ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕೊರೊನಾ ಸೋಂಕು ಗೆದ್ದ ಅವಧಿಪೂರ್ವವಾಗಿ ಜನಿಸಿದ ಶಿಶು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16: ಅವಧಿಪೂರ್ವವಾಗಿ ಜನಿಸಿದ್ದ ಶಿಶು ಕೊರೊನಾ ಸೋಂಕಿನಿಂದ ಪಾರಾಗಿದೆ.

ಬೆಂಗಳೂರಿನ ಆಸ್ಪತ್ರೆಯಲ್ಲಿ ಹೆರಿಗೆಯಾದ ಹೆಣ್ಣುಮಗು ಕೇವಲ 980 ಗ್ರಾಂ ತೂಕವಿತ್ತು. ಆರೋಗ್ಯಕರ ಮಗುವಿನ ತೂಕ 2.8-2.9 ಕೆಜಿ ಇರಬೇಕು ಎಂದು ವೈದ್ಯರು ಹೇಳುತ್ತಾರೆ.
ಗರ್ಭಿಣಿಯನ್ನು ಆಗಸ್ಟ್ 13ರಂದು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊರೊನಾ: ಮನೆಯಲ್ಲಿ ಮಕ್ಕಳಿದ್ದರೆ ನಿಮ್ಮ ಕ್ವಾರಂಟೈನ್ ಹೇಗಿರಬೇಕು? ಕೊರೊನಾ: ಮನೆಯಲ್ಲಿ ಮಕ್ಕಳಿದ್ದರೆ ನಿಮ್ಮ ಕ್ವಾರಂಟೈನ್ ಹೇಗಿರಬೇಕು?

ತಾಯಿ ಮಗುವಿಗೆ ಜನ್ಮ ನೀಡಿದ್ದರು. ಈ ಹೆಣ್ಣುಮಗು 5 ದಿನಗಳ ಕಾಲ, ಮಕ್ಕಳ ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿತ್ತು.

 ಅಪಘಾತ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ

ಅಪಘಾತ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ

ನಂತರ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಯ ಅಪಘಾತ ಆರೈಕೆ ಕೇಂದ್ರಕ್ಕೆ (TCC) ಸ್ಥಳಾಂತರಿಸಲಾಯಿತು.

 ಮಗುವಿಗೆ ಲಕ್ಷಣ ರಹಿತ ಸೋಂಕು

ಮಗುವಿಗೆ ಲಕ್ಷಣ ರಹಿತ ಸೋಂಕು

ಮಗುವಿಗೆ ಲಕ್ಷಣರಹಿತ ಸೋಂಕು ಇರುವುದು ದೃಢಪಟ್ಟಿತ್ತು.ಹಾಗಾಗಿ ಮಗುವಿಗೆ ಕೊರೊನಾ ಚಿಕಿತ್ಸೆ ನೀಡಲಾಯಿತು. ಮಗುವು TCCನಲ್ಲಿದ್ದಾಗ ಎಕ್ಸ್‌ಪ್ರೆಸ್ ಬ್ರೆಸ್ಟ್ ಫೀಡಿಂಗ್ ಮುಖಾಂತರ ಮಗುವಿಗೆ ಹಾಲುಣಿಸಲಾಗುತ್ತಿತ್ತು ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

 ಸೋಂಕಿನಿಂದ ಗುಣಮುಖ

ಸೋಂಕಿನಿಂದ ಗುಣಮುಖ

ಮಗು ಸೋಂಕಿನಿಂದ ಗುಣಮುಖವಾಗಿದ್ದು, ಕಡಿಮೆ ತೂಕದ ಜನನ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತ ಲಭ್ಯವಾಗಿದೆ.

ಮಗುವಿನ ವೈದ್ಯಕೀಯ ಪರೀಕ್ಷೆ ವೇಳೆ ಮಗು ಹೈಪೊಗ್ಲಿಸಿಮಿಯಾ (ಕಡಿಮೆ ರಕ್ತದ ಸಕ್ಕರೆ) ಮತ್ತು ಹೈಪೋಕಾಲ್ಕೆಮಿಯಾ (ಕಡಿಮೆ ಕ್ಯಾಲ್ಸಿಯಂ ಮಟ್ಟ)ದಿಂದ ಬಳಲುತ್ತಿರುವುದು ಕಂಡುಬಂದಿತ್ತು.

Recommended Video

Diganth ಹಾಗು Aindrita Ray ಮೊದಲ ದಿನದ ವಿಚಾರಣೆ ಹೇಗಾಯ್ತು | Oneindia Kannada
 ಡಿಸ್ಚಾರ್ಜ್ ಸಮಯದಲ್ಲಿ 1.2 ಕೆಜಿ ತೂಕವಿತ್ತು

ಡಿಸ್ಚಾರ್ಜ್ ಸಮಯದಲ್ಲಿ 1.2 ಕೆಜಿ ತೂಕವಿತ್ತು

BMCRI ಸಹಾಯಕ ಪ್ರಾಧ್ಯಾಪಕ ಡಾ.ರವಿಚಂದ್ರ ಮಾತನಾಡಿ, ಎದೆಹಾಲುಣಿಸುವುದು ಮತ್ತು ಭಾವನಾತ್ಮಕ ಬೆಂಬಲಕ್ಕಾಗಿ ತಾಯಿಯನ್ನು ಆಸ್ಪತ್ರೆಗೆ ಕರೆಸಲಾಯಿತು. ಮಗುವು ಆಸ್ಪತ್ರೆಗೆ ದಾಖಲಾದ ಆರಂಭದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಹಾಗಾಗಿ, ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು. ಡಿಸ್ಚಾರ್ಜ್ ಸಮಯದಲ್ಲಿ, ಮಗು 1.2 ಕೆಜಿ ತೂಕವಿತ್ತು ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

English summary
980 Grams Premature Girl Baby Beats Coronavirus In Bengaluru, Now Baby's weight is 1.2 kgs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X