ಬೆಂಗಳೂರು: ಈ ವಾರ ಪೂರ್ತಿ ಹಲವೆಡೆ ವಿದ್ಯುತ್ ವ್ಯತ್ಯಯ
ಬೆಂಗಳೂರು, ಏಪ್ರಿಲ್ 8: ಮುಂದಿನ ಕೆಲ ದಿನಗಳ ಕಾಲ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಪಿಬಿಎನ್ ಹಾಗೂ ಅರೆಹಳ್ಳಿ ವಿದ್ಯುತ್ ಕೇಂದ್ರದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ಏಪ್ರಿಲ್ 9 ಹಾಗೂ ಏಪ್ರಿಲ್ 12 ರಂದು ಬನಗಿರಿನಗರ, ಚನ್ನಮ್ಮನಕೆರೆ ಅಚ್ಚುಕಟ್ಟು, ಸಿಟಿ ಬೆಡ್, ಕಿಮ್ಸ್ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶ, ಲಕ್ಷ್ಮಣಪ್ಪ ಗಾರ್ಡನ್, ಪಾಪಯ್ಯ ಗಾರ್ಡನ್‌ನಲ್ಲಿ ವಿದ್ಯುತ್ ಇರುವುದಿಲ್ಲ.
ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈಗಾಗಲೇ ಅರೆಹಳ್ಳಿ ಸಬ್ ಸ್ಟೇಷನ್‌ನಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿದ್ದು, ಬುಧವಾರ ಅರೆಹಳ್ಳಿ ಮುಖ್ಯರಸ್ತೆ, ಚೈತನ್ಯ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶ, ಎಜಿಎಸ್ ಲೇಔಟ್, ಎಜಿಎಸ್ ಲೇಔಟ್ ಪಾರ್ಕ್, ಹನುಮಗಿರಿ ಲೇಔಟ್, ಸ್ಫೂರ್ತಿನಗರ, ವಡ್ಡರ ಪಾಳ್ಯದಲ್ಲಿ ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇಂದೂ ಕೂಡ ಹಲವೆಡೆ ಬೆಳಗ್ಗೆ ಕೆಲ ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿದೆ.