ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಪಿಪಿ ಮಾದರಿಯಲ್ಲಿ ಹೈಟೆಕ್ ಪೊಲೀಸ್ ಚೌಕಿಗಳ ನಿರ್ಮಾಣ

|
Google Oneindia Kannada News

ಬೆಂಗಳೂರು, ಮೇ 8: ಬಿಬಿಎಂಪಿ ವ್ಯಾಪ್ತಿಯ ಪ್ರಮುಖ 23 ಜಂಕ್ಷನ್, ವೃತ್ತಗಳಲ್ಲಿ ಪಿಪಿಪಿ ಮಾದರಿಯಲ್ಲಿ "ಹೈಟೆಕ್ ಪೊಲೀಸ್ ಚೌಕಿ(ಕಿಯೋಸ್ಕ್)"ಗಳನ್ನು ನಿರ್ಮಿಸಲಾಗಿದೆ.

ಶುಕ್ರವಾರ ಮೇಯರ್ ಗೌತಮ್ ಕುಮಾರ್, ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜೊತೆ ಹಡ್ಸನ್ ವೃತ್ತದಲ್ಲಿ ಅಧಿಕೃತ ಚಾಲನೆ ನೀಡಿದರು.

ಕೊರೊನಾ ಸಮರ್ಥವಾಗಿ ನಿಭಾಯಿಸುವಲ್ಲಿ ವಿಶ್ವದಲ್ಲೇ ಮೋದಿ ನಂಬರ್ 1 ಕೊರೊನಾ ಸಮರ್ಥವಾಗಿ ನಿಭಾಯಿಸುವಲ್ಲಿ ವಿಶ್ವದಲ್ಲೇ ಮೋದಿ ನಂಬರ್ 1

ನಗರದ ಸಂಚಾರಿ ಪೊಲೀಸರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿಬಿಎಂಪಿಯು ಸಂಚಾರಿ ಪೊಲೀಸ್ ವಿಭಾಗದ ಜೊತೆ ಚರ್ಚಿಸಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ(PPP)ದಲ್ಲಿ Signpost ಸಂಸ್ಥೆ ವತಿಯಿಂದ ಮೊದಲ ಹಂತದಲ್ಲಿ ಪ್ರಮುಖ 23 ವೃತ್ತಗಳಲ್ಲಿ ಕಿಯೋಸ್ಕ್ ಗಳನ್ನು ತೆರೆಯಲಾಗುತ್ತಿದೆ. ಇನ್ನಿತರೆ ಗುರುತಿಸಿರುವ ಪ್ರಮುಖ ಸ್ಥಳಗಳಲ್ಲಿ ಹಂತ-ಹಂತವಾಗಿ ಕಿಯೋಸ್ಕ್ ಗಳನ್ನು ನಿರ್ಮಿಸಲಾಗುವುದು ಎಂದು ಮೇಯರ್ ಈ ವೇಳೆ ತಿಳಿಸಿದರು.

ಕಿಯೋಸ್ಕ್ ಗಳ ಪ್ರಮುಖ ಅಂಶಗಳು

ಕಿಯೋಸ್ಕ್ ಗಳ ಪ್ರಮುಖ ಅಂಶಗಳು

ಮಳೆ, ಬಿಸಿಲು ಮತ್ತು ದೂಳಿನಿಂದ ಟ್ರಾಫಿಕ್‌ ಪೊಲೀಸರು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಕಲ್ಪಿಸಲಾಗುತ್ತಿದೆ. ಬಿಬಿಎಂಪಿಯು ಪೊಲೀಸ್ ಇಲಾಖೆಯ ಜೊತೆ ಚರ್ಚಿಸಿ PPP ಮಾದರಿಯಲ್ಲಿ 340 ಸ್ಥಳಗಳಲ್ಲಿ ಅಳವಡಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.

ಹೈಟೆಕ್ ಪೊಲೀಸ್ ಚೌಕಿಗಳ ನಿರ್ಮಾಣ

ಹೈಟೆಕ್ ಪೊಲೀಸ್ ಚೌಕಿಗಳ ನಿರ್ಮಾಣ

20 ವರ್ಷಗಳ ಜಾಹೀರಾತು ಆಧಾರದ ಮೇಲೆ ಹೈಟೆಕ್ ಪೊಲೀಸ್ ಚೌಕಿಗಳ ನಿರ್ಮಾಣ ಮಾಡಲಾಗಿದೆ. ಹೈಟೆಕ್ ಕಿಯೋಸ್ಕ್ ಗಳ ನಿರ್ಮಾಣದಿಂದ ಪಾಲಿಕೆಗೆ ನೆಲಬಾಡಿಗೆ ಹಾಗೂ ಜಾಹಿರಾತು ಮೂಲಕ ವಾರ್ಷಿಕ ಸುಮಾರು 20 ಲಕ್ಷ ರೂ. ಆದಾಯ ಬರುವ ಅಂದಾಜಿದೆ.

23 ಕಡೆ ಚಾಲನೆ ನೀಡಲಾಗಿದೆ

23 ಕಡೆ ಚಾಲನೆ ನೀಡಲಾಗಿದೆ

ಇಂದು ಹಡ್ಸನ್ ವೃತ್ತ, ಟ್ರಿನಿಟಿ ವೃತ್ತ, ಶಾಂತಿನಗರ ಜಂಕ್ಷನ್, ಪೊಲೀಸ್ ಕಾರ್ನರ್, ಮೇಖ್ರಿ ವೃತ್ತ ಸೇರಿದಂತೆ ಪ್ರಮುಖ 23 ಕಡೆ ಚಾಲನೆ ನೀಡಲಾಗಿದೆ. ಒಂದು ಚೌಕಿಗೆ ಅಂದಾಜು 8 ಲಕ್ಷ ರೂ. ಖರ್ಚಾಗಲಿದೆ.

ಬೆಂಕಿ ನಂದಿಸುವ ಉಪಕರಣ

ಬೆಂಕಿ ನಂದಿಸುವ ಉಪಕರಣ

ಚೌಕಿಗಳಲ್ಲಿ ಸಂಚಾರ ಪೊಲೀಸರಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬೆಂಕಿ ನಂದಿಸುವ ಉಪಕರಣ, ಫ್ಯಾನ್, ವಾಕಿಟಾಕಿ, ಧ್ವನಿವರ್ಧಕ, ಗಾಳಿ ಶುದ್ಧೀಕರಿಸುವ ಯಂತ್ರ, ಕುರ್ಚಿ, ಟೇಬಲ್‌, ಎಕ್ಸಾಸ್ಟ್‌ ಫ್ಯಾನ್‌, ಸಾರ್ವಜನಿಕರ ಕುಂದು-ಕೊರತೆ ಪರಿಶೀಲನಾ ಬಾಕ್ಸ್‌, ಕುಡಿಯುವ ನೀರಿನ ಬಾಟಲ್, ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಎಲ್‌ಇಡಿ ಸ್ಕ್ರೀನ್‌, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

English summary
PPP Model Police Check Post In Bengaluru, Mayor M Goutham Kumar Inugrates It On Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X