ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತಿಷ್ಠ ಭಾರತದಿಂದ ಗೀತೆಯ ಕುರಿತು ಜಾಗೃತಿ ಅಭಿಯಾನ

By Prasad
|
Google Oneindia Kannada News

ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಉಪದೇಶಿಸಿದ ಭಗವದ್ಗೀತೆ ಹಿಂದೂಗಳಿಗೆ ಮಾತ್ರವಲ್ಲ ಸರ್ವರಿಂದಲೂ ಮಾನ್ಯವಾದ ಪವಿತ್ರ ಗ್ರಂಥ. ಇತ್ತೀಚಿನ ದಿನಗಳಲ್ಲಿ ಕೆಲವರು ಭಗವದ್ಗೀತೆಯನ್ನೇ ಸುಡಬೇಕು ಎಂಬೆಲ್ಲ ಹೇಳಿಕೆ ನೀಡಿ ಪ್ರಚೋದನೆ ನೀಡುತ್ತಿದ್ದಾರೆ. ಈ ದೃಷ್ಟಿಯಿಂದ ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಜನರಿಗೆ ಗೀತೆಯ ಮಹತ್ವವನ್ನು ಇನ್ನಷ್ಟು ತಿಳಿಸಬೇಕು ಎಂಬ ಉದ್ದೇಶದಿಂದ ಉತ್ತಿಷ್ಠ ಭಾರತ ಸಂಘಟನೆ ವಿನೂತನ ಅಭಿಯಾನವನ್ನು ಬೆಂಗಳೂರಿನಲ್ಲಿ ಮಾ.29ರಂದು ಆರಂಭಿಸಲಿದೆ. ಈ ಸಂಗತಿ ಕುರಿತು ಪತ್ರಿಕಾ ಹೇಳಿಕೆ ಇಲ್ಲಿದೆ.

Power to change the World - Bhagavad Gita Abhiyana

ಆತ್ಮೀಯರೆ,

ಉತ್ತಿಷ್ಠ ಭಾರತ ದೇಶಭಕ್ತ ಸಮಾಜಸೇವೆಯ ಸಂಘಟನೆಯಾಗಿದ್ದು, ತನ್ನ ವಿನೂತನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಜನಜಾಗೃತಿಯನ್ನು ಮೂಡಿಸುತ್ತಿದೆ. ಅದರಲ್ಲೂ ಯುವಕರಲ್ಲಿ ದೇಶಭಕ್ತಿ ಮತ್ತು ಸಾಮಾಜಿಕ ಕಳಕಳಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ.

ಭಗವದ್ಗೀತೆ ಭಾರತದ ಶ್ರೇಷ್ಠ ಗ್ರಂಥವಾಗಿದ್ದು, ವಿಶ್ವವ್ಯಾಪಿ ಮನ್ನಣೆಯನ್ನು ಗಳಿಸಿದೆ. ಅದರ ಸಂದೇಶಗಳು ಮತ್ತು ತತ್ತ್ವಗಳು ಎಲ್ಲರನ್ನೂ ಮುಟ್ಟಬೇಕು. ಇತ್ತೀಚಿನ ದಿನಗಳಲ್ಲಿ ಭಗವದ್ಗೀತೆಯನ್ನು ಹಲವರು ವಿರೋಧಿಸುತ್ತಿದ್ದಾರೆ. ಪವಿತ್ರ ಗ್ರಂಥವಾದ ಗೀತೆಯನ್ನು ಸಾರ್ವಜನಿಕವಾಗಿ ಸುಡಬೇಕೆಂದು ಹೇಳಿಕೆಯನ್ನು ನೀಡುತ್ತಿದ್ದಾರೆ.

ಸಾಕಷ್ಟು ಜನರಿಗೆ ಗೀತೆಯ ಸಾರ ಮತ್ತು ಅದರ ಮಹತ್ವ ತಿಳಿದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಭಗವದ್ಗೀತೆಯ ಸಾರ ಮತ್ತು ತತ್ತ್ವವನ್ನು ತಿಳಿಸಲು ಉತ್ತಿಷ್ಠ ಭಾರತ "ಪವರ್ ಟು ಚೇಂಜ್ ದಿ ವರ್ಲ್ಡ್" ಎಂಬ ಭಗವದ್ಗೀತಾ ಅಭಿಯಾನವನ್ನು ಕೈಗೆತ್ತಿಕೊಂಡಿದೆ.

ಪ್ರತಿ ಮನೆಗೆ ಉಚಿತವಾಗಿ ಭಗವದ್ಗೀತೆಯನ್ನು ನೀಡಿ, ಅದರ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ಇದರ ಜೊತೆಗೆ ಆಸಕ್ತರಿಗೆ ಗೀತೆಯನ್ನು ಕಲಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ. ಒಂದು ಲಕ್ಷ ಮನೆಗೆ ಗೀತೆಯನ್ನು ತಲುಪಿಸುವ ಗುರಿಯನ್ನು ಅಭಿಯಾನ ಹೊಂದಿದೆ.

ಈ ಅಭಿಯಾನಕ್ಕೆ ಇದೇ ತಿಂಗಳು ಮಾರ್ಚ್ 29 ಭಾನುವಾರದಂದು ಬೆಂಗಳೂರಿನ ರಾಗಿಗುಡ್ಡ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ಚಾಲನೆ ದೊರೆಯಲಿದೆ. ಈ ಮಹತ್ಕಾರ್ಯಕ್ಕೆ ಉತ್ತಿಷ್ಠ ಭಾರತ ಎಲ್ಲರ ಸಹಕಾರವನ್ನು ಬಯಸುತ್ತದೆ.

ಇಂತಿ,

ಉತ್ತಿಷ್ಠ ಭಾರತ ತಂಡ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಶ್ರೀನಿವಾಸ್ - 9036778840, ವಿಜಯ್ - 9880688133

ಸೂಚನೆ : ಆಸಕ್ತರು Sponsor Gita ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಅಭಿಯಾನಕ್ಕೂ ಸಹಾಯಹಸ್ತ ನೀಡಬಹುದು. ವಿವರಗಳು ಈ ವೆಬ್ ವಿಳಾಸದಲ್ಲಿವೆ.

English summary
Uttishta Bharatha will be starting 'Power to change the World - Bhagavad Gita Abhiyana' in Bengaluru on March 29, Sunday at Ragi Gudda Prasanna Anjaneya temple to create awareness about the holy granth. The organization is intending to distribute Bhagavad Gita to the people free of cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X