ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ದಿನಾಚರಣೆ ವಿಶೇಷ: ಸ್ವರಾಗ ಸಂಗೀತ ಸಂಜೆ

By Mahesh
|
Google Oneindia Kannada News

ಬೆಂಗಳೂರು, ನ.09: ಪ್ರಕಸಂ ತನ್ನ ಹೊಸ ಪ್ರಯತ್ನದಲ್ಲಿ ಯುವ ಹಾಗು ನವಪ್ರತಿಭೆಗಳಿಗೆ ರಂಗದ ಮೇಲೆ ಹಾಡುವ ಅವಕಾಶ ಕಲ್ಪಿಸಿಕೊಡುತ್ತಿದೆ.

ತರಬೇತಿ ಪಡೆದ ನಮ್ಮ ಸ್ವರಾಗಿಗಳು ಒಂದು ಗಂಟೆಯ ಸಂಗೀತ ಸಂಭ್ರಮದ ಸಂಜೆಯನ್ನು ನಿಮಗಾಗಿ ಪ್ರಸ್ತುತ ಪಡಿಸಲಿದ್ದಾರೆ. ಸುಗಮ ಸಂಗೀತ, ಭಾವಗೀತೆ, ಸಿನಿಮಾ ಸಂಗೀತ, ರಂಗ ಗೀತೆ, ಘಜಲ್ ಹೀಗೆ ಹಲವು ರೀತಿಯ ಗಾಯನವನ್ನು ನಿಮ್ಮ ಮುಂದೆ ಪ್ರದರ್ಶಿಸಲು ಹಲವು ದಿನಗಳ ತಯಾರಿ ನಡೆಸಿ ಹಿಂದೆಂದೂ ನೀಡಿರದ ಹೊಸ ಅನುಭವ ನೀಡಲು ಮುಂದಾಗಿದ್ದಾರೆ ಈ ನಮ್ಮ ಯುವ ಸ್ವರಾಗಿಗಳು. ಬನ್ನಿ, ಕೇಳಿ, ಹರಸಿ ಹಾರೈಸಿ, ಹಾಡಿ ನಲಿಯಿರಿ.

ಶೃತಿ ಮತ್ತು ತಾಳಜ್ಞಾನದ ಅರಿವಿರುವ 16 ಅಭ್ಯರ್ಥಿಗಳನ್ನು ಜುಲೈ ತಿಂಗಳಲ್ಲಿ ನಡೆದ ಆಡಿಷನ್ಸ್ ಮೂಲಕ ಆಯ್ಕೆ ಮಾಡಲಾಯಿತು. ಸಮಾಜದ ವಿವಿಧ ವರ್ಗಗಳಿಂದ ಅಂದರೆ ವಿದ್ಯಾರ್ಥಿಗಳಿಂದ ಹಿಡಿದು, ಮನೆಯೊಡತಿಯರ ವರೆಗೆ, ಸಂಗೀತಗಾರರಿಂದ ಹಿಡಿದು ಅಭಿಯಂತರರವರೆಗೆ ಎಲ್ಲಾ ರೀತಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಅವರಿಗೆ ನಮ್ಮ ತಂಡದವರೇ ಆದ ಸಂಗೀತಗಾರರಾದ ರಂಜಿತ, ಸುಜಯ್, ನಿಖಿಲ್ ಮತ್ತು ರೋಹಿಣಿ ಅವರಿಂದ ಶಿಬಿರದಲ್ಲಿ ತರಬೇತಿ ನೀಡಿಲಾಯಿತು. ಇದಕ್ಕೆ ನಮ್ಮ ವಾದ್ಯವೃಂದದ ಕಾರ್ತಿಕ್, ಅಕ್ಷಯ್, ಅರ್ಪಿತ್, ಮತ್ತು ಸುಹಾಸ್ ರವರ ಸಹಾಯವು ಪೂರಕವಾಗಿತ್ತು.

Prakasam’s Swaraaga Workshop Production Show

ಸಂಗೀತ ನಿರ್ದೇಶಕರ ಮಾರ್ಗದರ್ಶನ: ಈ ಶಿಬಿರಗಳಲ್ಲಿ ವಿಶೇಷ ಅತಿಥಿಗಳಾಗಿ ಸಂಗೀತ ಜಗತ್ತಿನ ಹಿರಿಯ ಮತ್ತು ಪ್ರಖ್ಯಾತ ಸಂಗೀತಗಾರರು ಭಾಗವಹಿಸಿದ್ದು ನವಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದರು. ಇದರಲ್ಲಿ ಪ್ರಮುಖವಾಗಿ ವಿ.ಮನೋಹರ್, ಶ್ರೀಧರ್ ಸಂಭ್ರಮ್, ಮತ್ತು ಸಿಂಚನ್ ದೀಕ್ಷಿತ್ ಯುವಪ್ರತಿಭೆಗಳೊಡನೆ ಕೆಲಸಮಯ ಕಳೆದು ಅವರನ್ನು ಹುರಿದುಂಬಿಸಿದರು.

ದಿನಾಂಕ ಮತ್ತು ಸಮಯ - ನವೆಂಬರ್ 14 ಭಾನುವಾರ ಸಂಜೆ 6:00 ಮತ್ತು 7:30ಕ್ಕೆ
ಸ್ಥಳ: ಕೆಂಗಲ್ ಹನುಮಂತಯ್ಯ ಕಲಾಸೌಧ, ರಾಮಾಂಜನೇಯ ದೆವಸ್ಥಾನದ ಆವರಣ, ಹನುಮಂತನಗರ, ಬೆಂಗಳೂರು.
ವಿವರಗಳಿಗಾಗಿ ಸಂಪರ್ಕಿಸಿ: ನಿಖಿಲ್ 9972315173 | www.prakasamtrust.org/ss

ಪ್ರದರ್ಶನ ಕಲಾ ಸಂಸ್ಥೆ: ಪ್ರಕಸಂ ಪ್ರದರ್ಶನಕಲೆಗಳ ಪ್ರಚಾರ, ಪಾಲನೆ, ಪೋಷಣೆ, ನಿರೂಪಣೆ ಹಾಗು ನಿರ್ವಹಿಸಲು ಪಣ ತೊಟ್ಟಿರುವ ಸಂಸ್ಥೆ. ಕಲಾಸೇವೆಗಾಗಿ ಪ್ರಕಸಂ ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆಗೆ ಪಡೆದುಕೊಂಡು ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ ಮತ್ತು ಚಲನಚಿತ್ರಗಳ ಆಯಾಮಗಳ ಪರಿಚಯವನ್ನು ಬಸವನಗುಡಿಯ ಹಾಗು ಬೆಂಗಳೂರಿನ ಸಹೃದಯಿ ನಾಗರೀಕರರಿಗೆ ಪ್ರಸ್ತುತ ಪಡಿಸಿದೆ.

ಯುವಜನರನ್ನು ಪ್ರೋತ್ಸಾಹಿಸಿ ರಂಗಭೂಮಿಗೆ ಹೊಸ ಪ್ರೇಕ್ಷಕವರ್ಗವನ್ನು ಸೃಷ್ಟಿಸಲು ಅನುಪಮ ಪ್ರದರ್ಶನ ಕಲಾ ಪ್ರಯೋಗಗಳನ್ನು ನಿರ್ಮಿಸುತ್ತ ಬಂದಿದೆ. ಈ ರಂಗಮಂಚದ ಮೇಲೆ ಪ್ರಪಂಚದ ಎಲ್ಲಾ ಭಾಗಗಳಿಂದ ಕಲಾವಿದರು ಬಂದು ತಮ್ಮ ಅನನ್ಯ ಕಲಾಜ್ಯೋತಿಯನ್ನು ಬೆಳಗಿಸಿದ್ದಾರೆ. ಜನವರಿ 2010ರಿಂದ ಜನವರಿ 2014ರವರಗೆ 1800ಕ್ಕೂ ಹೆಚ್ಚು ಕಲಾ ಪ್ರದರ್ಶನಗಳಾಗಿವೆ. (ಒನ್ ಇಂಡಿಯಾ ಸುದ್ದಿ)

English summary
Prakasam in its endeavour has started a new initiative that encourages new talent to sing on professional platforms. With a small round of basic auditions to check rhythm and pitch we selected 16 music enthusiasts in the month of July 2015.They would be presenting an hour long performance of music on Children’s day in Kala Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X