ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಗಾರು ಪೂರ್ವ ಮಳೆ, ಬೆಂಗ್ಳೂರು, ಮಲೆನಾಡಲ್ಲಿ ಜೋರು

ಮುಂಗಾರು ಪೂರ್ವ ಮಳೆ ಮೇ ತಿಂಗಳಿನ ಅಂತ್ಯದವರೆಗೂ ಮುಂದುವರೆಯಲಿದ್ದು, ಬೆಂಗಳೂರು, ಮಲೆನಾಡು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆ ದಾಖಲಗುವ ಮುನ್ಸೂಚನೆ ಸಿಕ್ಕಿದೆ

By Mahesh
|
Google Oneindia Kannada News

ಬೆಂಗಳೂರು, ಮೇ 21: ಮುಂಗಾರು ಪೂರ್ವ ಮಳೆ ಮೇ ತಿಂಗಳಿನ ಅಂತ್ಯದವರೆಗೂ ಮುಂದುವರೆಯಲಿದ್ದು, ಬೆಂಗಳೂರು, ಮಲೆನಾಡು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆ ದಾಖಲಗುವ ಮುನ್ಸೂಚನೆ ಸಿಕ್ಕಿದೆ ಎಂದು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

ಕೊಡಗಿನಲ್ಲಿ 90 ಮಿ.ಮೀ. ಮಳೆಯಾಗಿದೆ ಎಂದು ವರದಿಯಾಗಿದೆ. ಹೆಗ್ಗಡದೇವನಕೋಟೆಯಲ್ಲಿ 38 ಮಿಲಿ ಮೀಟರ್, ಕೋಲಾರದಲ್ಲಿ 43 ಎಂಎಂ ಮಳೆ ದಾಖಲಾಗಿದೆ.[ಪ್ರವಾಹ ತಡೆಗೆ ಬಿಬಿಎಂಪಿಯಿಂದ 61 ಕಂಟ್ರೋಲ್ ರೂಂ]

Pre Monsoon Rain to continue till May end : KSNDMC

ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.

ಮುಂಗಾರು ಪೂರ್ವ ಮಳೆ ಮೇ ಅಂತ್ಯದವರೆಗೂ ಮುಂದುವರಿಯಲಿದೆ. ಬಳಿಕ ನೈಋತ್ಯ ಮುಂಗಾರು ಮಳೆ ಆರಂಭವಾಗಲಿದೆ ಎಂದು ನಿರ್ದೇಶಕ ಶ್ರೀನಿವಾಸರೆಡ್ಡಿ ಹೇಳಿದರು.[ವಾರಾಂತ್ಯದ ಮಳೆಗೆ ಕಂಗಾಲಾದ ಬೆಂಗಳೂರಿಗರು, ನೆಲ ಕಂಡ ಮರಗಳು]

ಶನಿವಾರ ಬೆಳಗ್ಗೆ 8.30 ರಿಂದ ಲೆಕ್ಕದಂತೆ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 40.8 ಎಂಎಂ ಮಳೆ ಬಿದ್ದಿದೆ.ಆದರೆ ವಾಡಿಕೆಯಂತೆ ಮೇ ತಿಂಗಳಿನಲ್ಲಿ ಸರಾಸರಿ 107.4 ಎಂಎಂ ಮಳೆ ಕಾಣಬೇಕಿತ್ತು. ಈ ಬಾರಿ 76.4 ಎಂಎಂ ರಷ್ಟು ಮಾತ್ರ ಮಳೆಯಾಗಿದೆ ಎಂದು ಸ್ಕೈ ಮೆಟ್ ವೆದರ್ ವರದಿ ಹೇಳಿದೆ.

English summary
Pre Monsoon rain and thundershowers is likely continue till May end in and around Bengaluru, Malenadu and South Interior Karnataka region says Karantaka State Natural Disaster Monitoring center(KSNDMC)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X