ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೀ ಕಟ್ಟಿದ್ರೆ ಮಾತ್ರ ಪ್ರೀಸ್ಕೂಲ್ ಆನ್ಲೈನ್ ಕ್ಲಾಸ್! ಇದಪ್ಪಾ ವರಸೆ

|
Google Oneindia Kannada News

ಬೆಂಗಳೂರು, ಜೂನ್ 4: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಎಲ್ಲ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಈಗ ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಿ ಶಾಲೆಗಳನ್ನು ಮರು ಪ್ರಾರಂಭಿಸಲು ಕರ್ನಾಟಕ ರಾಜ್ಯ ಸರ್ಕಾರವು ತೀರ್ಮಾನಿಸಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಜನಾಕ್ರೋಶ ವ್ಯಕ್ತವಾಗಿದ್ದರಿಂದ, ಶಾಲೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ಪೋಷಕರ ಅಭಿಪ್ರಾಯ ಪಡಿತೀವಿ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಅದರಲ್ಲೂ ಪ್ರೀಸ್ಕೂಲ್ ಗಳನ್ನು ಇನ್ನೂ ಆರು ತಿಂಗಳವರೆಗೆ ತೆರೆಯೋ ಲಕ್ಷಣಗಳು‌ ಇಲ್ಲ. ಈ ನಡುವೆ ಪ್ರೀ ಸ್ಕೂಲ್ ಗೆ ಹೋಗುವ ಮಗುವಿನ ಪೋಷಕರಿಗೆ ಬೆಂಗಳೂರಿನ ಜನಪ್ರಿಯ ಖಾಸಗಿ ಶಾಲೆಯೊಂದು ಫೀಸ್ ಕಟ್ಟಲು ಪದೇ ಪದೇ ಸಂದೇಶ ಕಳುಹಿಸುತ್ತಿದ್ದಾರೆ. ಈ ಕುರಿತು ಪೋಷಕರು ಒನ್ಇಂಡಿಯಾ ಗೆ ತಿಳಿಸಿದ್ದಾರೆ.

ಪುಟ್ಟ ಬಾಲಕಿಯ ಪ್ರಶ್ನೆಗೆ ಮನಸೋತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪುಟ್ಟ ಬಾಲಕಿಯ ಪ್ರಶ್ನೆಗೆ ಮನಸೋತ ಶಿಕ್ಷಣ ಸಚಿವ ಸುರೇಶ್ ಕುಮಾರ್

ಎರಡು ತಿಂಗಳ ನಂತರ ರೆಗ್ಯುಲರ್ ಕ್ಲಾಸಸ್ ಪ್ರಾರಂಭ

ಎರಡು ತಿಂಗಳ ನಂತರ ರೆಗ್ಯುಲರ್ ಕ್ಲಾಸಸ್ ಪ್ರಾರಂಭ

"" ಬೆಂಗಳೂರಿನ ಜನಪ್ರಿಯ ಪ್ರೀಸ್ಕೂಲ್ ನಿಂದ ನನ್ನ ಮಗನ ಮೊದಲ ಟರ್ಮ್ ನ ಫೀಸ್ ಪೇ ಮಾಡಿ, ಆನ್ ಲೈನ್ ಕ್ಲಾಸ್ ಮಾಡ್ತೀವಿ ಅಂತ ಫೋನ್ ಮಾಡಿ ಅಕೌಂಟ್ ನಂಬರ್ ಕಳಿಸುತ್ತಿದ್ದಾರೆ. ಕೂಡಲೇ ಕಟ್ಟಿದರೆ ಜೂನ್ 8 ರಿಂದ ಆನ್ ಲೈನ್ ಕ್ಲಾಸ್ ಪ್ರಾರಂಭ ಮಾಡುತ್ತಾರಂತೆ. ಎರಡು ತಿಂಗಳ ನಂತರ ರೆಗ್ಯುಲರ್ ಕ್ಲಾಸಸ್ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ. ಪಾಪ, ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಮಾಡಿ ಹಿಂಸೆ ಕೊಡುತ್ತಾರೆ. ಮೊದಲ ಟರ್ಮ್ ನಡೆಯೋದೆ ಕಷ್ಟ ಇದೆ. ಈ ಟರ್ಮಿಗೆ ಮೂವತ್ತಾರು ಸಾವಿರ ಕಟ್ಟಬೇಕಂತೆ.''

ಪ್ರೀಸ್ಕೂಲ್ ಗಳಿಗೆ ಸರ್ಕಾರ ಅನುಮತಿ ಕೊಟ್ಟಿಲ್ಲ

ಪ್ರೀಸ್ಕೂಲ್ ಗಳಿಗೆ ಸರ್ಕಾರ ಅನುಮತಿ ಕೊಟ್ಟಿಲ್ಲ

ನನಗೆ ಮೆಸೇಜ್ ಮಾಡಿದ ಕತ್ರಿಗುಪ್ಪೆ ಸೆಂಟರ್ ಹೆಡ್ ಗೆ ರಿಪ್ಲೈ ಮಾಡಿ ಬೈದಿದ್ದೇನೆ. ನಿಮಗೆ ಆನ್ ಲೈನ್ ಕ್ಲಾಸಸ್ ಸ್ಟಾರ್ಟ್ ಮಾಡೋಕೆ ಅನುಮತಿ ಯಾರು ಕೊಟ್ಟರು, ರೆಗ್ಯುಲರ್ ಕ್ಲಾಸಸ್ ಸ್ಟಾರ್ಟ್ ಆಗುವವರೆಗೆ ಪಾವತಿ ಮಾಡಲ್ಲ ಅಂದಿದ್ದೇನೆ.

ಆನ್ ಲೈನ್ ಕ್ಲಾಸಸ್ ಮಾಡೋಕೆ ಪ್ರೀಸ್ಕೂಲ್ ಗಳಿಗೆ ಸರ್ಕಾರ ಅನುಮತಿ ಕೊಟ್ಟಿಲ್ಲ. ಆ ಕಂದಮ್ಮಗಳಿಗೆ ಆನ್ ಲೈನ್ ತರಗತಿ ಮಾಡೋದಕ್ಕೆ ಫೇಸ್ ಬುಕ್ ನಲ್ಲಿ ಸಚಿವ ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದರು.

ಮಕ್ಕಳಿಗಷ್ಟೇ ಅಲ್ಲ, ಶಿಕ್ಷಣ ಸಚಿವರಿಗೂ ಪರೀಕ್ಷೆ; ಯಾರೂ 'ಫೇಲ್' ಆಗದಿರಲಿಮಕ್ಕಳಿಗಷ್ಟೇ ಅಲ್ಲ, ಶಿಕ್ಷಣ ಸಚಿವರಿಗೂ ಪರೀಕ್ಷೆ; ಯಾರೂ 'ಫೇಲ್' ಆಗದಿರಲಿ

ಒನ್ಇಂಡಿಯಾ ಗೆ ಮಗುವಿನ ಪೋಷಕರ ಅಳಲು

ಒನ್ಇಂಡಿಯಾ ಗೆ ಮಗುವಿನ ಪೋಷಕರ ಅಳಲು

ನಾನಂತು ನನ್ನ ಮಗನನ್ನು ಆನ್‌ಲೈನ್‌ ಕ್ಲಾಸ್ ಗಳಿಗೆ ತಳ್ಳಿ ಹಿಂಸೆ ಕೊಡಲ್ಲ. ಬೇರೆ ಪೇರೆಂಟ್ಸ್ ಗಳು ಸಹ ಗೊಂದಲದಲ್ಲಿದ್ದಾರೆ. ಜೊತೆಗೆ ಕೆಲವರಿಗೆ ಈ ಟೈಮಲ್ಲಿ ಅಷ್ಟು ಹಣ ಕಟ್ಟುವಷ್ಟು ಶಕ್ತಿ ಇಲ್ಲ. ಎರಡು ಮಕ್ಕಳಿರುವ ಪೋಷಕರು ಹೇಗೆ ಎರಡೆರಡು ಮೊಬೈಲ್ ಕೊಡುತ್ತಾರೆ.

ಅದಕ್ಕಿಂತ ಹೆಚ್ಚಾಗಿ ಇವರು ಫೀಸ್ ಕಟ್ಟಿಸಿಕೊಂಡು ಆನ್ ಲೈನ್ ಕ್ಲಾಸ್ ನಡೆಸಿ ಆ ಫೋಟೋಗಳನ್ನು ಫೇಸ್ ಬುಕ್ ಮತ್ತು ಶಾಲೆಯ ಆ್ಯಪ್ ಗಳಲ್ಲಿ ಶೇರ್ ಮಾಡುತ್ತಾರೆ. ಆಗ ರೆಗ್ಯುಲರ್ ಆಗಿ ಶಾಲೆಗಳು ಪ್ರಾರಂಭವಾದ ಮೇಲೆ ಕಳುಹಿಸಬೇಕು ಅಂತ ನಿರ್ಧಾರ ಮಾಡಿರುವ ಪೋಷಕರಿಗೆ ಮತ್ತು ಆ ಮಗುವಿಗೆ ಫೋಟೋಗಳನ್ನು ನೋಡಿ ಮಾನಸಿಕವಾಗಿ ಬೇಸರವಾಗುವ ಸಂಭವವಿದೆ. ಎಂದು ಒನ್ಇಂಡಿಯಾ ಗೆ ಮಗುವಿನ ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಶಾಲೆಯ ಮೇಲೆ ಶಿಕ್ಷಣ ಇಲಾಖೆ ಕ್ರಮ

ಶಾಲೆಯ ಮೇಲೆ ಶಿಕ್ಷಣ ಇಲಾಖೆ ಕ್ರಮ

ಇಂದು ವಿಜಯಪುರದಲ್ಲಿ ಅನುಮತಿ ಇಲ್ಲದೇ ನರ್ಸರಿ ಶಾಲೆ ನಡೆಸಿದ ಶಾಲೆಯೊಂದರ ಸುದ್ದಿಯಾಗಿದೆ. ಆ ಶಾಲೆಯ ಮೇಲೆ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳುತ್ತಿದೆ. 5 ವರ್ಷದೊಳಗಿನ ಪ್ರೀ-ಸ್ಕೂಲ್ ತರಗತಿಗಳು ಈ ವರ್ಷ ಓಪನ್ ಮಾಡುವುದೇ ಕಷ್ಟವಿದೆ. ಆ ಬಗ್ಗೆ ಇನ್ನೂ ಯಾವುದೇ ಚರ್ಚೆ ಶಿಕ್ಷಣ ಇಲಾಖೆಯಲ್ಲಿ ಆಗಿರುವುದಿಲ್ಲ. ಈ ಮಧ್ಯೆ ಕೆಲವು ಪ್ರೀಸ್ಕೂಲ್ ಗಳು ಮೊದಲ ಅರ್ಧ ವರ್ಷದ 30 ಸಾವಿರದಿಂದ 70 ಸಾವಿರದವರೆಗೆ ಶುಲ್ಕ ಕಟ್ಟಿ ಎಂದು ಒತ್ತಾಯಿಸುತ್ತಿದ್ದಾರೆ.

ಶಿಕ್ಷಣ ಮಂತ್ರಿಗಳು ಮತ್ತು ಇಲಾಖೆ ಕೂಡಲೇ ಗಮನಹರಿಸಬೇಕು

ಶಿಕ್ಷಣ ಮಂತ್ರಿಗಳು ಮತ್ತು ಇಲಾಖೆ ಕೂಡಲೇ ಗಮನಹರಿಸಬೇಕು

ಮೂರರಿಂದ ಐದು ವರ್ಷದ ಕಂದಮ್ಮಗಳಿಗೆ ಆನ್ ಲೈನ್ ಕ್ಲಾಸ್ ಗಳನ್ನು ಹೇರುತ್ತಿದ್ದಾರೆ. (ಶಿಕ್ಷಣ ಸಚಿವರು ಎಚ್ಚರಿಕೆ ನೀಡಿದ ನಂತರವೂ) ಕೋವಿಡ್ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಸಹ ಆರ್ಥಿಕ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಇವರು ಹಣ ಮಾಡಲು ಹೊರಟಿದ್ದಾರೆ. ಆನ್ ಲೈನ್ ಕ್ಲಾಸಸ್ ಗಳಿಗೆ ಮಕ್ಕಳನ್ನು ಕೂರಿಸಬೇಕೋ, ಫೀಸ್ ಗಳನ್ನು ಕಟ್ಟಬೇಕೋ ಎಂಬ ಬಗ್ಗೆ ಪೋಷಕರು ಗೊಂದಲದಲ್ಲಿದ್ದಾರೆ. ಶಿಕ್ಷಣ ಮಂತ್ರಿಗಳು ಮತ್ತು ಇಲಾಖೆ ಕೂಡಲೇ ಇದರ ಬಗ್ಗೆ ಗಮನಹರಿಸಬೇಕು ಎಂದು ಪೋಷಕರು ತಮ್ಮ ಸಮಸ್ಯೆಗಳನ್ನು ಹೇಳಿದ್ದಾರೆ.

English summary
A popular private school in Bengaluru has repeatedly messaged the child's parents for a fee. The parents informed oneindia kannada about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X