ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡನೇ ದಿನ ಪೌರ ಕಾರ್ಮಿಕ ಭಾರೀ ಪ್ರತಿಭಟನೆ- ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಾ ಕಸದ ರಾಶಿ

|
Google Oneindia Kannada News

ಬೆಂಗಳೂರು, ಜುಲೈ02: ಪೌರಕಾರ್ಮಿಕರು ವಿವಿಧ ಬೇಡಿಕೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಬೆಂಗಳೂರನ್ನ ಸ್ವಚ್ಛ ಮಾಡಲ್ಲ ಎಂದು ಪೌರ ಕಾರ್ಮಿಕರು ಪಟ್ಟು ಹಿಡಿದು ಕುಳಿತಿದ್ದಾರೆ.

ಸರ್ಕಾರಕ್ಕೆ ಶಾಕ್ ನೀಡಲು ಮುಂದಾದ ಪೌರ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು ಪ್ರೀಡಂ ಪಾಕ್೯ನಲ್ಲಿ 2 ನೇ ದಿನದ ಧರಣಿ ಮುಂದುವರೆದಿದೆ. ಪ್ರತಿಭಟನೆಯಲ್ಲಿ 16 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರು ಭಾಗಿಯಾಗಿದ್ದಾರೆ. 2 ದಿನದ ಪೌರ ಕಾರ್ಮಿಕರ ಅನಿರ್ದಿಷ್ಟವಾದಿ ಮುಷ್ಕರವಾಗಿದ್ದು ನೌಕರಿ ಕಾಯಂ ಮಾಡುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿಗಳೇ ಬಂದು ನೌಕರಿ ಖಾಯಂ ಮಾಡುವವರೆಗೂ ಮುಷ್ಕರ ನಡೆಸಲು ಪೌರಕಾರ್ಮಿಕ ಸಂಘಟನೆಗಳಿಂದ ನಿರ್ಧಾರ ಮಾಡಿದ್ದಾರೆ. ಜುಲೈ 1ರಂದು ನಡೆದ ಸಂಪುಟ ಸಭೆಯಲ್ಲಿ ಸಂಕಷ್ಟ ಭತ್ಯೆ ಎಂದು ಎರಡು ಸಾವಿರವನ್ನು ಸರ್ಕಾರ ಹೆಚ್ಚಳ ಮಾಡಿದೆ. ಇದರ ಜೊತೆ ನೇರವೇತನ ಪಡೆಯುತ್ತಿರುವ ನೌಕರರ ಖಾಯಂಗೆ ತಾತ್ವಿಕ ಒಪ್ಪಿಗೆಯನ್ನು ನೀಡಿದ್ದರು. ಆದರೂ ಬಾಯಿ ಮಾತಿನ ಭರವಸೆಗಿಂತಲೂ ಮುಖ್ಯಮಂತ್ರಿ ಆಗಮಿಸಿ ಖುದ್ದು ಭರವಸೆ ನೀಡಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುತ್ತಿದೆ.

ಪೌರ ಕಾರ್ಮಿಕರ ಬೇಡಿಕೆಗೆ ಈಡೇರಿಸಲು ಬಿಗಿ ಪಟ್ಟು

ಪೌರ ಕಾರ್ಮಿಕರ ಬೇಡಿಕೆಗೆ ಈಡೇರಿಸಲು ಬಿಗಿ ಪಟ್ಟು

- ಬೆಂಗಳೂರು ಹಾಗೂ ರಾಜ್ಯಾದ್ಯಂತ ನೇರವೇತನ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು

- ಬೆಂಗಳೂರು ನಗರ ಮೇಲ್ವಿಚಾರಕರನ್ನು ( ಮೇಸ್ತ್ರಿ) ಖಾಯಂ ಮಾಡಬೇಕು

- ಬೆಂಗಳೂರು ನಗರ ಆಟೋಚಾಲಕರು, ಲಾರಿ ಚಾಲಕರು, ಲೋಡರ್ಸ್ ಸಹಾಯಕರನ್ನು ಖಾಯಂ ಮಾಡಬೇಕು

- ದಿವಂತಗ ಐ.ಡಿ.ಪಿ. ಸಾಲಪ್ಪರವರ ವರದಿಯನ್ನು ಜಾರಿಗೆ ತರಬೇಕು

ಬೆಂಗಳೂರು ಹಾಗೂ ರಾಜ್ಯಾದ್ಯಂತ ನೇರವೇತನ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು. ಬೆಂಗಳೂರು ನಗರ ಮೇಲ್ವಿಚಾರಕರನ್ನು ( ಮೇಸ್ತ್ರಿ) ಖಾಯಂ ಮಾಡಬೇಕು. ಬೆಂಗಳೂರು ನಗರ ಆಟೋಚಾಲಕರು, ಲಾರಿ ಚಾಲಕರು, ಲೋಡರ್ಸ್ ಸಹಾಯಕರನ್ನು ಖಾಯಂ ಮಾಡಬೇಕು. ದಿವಂತಗ ಐ.ಡಿ.ಪಿ. ಸಾಲಪ್ಪರವರ ವರದಿಯನ್ನು ಜಾರಿಗೆ ತರಬೇಕು. ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡ್ಬೇಕು ಎಂಬ ಬೇಡಿಕೆಯನ್ನು ಬಿಬಿಎಂಪಿಯ ಪೌರ ಕಾರ್ಮಿಕರು ಮಾಡಿದ್ದರು. ಆದರೆ ಬಿಬಿಎಂಪಿಯ ಪೌರಕಾರ್ಮಿಕರ ಬೇಡಿಕೆಗೆ ಸರ್ಕಾರ ಈಡೇರಿಸಿಲ್ಲ. ಸಂಕಷ್ಟ ಭತ್ಯೆ ಎಂದು ತಿಂಗಳಿಗೆ ಎರಡು ಸಾವಿರ ನೀಡಲು ಮಾತ್ರ ಸಂಪುಟ ತೀರ್ಮಾನಿಸಿದೆ.

ರಾಮಲಿಂಗ ರೆಡ್ಡಿ ಮತ್ತು ಜಮೀರ್ ಸಹಕಾರ

ರಾಮಲಿಂಗ ರೆಡ್ಡಿ ಮತ್ತು ಜಮೀರ್ ಸಹಕಾರ

ಪೌರಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಲಿರುವ ರಾಮಲಿಂಗಾರೆಡ್ಡಿಯವರು ಆಗಮಿಸಿ ಬೆಂಬಲವನ್ನು ವ್ಯಕ್ತಪಡಿಸಿದರು. ರಾಮಲಿಂಗಾರೆಡ್ಡಿಯವರು ಭೇಟಿಮಾಡಿ ಪೌರ ಕಾರ್ಮಿಕರೊಂದಿಗೆ ಚರ್ಚೆಯನ್ನು ನಡೆಸಿದರು. ಜಮೀರ್ ಅಹಮದ್ ರವರು ಬೇಡಿಕೆ ಈಡೇರಿಕೆ ಆಗೋ ವರೆಗೆ ನಿಮ್ಮ ಜೊತೆ ನಾನಿದ್ದೇನೆ ಅಂತ ಭರವಸೆ ನೀಡಿದರು. ""ಪೌರ ಕಾರ್ಮಿಕರು 2 ದಿನದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಕಿವಿನ್ನು ಇಲ್ಲ , ಕಣ್ಣು ಇಲ್ಲ, ಬಡವರ ಬಗ್ಗೆ ಕಾಳಜಿ ಇಲ್ಲ. 2016 ರಲ್ಲಿ 7 ಸಾವಿರ ಇತ್ತು , ಸಿದ್ದರಾಮಯ್ಯ ಸರ್ಕಾರದಲ್ಲಿ 18 ಸಾವಿರಕ್ಕೆ ಏರಿಕೆ ಮಾಡಲಾಗಿದೆ . ಕಟ್ ಆಗಿ 13 ಸಾವಿರ ರೂಪಾಯಿ ಬರುತ್ತೆ ಇದರಿಂದ ಜೀವನ ನಡೆಸಲು ಆಗಲ್ಲ. 7 ವರ್ಷದಿಂದ ಸರ್ಕಾರ ಪೌರ ಕಾರ್ಮಿಕರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ , ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಇದ್ದಾರೆ. ಕೋವಿಡ್ ಸಮಯದಲ್ಲಿ ಜೀವ ಭಯ ತೊರೆದು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಇವತ್ತು 4 ಗಂಟೆಗೆ ಫ್ರಿಡಂ ಪಾರ್ಕ್ ಗೆ ಬರುತ್ತಾರೆ. ಬಡವರ ಪರ ಕಾಂಗ್ರೆಸ್ ಪಕ್ಷ ಇದೆ. ಬೇಡಿಕೆ ಈಡೇರಿಲ್ಲ ಅಂದ್ರೆ ಸೋಮವಾರ ದಿಂದ ನಾನು ಕೂಡ ಪೌರ ಕಾರ್ಮಿಕರ ಜೊತೆ ಪ್ರತಿಭಟನೆಯಲ್ಲಿ ಕೂರುತ್ತೇನೆ. ಅವರು 10 ದಿನ ಪ್ರತಿಭಟನೆಗೆ ಕೂಳಿತರೇ ನಾನು ಕೂರುತ್ತೇನೆ , ಬೆಳ್ಳಗ್ಗೆಯಿಂದ ಸಂಜೆ ವರೆಗೆ ನಾನು ಕೂಡ ಅವರ ಒಟ್ಟಿಗೆ ಕೂರುತ್ತೇನೆ'' ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು.

ಗುತ್ತಿಗೆ ಪದ್ದತಿ ಬಿಟ್ಟ ನೇರ ವೇತನ ಪದ್ದತಿ ಜಾರಿ

ಗುತ್ತಿಗೆ ಪದ್ದತಿ ಬಿಟ್ಟ ನೇರ ವೇತನ ಪದ್ದತಿ ಜಾರಿ

2017ರಲ್ಲಿ ಮೂರು ದಿನ ಪೌರ ಕಾರ್ಮಿಕರು ಬೃಹತ್ ಪ್ರತಿಭಟನೆ. ಅಂದಿನ ಸರ್ಕಾರ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ನೇರವೇತನ ಪದ್ಧತಿ ಜಾರಿ ಮಾಡಿದ್ದರು. ಆದರೆ ನೇರ ವೇತನ ಪದ್ಧತಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೋರಾಟ ಮಾಡಲಾಗುತ್ತಿದೆ. ನೇರವೇತನ ಪೌರಕಾರ್ಮಿಕರಿಗೆ ಒಟ್ಟು 17,995 ರೂ ಸಂಬಳ, ಇದರಲ್ಲಿ ಇಎಸ್ಐ, ಪಿಎಫ್, ಕಟ್ ಮಾಡಿ ವೇತನ ಸಿಗುವುದು 11000 ರೂ‌‌ ದಿಂದ 14000 ಸಾವಿರ ಮಾತ್ರ ಎಂಬುದು ಪೌರ ಕಾರ್ಮಿಕರ ಅಳಲಾಗಿದೆ.

ಆರೋಗ್ಯದ ಸಮಸ್ಯೆ ಹೆಚ್ಚಳದ ಸಮಸ್ಯೆ

ಆರೋಗ್ಯದ ಸಮಸ್ಯೆ ಹೆಚ್ಚಳದ ಸಮಸ್ಯೆ

ಬಿಬಿಂಪಿ ನೀಡುತ್ತಿರುವ ಸಂಬಳದಿಂದ ಕುಟುಂಬ ನಡೆಸಲು ಕಷ್ಟವಾಗ್ತಿದೆ. ಮನೆ ಬಾಡಿಗೆ, ಮಕ್ಕಳಿಗೆ ವಿದ್ಯಾಭ್ಯಾಸ, ಕುಟುಂಬವನ್ನು ಪೋಷಣೆ, ದಿನ ನಿತ್ಯದ ಭತ್ಯಗಳು ದರ ಹೆಚ್ಚಾಗಿವೆ. ಬೆಂಗಳೂರಿನಲ್ಲಿ ನಿತ್ಯ ಪೌರ ಕಾರ್ಮಿಕರು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆ ಸ್ವಚ್ಛ ಮಾಡಲಿದ್ದಾರೆ. ಆದರೆ ನೇರವೇತನ ಪೌರ ಕಾರ್ಮಿಕರಿಗೆ ನಾನಾ ರೀತಿಯ ಕಾಯಿಲೆ ಬರುತ್ತಿವೆ. ಹೃದಯಘಾತ, ಡಯಾಬಿಟಿಸ್, ಕಿಡ್ನಿ ವೈಫಲ್ಯ, ಉಸಿರಾಟದ ತೊಂದರೆ ಆಗ್ತಿದೆ. ಇದರ ಜೊತೆಗೆ ನೇರವೇತನ ಪೌರಾ ಕಾರ್ಮಿಕರಿಗೆ ಆರೋಗ್ಯ ಭದ್ರತೆ ಹೆಲ್ತ್ ಕಾಡ್೯, ಹೆಚ್ಚುವರಿ ವೇತನ ಹಾಗೂ ಬೋನಸ್ ನೀಡ್ತಿಲ್ಲ ಎಂಬುದು ಪೌರಕಾರ್ಮಿಕರ ಸಮಸ್ಯೆಗಳಾಗಿತ್ತು.

ಸಂಕಷ್ಟ ಭತ್ಯೆ ಹೆಚ್ಚಳ ಮಾಡಿ ಸುಮ್ಮನಾದ ಸರ್ಕಾರ

ಸಂಕಷ್ಟ ಭತ್ಯೆ ಹೆಚ್ಚಳ ಮಾಡಿ ಸುಮ್ಮನಾದ ಸರ್ಕಾರ

ಪೌರ ಕಾರ್ಮಿಕರು ನೇರ ವೇತನ ಪದ್ದತಿಯಿಂದ ನೇಮಕಾತಿಯನ್ನು ಖಾಯಂ ಮಾಡುವಂತೆ ಆಗ್ರಹಿಸುತ್ತಿದ್ದರು. ಆದರೆ ಪೌರ ಕಾರ್ಮಿಕರ ಆಗ್ರಹಕ್ಕೆ ಮಣಿಯದ ಸರ್ಕಾರ ಸಂಕಷ್ಟ ಭತ್ಯೆ ಎರಡು ಸಾವಿರ ಹೆಚ್ಚಳ ಮಾಡಿದೆ. ಪ್ರತಿ ತಿಂಗಳು ಸಂಕಷ್ಟ ಭತ್ಯೆ ನೀಡಲಾಗುವುದು ಎಂದು ಮಾತ್ರ ಸಂಪುಟ ಸಭೆಯಲ್ಲಿ ತೀರ್ಮಾನವನ್ನು ಮಾಡಲಾಗಿದೆ. ಪೌರಕಾರ್ಮಿಕರನ್ನು ಖಾಯಂ ಮಾಡುವ ಬಗ್ಗೆ ಘೋಷಿಸಬೇಕು ಎಂಬುದು ಪ್ರತಿಭಟನೆಯಲ್ಲಿ ಪಾಲ್ಗೋಡಿರುವ ಪೌರಕಾರ್ಮಿಕರ ಆಗ್ರಹವಾಗಿದೆ.

English summary
The ongoing protest by Pourakarmikas demanding various demands has entered the second day. The Pourakarmikas are sitting there insisting that we will not clean Bengaluru until our demand is met.know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X