ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೂರ್ಯಗ್ರಹಣ ವೀಕ್ಷಣೆಗೆ ನೆಹರೂ ತಾರಾಲಯದಲ್ಲಿ ಸಕಲ ಸಿದ್ದತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 25: ಸೂರ್ಯಗ್ರಹಣ ವೀಕ್ಷಣೆ ಮಾಡಲು ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ನಾಳೆ ಬೆಳೆಗ್ಗೆ 8.06 ಕ್ಕೆ ಆರಂಭವಾಗಿ, 11.11 ಕ್ಕೆ ಅಂತ್ಯವಾಗುವ ಅಪರೂಪದ ಕಂಕಣ ಸೂರ್ಯಗ್ರಹಣ ಕಾಣಲಿದೆ.

ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ಅಮಾವಾಸ್ಯೆ ದಿನ ಸೂರ್ಯಗ್ರಹಣ ಮೂಡಲಿದೆ. ಚಂದ್ರ ಕೇವಲ ಸೂರ್ಯನ ಶೇ, 90 ರಷ್ಟು ಭಾಗ ಆವರಣವ್ನು ಮಾತ್ರ ಮರೆ ಮಾಡುವುದರಿಂದ ಡಿಸೆಂಬರ್ 26 ರಂದು ಕಾಣಲಿರುವ ಸೂರ್ಯಗ್ರಹಣವು ಬೆಂಗಳೂರಿನಲ್ಲಿ ಪಾರ್ಶ್ವ ಗ್ರಹಣವಾಗಿ ಕಾಣಲಿದೆ.

2019ರ ಕೊನೆಯ ಸೂರ್ಯಗ್ರಹಣ: ಎಲ್ಲಿ, ಯಾವಾಗ ಕಾಣಿಸುತ್ತದೆ? ಅದರ ವಿಶೇಷವೇನು?2019ರ ಕೊನೆಯ ಸೂರ್ಯಗ್ರಹಣ: ಎಲ್ಲಿ, ಯಾವಾಗ ಕಾಣಿಸುತ್ತದೆ? ಅದರ ವಿಶೇಷವೇನು?

ಇಲ್ಲಿನ ಜವಹರಲಾಲ್ ನೆಹರು ತಾರಾಲಯದಲ್ಲಿ ಸಾರ್ವಜನಿಕರು ಸೂರ್ಯಗ್ರಹಣ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಗ್ರಹಣ ವೀಕ್ಷಿಸಲು ಟೆಲಿಸ್ಕೋಪ್ ಗಳನ್ನು ಅಳವಡಿಸಲಾಗಿದೆ.

Preparation Of Viewing The Solar Eclipse In The Nehru Planetarium

ಇದೇ ಮೊದಲ ಬಾರಿಗೆ ಗ್ರಹಣ ಸಮಯದಲ್ಲಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ಗ್ರಹಣದ ವಿವಿಧ ಹಂತಗಳು, ಸೂರ್ಯ-ಚಂದ್ರನ ಗಾತ್ರ, ಗ್ರಹಣದ ಪರಿಣಾಮ, ಬೆಳಕಿನ ಮಟ್ಟ ಇತ್ಯಾದಿ ಮಾಹಿತಿಗಳನ್ನು ನೀಡಲಾಗುತ್ತಿದೆ.

ಸೂರ್ಯ ಗ್ರಹಣ; ಕುಕ್ಕೆ ಸುಬ್ರಮಣ್ಯ ದೇವಾಲಯದ ಪ್ರಕಟಣೆಸೂರ್ಯ ಗ್ರಹಣ; ಕುಕ್ಕೆ ಸುಬ್ರಮಣ್ಯ ದೇವಾಲಯದ ಪ್ರಕಟಣೆ

ಕಂಕಣ ಸೂರ್ಯಗ್ರಹಣ ಈ ಹಿಂದೆ 2010 ಜನೆವರಿ 15 ರಂದು ಸಂಭವಿಸಿತ್ತು. ಬಳಿಕ 9 ವರ್ಷಗಳ ನಂತರ ಡಿಸೆಂಬರ್ 26 ಕ್ಕೆ ಮತ್ತೆ ಕಂಕಣ ಸೂರ್ಯಗ್ರಹಣ ಕಾಣಲಿದೆ. ಮುಂದೆ 2020 ಜೂನ್ 21 ರಂದು ಸಂಭವಿಸಲಿದೆ.

English summary
Telescopes have been installed at the Jawaharlal Nehru Planetarium in Bangalore for the public to watch the Sun Eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X