ 12ನೇ ತರಗತಿವರೆಗಿನ ಒಟ್ಟಾರೆ 1250 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅತಿಥಿಗಳಾದ ರಾಜೇಂದ್ರ ಕುಮಾರ್ ಕಟಾರಿಯ, ಕೃಷಿ ಇಲಾಖೆ (ಕರ್ನಾಟಕ ಸರ್ಕಾರ) ಸರ್ಕಾರದ ಕಾರ್ಯದರ್ಶಿ ಮತ್ತು ಟಾಟ ಕನ್ಸಲ್ಟೆನ್ಸಿ ಸರ್ವೀಸಸ್, ಬೆಂಗಳೂರಿನ ಡೆಲಿವರಿ ಸೆಂಟರಿನ ಮುಖ್ಯಸ್ಥ ಸುನೀಲ್ ದೇಶಪಾಂಡೆ ಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

Presidency School R.T Nagar Wins the Bangalore Edition of TCS IT Wiz 2019

ವಿಜೇತ ತಂಡವು ಟ್ರೋಫಿ ಮತ್ತು ರೂ. 60,000 ಮೌಲ್ಯದ ಗಿಫ್ಟ್ ವೋಚರ್ ಗಳನ್ನು ಪಡೆಯಿತು. ಈ ಸ್ಪರ್ಧಿಗಳು ಈಗ ಮುಂಬೈನಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬೆಂಗಳೂರು ನಗರವನ್ನು ಪ್ರತಿನಿಧಿಸುವರು. ರನ್ನರ್ ಅಪ್ ತಂಡಕ್ಕೆ ರೂ. 40,000 ಮೌಲ್ಯದ ಗಿಫ್ಟ್ ವೋಚರ್ ಗಳು, ವಿಶೇಷವಾಗಿ ರೂಪಿಸಲಾದ ಮೆಡಲ್‍ಗಳು ನೀಡಲಾಯಿತು. ಅಂತಿಮ ಹಂತವನ್ನು ತಲುಪಿದ ನಾಲ್ಕು ತಂಡಗಳು ರೂ. 5,000 ಮೌಲ್ಯದ ನಾಲ್ಕು ಗಿಫ್ಟ್ ವೋಚರ್‍ಗಳನ್ನು ಪಡೆದುಕೊಂಡವು.

ಟ್ವೀಟರ್ ಮತ್ತು ಇನ್‍ಸ್ಟಾಗ್ರಾಂ ಮೂಲಕ ನಡೆದ ಸ್ಪರ್ಧೆಯಲ್ಲಿ ಹಲವು ಸಭಿಕರು ಪಾಲ್ಗೊಂಡಿದ್ದರು. 2,665 ಟ್ವೀಟ್‍ಗಳು, 42 ಇನ್‍ಸ್ಟಾಗ್ರಾಂ ಸಂದೇಶಗಳು ಬೆಂಗಳೂರು ಆವೃತ್ತಿಗೆ ಬಂದವು. ಅತ್ಯಧಿಕ ಟ್ವೀಟ್ ಮಾಡಿದ ವಿಜೇತರು, ಟ್ವೀಟ್ ಆಫ್ ದ ಡೇ ಸಂದೇಶಗಳಿಗೆ ವಿಶೇಷ ಬಹುಮಾನಗಳನ್ನು, ಬೆಸ್ಟ್ ಸ್ಟೋರೀಸ್ ಆಫ್ ದ ಡೇ ಇನ್‍ಸ್ಟಾಗ್ರಾಂ ಸಂದೇಶಕ್ಕೆ ಒಟ್ಟು ರೂ. 2,000 ಬಹುಮಾನ ಬಂದಿತು.

ಮಕ್ಕಳಿಗೆ ತಪ್ಪಿಲ್ಲ ಶಾಲಾ ಬ್ಯಾಗ್ ಹೊರೆ: ಪತ್ರಕ್ಕಷ್ಟೇ ಸೀಮಿತವಾದ ಆದೇಶ ಮಕ್ಕಳಿಗೆ ತಪ್ಪಿಲ್ಲ ಶಾಲಾ ಬ್ಯಾಗ್ ಹೊರೆ: ಪತ್ರಕ್ಕಷ್ಟೇ ಸೀಮಿತವಾದ ಆದೇಶ

ಪ್ರಾದೇಶಿಕ ಸುತ್ತಿನ ಸ್ಪರ್ಧೆಗಳು ಅಹಮದಾಬಾದ್, ಹೈದರಾಬಾದ್, ಚೆನ್ನೈ, ಕೋಲ್ಕೊತ್ತ, ಇಂದೋರ್, ನಾಗಪುರ, ಭುವನೇಶ್ವರ, ಕೊಚ್ಚಿ, ದೆಹಲಿ, ಮುಂಬೈ ಮತ್ತು ಪುಣೆಗಳಲ್ಲಿ ನಡೆದವು. ಕಳೆದ ವರ್ಷ ಕ್ವಿಜ್‍ಗೆ ದೇಶದ ವಿವಿಧೆಡೆಯಿಂದ ಒಟು 1,206 ಶಾಲೆಗಳಿಂದ ಒಟ್ಟು 13,908 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಟಿಸಿಎಸ್ ಗ್ರಾಮೀಣ ಐಟಿ ಕ್ವಿಜ್:ಟಿಸಿಎಸ್ ಐಟಿ ವಿಜ್ ಅನ್ನು 1999ರಲ್ಲಿ ಆರಂಭಿಸಲಾಗಿದ್ದು, ಇದು ದೇಶದಲ್ಲಿಯೇ 8ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಯಲಿರುವ ಅತಿದೊಡ್ಡ ಕ್ವಿಜ್ ಆಗಿದೆ. ಇದು, ಐಟಿ ಕೌಶಲದ ಮಹತ್ವ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ.

English summary
Tata Consultancy Services (TCS), announced the winners of the Bangalore edition of TCS IT Wiz, Presidency School R.T Nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X