ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಕೋರ್ಟ್ ಸಮನ್ಸ್ ಸ್ವೀಕರಿಸದ ಪ್ರಜ್ವಲ್ ರೇವಣ್ಣ, ಜಾಹಿರಾತಿಗೆ ಅನುಮತಿ

|
Google Oneindia Kannada News

Recommended Video

ಯಾರ ಕೈಗೂ ಸಿಗುತ್ತಿಲ್ಲವಂತೆ ಪ್ರಜ್ವಲ್ ರೇವಣ್ಣ..? | prajwal revanna | Oneindia Kannada

ಬೆಂಗಳೂರು, ಸೆಪ್ಟೆಂಬರ್ 06: ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲೆ ಸಲ್ಲಿಸಿದ್ದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಸಮನ್ಸ್‌ ಅವನ್ನು ಸಂಸದ ಪ್ರಜ್ವಲ್ ರೇವಣ್ಣ ಸ್ವೀಕರಿಸಿಲ್ಲದಿರುವ ಕಾರಣ ಸಮನ್ಸ್‌ ಅನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಲಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಅವರು, ಆಸ್ತಿ ವಿವರಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಜ್ವಲ್ ರೇವಣ್ಣ ಅವರಿಗೆ ಸಮನ್ಸ್‌ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು ಆದರೆ ಪ್ರಜ್ವಲ್ ರೇವಣ್ಣ ಅವರು ಸಮನ್ಸ್ ಅನ್ನು ಸ್ವೀಕರಿಸಿಲ್ಲ.

ಪ್ರಜ್ವಲ್ ರೇವಣ್ಣ ಸಂಸತ್ ಸ್ಥಾನಕ್ಕೆ ಕುತ್ತು, ಹೈಕೋರ್ಟಿನಿಂದ ಸಮನ್ಸ್ ಜಾರಿಪ್ರಜ್ವಲ್ ರೇವಣ್ಣ ಸಂಸತ್ ಸ್ಥಾನಕ್ಕೆ ಕುತ್ತು, ಹೈಕೋರ್ಟಿನಿಂದ ಸಮನ್ಸ್ ಜಾರಿ

ಹಾಸನದ ಪ್ರಜ್ವಲ್ ರೇವಣ್ಣ ಅವರ ನಿವಾಸಕ್ಕೆ ಸಮನ್ಸ್ ಅನ್ನು ತಲುಪಿಸುವ ಯತ್ನ ಮಾಡಲಾಯಿತು. ಆದರೆ ಪ್ರಜ್ವಲ್ ರೇವಣ್ಣ ಅವರು ಆ ವಿಳಾಸದಲ್ಲಿ ಇರಲಿಲ್ಲ, ಹಲವು ದಿನದಿಂದ ಅವರಿಗೆ ಸಮನ್ಸ್ ನೀಡುವ ಯತ್ನ ಮಾಡಿದರೂ ಸಹ ಸಾಧ್ಯವಾಗಿರಲಿಲ್ಲ, ಹಾಗಾಗಿ ವಕೀಲರ ಮನವಿಯಂತೆ ಸಮನ್ಸ್ ಅನ್ನು ಪತ್ರಿಕೆಯ ಜಾಹಿರಾತಾಗಿ ಪ್ರಕಟಿಸಲು ಅನುಮತಿ ನೀಡಲಾಗಿದೆ.

 Prajwal Revanna not receiving High Court Summons

ಸಮನ್ಸ್‌ನ ಅನ್ವಯ ಸೆಪ್ಟೆಂಬರ್ 30 ರ ಒಳಗಾಗಿ ಪ್ರಜ್ವಲ್ ರೇವಣ್ಣ ಅವರು ಆರೋಪಕ್ಕೆ ಉತ್ತರ ನೀಡಬೇಕಿದೆ. ಸೆಪ್ಟೆಂಬರ್ 30 ರ ಒಳಗೆ ಉತ್ತರ ನೀಡದಿದ್ದಲ್ಲಿ ಕಠಿಣ ಕ್ರಮವನ್ನು ಎದುರಿಸಬೇಕಾದ ಸಂದರ್ಭ ಬರಲಿದೆ.

ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಎ.ಮಂಜು ಅವರು ಸಹ ದೂರು ಸಲ್ಲಿಸಿದ್ದು, ಆಸ್ತಿ ವಿವರ ಮುಚ್ಚಿಟ್ಟ ಆರೋಪವು ಸಾಬೀತಾದರೆ ಪ್ರಜ್ವಲ್ ರೇವಣ್ಣ ಅವರು ತಮ್ಮ ಸಂಸದ ಸ್ಥಾನ ಕಳೆದುಕೊಳ್ಳುವ ಅಪಾಯವಿದೆ.

English summary
MP Prajwal Revanna not receiving high court summons so court ordered to print summons as news paper add.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X