ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಗಾಳಿ ಸಹಿತ ಮಳೆ, ವಾಹನ ಸವಾರರೇ ಎಚ್ಚರ

|
Google Oneindia Kannada News

ಬೆಂಗಳೂರು, ಮೇ 13: ಬೆಂಗಳೂರಲ್ಲಿ ಗಾಳಿ ಸಹಿತ ಮಳೆ ಆರಂಭವಾಗಿದೆ. ಮುಂಗಾರು ಪೂರ್ವ ಮಳೆಯಿಂದಾಗಿಯಾದರೂ ಬೆಂಗಳೂರಿನ ತಾಪಮಾನ ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಓಹೋ ಮಳೆ ಬಂತು ಎಂದು ಮಳೆಯಲ್ಲಿ ನೆನೆಯಲು ಹೋದೀರಿ ಜಾಗ್ರತೆ, ಮುಂಗಾರು ಪೂರ್ವ ಮಳೆ ಹಲವು ರೋಗಗಳನ್ನು ಕೂಡ ತರಬಲ್ಲದು ಎಚ್ಚರವಿರಲಿದೆ. ಕಳೆದ ಒಂದು ವಾರದಿಂದ ಮೋಡಕವಿದ ವಾತಾವರಣವಿತ್ತು, ಸೆಕೆ ಕೊಂಚ ಕಡಿಮೆಯಾಗಿತ್ತು ಆದರೂ ಹಗಲು ಹೊತ್ತು ಸೆಕೆಯ ಪ್ರಮಾಣ ಹೆಚ್ಚೇ ಇತ್ತು.

ಜಯನಗರ, ಮಲ್ಲೇಶ್ವರ, ಬನಶಂಕರಿ, ಉತ್ತರಹಳ್ಳಿ, ಬಿಟಿಎಂ ಲೇಔಟ್‌ ಭಾಗದಲ್ಲಿ ಮಳೆ ಆರಂಭವಾಗಿದೆ. ಕಳೆದ ಒಂದು ವಾರದಿಂದ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಒಂದೆರೆಡು ದಿನ ಉತ್ತಮ ಮಳೆಯಾಗಿದೆ. ಗಾಳಿಯೂ ವಿಪರೀತವಾಗಿದ್ದ ಕಾರಣ ಅಲ್ಲಲ್ಲಿ ವಾಹನಗಳ ಮೇಲೆ ಮರಗಳು ಉರುಳಿ ಅನಾಹುತ ಸೃಷ್ಟಿ ಮಾಡಿತ್ತು.

Pre-Monsoon rains to pick up pace in Bengaluru

ಮೈಸೂರು, ಚಾಮರಾಜನಗರ, ಮಂಡ್ಯ ಕಡೆಗಳಲ್ಲಿಯೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಗಣಿನಾಡು ಕೋಲಾರ ಹಾಗೂ ಬೆಂಗಳೂರು ಸೇರಿದಂತೆ ಹಲವೆಡೆಯಿಂದು ಮಳೆ ಅಬ್ಬರ ತೋರಿದ್ದು, ಜನರಲ್ಲಿ ಸಂತಸ ಮೂಡಿಸಿದೆ.

ಬೆಂಗಳೂರು ನಗರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಅಕಾಲಿಕವಾಗಿ ಸುರಿದ ಮಳೆಗೆ ವಾಹನಸವಾರರು ಪರದಾಡುವಂತೆ ಆಗಿದೆ. ಗಾಳಿ ಸಹಿತ ಮಳೆಯಾಗಲಿದ್ದು, ರಸ್ತೆಗಳಲ್ಲಿ ನೀರು ನಿಂತಿದೆ.

ಹಾಸನದ ಚನ್ನರಾಯಪಟ್ಟಣ ಪಟ್ನ 4 ಸೆಂ.ಮೀ, ಚಿತ್ರದುರ್ಗದ ಬಿ ದುರ್ಗಾ 3 ಸೆಂ.ಮೀ, ಹೊಳೆನರಸೀಪುರ, ಮೊಳಕಾಲ್ಮೂರು, ಶ್ರವಣಬೆಳಗೊಳ, ಮಡಿಕೇರಿ, ಬಾಳೆಹೊನ್ನೂರು, ಎನ್‌ಆರ್‌ಪುರ, ಸೋಮವಾರಪೇಟೆ, ಬೇಳೂರು, ಮಾಗಡಿಯಲ್ಲಿ ತಲಾ ಒಂದು ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 43.4 ಡಿಗ್ರಿ ಸೆಲ್ಸಿಯಸದ ದಾಖಲಾಗಿದೆ.

English summary
Bengaluru rains to return today evening, intense showers likely in pockets ... Pre-Monsoon rain in Bengaluru, Mysore and Hassan for the next three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X