ಬೆಂಗಳೂರಲ್ಲಿ ಹಲವೆಡೆ ಇಂದು, ನಾಳೆ ವಿದ್ಯುತ್ ವ್ಯತ್ಯಯ
ಬೆಂಗಳೂರು, ಫೆಬ್ರವರಿ 13: ಬೆಂಗಳೂರಿನ ಹಲವೆಡೆ ಫೆಬ್ರವರಿ 13,14ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಎಚ್ಎಸ್ಆರ್ ಬಡಾವಣೆಯ ವಿದ್ಯುತ್ ವಿತರಣಾ ಕೇಂದ್ರದ ಎಫ್-2 ಹಾಗೂ ಎಫ್-10ರ ಫೀಡರ್ಗಳನ್ನು ತುರ್ತು ದುರಸ್ತಿ ಮಾಡಬೇಕಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಬುಧವಾರ ಹಾಗೂ ಗುರುವಾರ ಬೆಳಗ್ಗೆ 11ರಿಂದ ಮ.3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸ್ಪನ್ ಪೋಲ್ ಅಳವಡಿಕೆಯನ್ನು ಸ್ಥಗಿತಗೊಳಿಸಿದ ಬೆಸ್ಕಾಂ
ಫೆ.13ರಂದು ಎಫ್-10ರ ಫೀಡರ್ ವ್ಯಾಪ್ತಿಯ ಮಂಗಮ್ಮನಪಾಳ್ಯ, ಮುನೇಶ್ವರ ಬಡಾವಣೆ, ಬೊಮ್ಮನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ, ಫೆ.14ರಂದು ಎಫ್-2ರ ಫೀಡರ್ ವ್ಯಾಪ್ತಿಯ ಹೊಸ ಪಾಳ್ಯ ಮುಖ್ಯರಸ್ತೆ, ರಾಜೀವ್ಗಾಂಧಿನಗರ, ಮದೀನ ನಗರ, ವಿನಾಯಕ ನಗರ, ಹೊಸೂರು ಮುಖ್ಯರಸ್ತೆ, ಗಾರ್ವೆಬಾವಿ ಪಾಳ್ಯ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Comments
English summary
The power supply will be interrupted in and around Koramangala and HSR layout on February 13 and 14 at 11am to 3 pm due to electricity main line maintenance, BESCOM release said.
Story first published: Wednesday, February 13, 2019, 8:50 [IST]