ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಸ್ತಕ ಬಿಡುಗಡೆ ಮುನ್ನವೇ ಜಾಫರ್ ಷರೀಫ್ ವಿಧಿವಶ

|
Google Oneindia Kannada News

ಬೆಂಗಳೂರು, ನವೆಂಬರ್ 28 : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ನಿವಾಸಕ್ಕೆ ಭೇಟಿ ನೀಡಲಿರುವ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

ಪೂರ್ವ ನಿಗದಿತ ಕಾರ್ಯಕ್ರಮದ ಪ್ರಕಾರ ಪ್ರಣಬ್ ಮುಖರ್ಜಿ ಅವರು ಇಂದು ಅರಮನೆ ಮೈದಾನದಲ್ಲಿ 'ಇಂಡಿಯಾ ವಿನ್ಸ್ ಫ್ರೀಡಂ' ಪುಸ್ತಕವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ, ಪುಸ್ತಕ ಬಿಡುಗಡೆಗೆ ಮುನ್ನವೇ ಜಾಫರ್ ಷರೀಫ್ ವಿಧಿವಶರಾದರು.

ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಪರಿಚಯಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಪರಿಚಯ

ಮೌಲಾನಾ ಅಬ್ದುಲ್ ಕಲಾಮ್ ಆಝಾದ್ ಅವರ 'ಇಂಡಿಯಾ ವಿನ್ಸ್ ಫ್ರೀಡಂ' ಪುಸ್ತಕವನ್ನು ಜಾಫರ್ ಷರೀಫ್ ಉರ್ದು ಭಾಷೆಗೆ ಅನುವಾದ ಮಾಡಿಸಿದ್ದರು. ಇಂದು ಪ್ರಣಬ್ ಮುಖರ್ಜಿ ಪುಸ್ತಕವನ್ನು ಬಿಡುಗಡೆ ಮಾಡಬೇಕಿತ್ತು.

ನಾನು ಬದುಕಿರಲು ಕಾರಣ ಜಾಫರ್ ಷರೀಫ್ : ದ್ವಾರಕೀಶ್ನಾನು ಬದುಕಿರಲು ಕಾರಣ ಜಾಫರ್ ಷರೀಫ್ : ದ್ವಾರಕೀಶ್

ಆದರೆ, ಪುಸ್ತಕ ಬಿಡುಗಡೆಗೆ ಮುನ್ನವೇ ಜಾಫರ್ ಷರೀಫ್ ವಿಧಿವಶರಾಗಿದ್ದಾರೆ. ಆದ್ದರಿಂದ, ಪೂರ್ವ ನಿಗದಿ ಕಾರ್ಯಕ್ರಮದಂತೆ ಪ್ರಣಬ್ ಮುಖರ್ಜಿ ಬೆಂಗಳೂರಿಗೆ ಬರಲಿದ್ದು, ಜಾಫರ್ ಷರೀಫ್ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.

ಮಣ್ಣಲ್ಲಿ ಮಣ್ಣಾದ ಬ್ರಾಡ್‌ಗೇಜ್ ಮ್ಯಾನ್ ಜಾಫರ್ ಷರೀಫ್ಮಣ್ಣಲ್ಲಿ ಮಣ್ಣಾದ ಬ್ರಾಡ್‌ಗೇಜ್ ಮ್ಯಾನ್ ಜಾಫರ್ ಷರೀಫ್

ಜಾಫರ್ ಷರೀಫ್ ನಿವಾಸಕ್ಕೆ ಭೇಟಿ

ಜಾಫರ್ ಷರೀಫ್ ನಿವಾಸಕ್ಕೆ ಭೇಟಿ

ಬುಧವಾರ ಮಧ್ಯಾಹ್ನ 3 ಗಂಟೆಗೆ ಪ್ರಣಬ್ ಮುಖರ್ಜಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಜಾಫರ್ ಷರೀಫ್ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಜಮೀರ್ ಅಹಮದ್ ಖಾನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಜಾಫರ್ ಷರೀಫ್ ವಿಧಿವಶ

ಜಾಫರ್ ಷರೀಫ್ ವಿಧಿವಶ

ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ.ಜಾಫರ್ ಷರೀಫ್ ನವೆಂಬರ್ 25ರಂದು ವಿಧಿವಶರಾಗಿದ್ದರು. ನವೆಂಬರ್ 26ರಂದು ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆದಿತ್ತು. ಪ್ರಣಬ್ ಮುಖರ್ಜಿ ಅವರು ಇಂದು ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.

ಆಸ್ಪತ್ರೆಗೆ ದಾಖಲಾಗಿದ್ದರು

ಆಸ್ಪತ್ರೆಗೆ ದಾಖಲಾಗಿದ್ದರು

85 ವರ್ಷದ ಜಾಫರ್ ಷರೀಫ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ನವೆಂಬರ್ 23ರಂದು ಬೆಂಗಳೂರಿನಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನವೆಂಬರ್ 25ರಂದು ಮೃತಪಟ್ಟಿದ್ದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮ

ಪುಸ್ತಕ ಬಿಡುಗಡೆ ಕಾರ್ಯಕ್ರಮ

ಜಾಫರ್ ಷರೀಫ್ ಅವರು ಮೌಲಾನಾ ಅಬ್ದುಲ್ ಕಲಾಮ್ ಆಝಾದ್ ಅವರ 'ಇಂಡಿಯಾ ವಿನ್ಸ್ ಫ್ರೀಡಂ' ಪುಸ್ತಕವನ್ನು ಉರ್ದು ಭಾಷೆಗೆ ಅನುವಾದ ಮಾಡಿಸಿದ್ದರು. ಇಂದು ಪ್ರಣಬ್ ಮುಖರ್ಜಿ ಪುಸ್ತಕವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ, ಅದಕ್ಕೂ ಮೊದಲೇ ಷರೀಫ್ ಇಹಲೋಕ ತ್ಯಜಿಸಿದ್ದು, ಕನಸು ಅಪೂರ್ಣವಾಗಿದೆ.

English summary
Former president of India Pranab Mukherjee will visit Jaffer Sharief house, Bengaluru on November 28, 2018. Former Union railway minister C.K.Jaffer Sharief died on November 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X