ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದ ಪೌರಕಾರ್ಮಿಕರು

|
Google Oneindia Kannada News

ಬೆಂಗಳೂರು, ಜುಲೈ 01: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ರಾಜ್ಯಾದ್ಯಂತ ಪೌರ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಕಾರ್ಮಿಕರು ಹೇಳಿದ್ದಾರೆ.

ಪ್ರಸ್ತುತ ನೇರ ಪಾವತಿ ವ್ಯವಸ್ಥೆಯಲ್ಲಿರುವ ಅಥವಾ ಗುತ್ತಿಗೆದಾರರ ಅಧೀನದಲ್ಲಿರುವ ಪೌರಕಾರ್ಮಿಕರಿಗೆ ಹಂತ ಹಂತವಾಗಿ ಖಾಯಂ ಉದ್ಯೋಗ ಸ್ಥಾನಮಾನ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರೂ, ಪೌರ ಕಾರ್ಮಿಕರು ಶುಕ್ರವಾರದಿಂದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.

ಜುಲೈ 1ರಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿದ ಪೌರ ಕಾರ್ಮಿಕರುಜುಲೈ 1ರಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿದ ಪೌರ ಕಾರ್ಮಿಕರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸಫಾಯಿ ಕರ್ಮಚಾರಿ ಮತ್ತು ಪೌರಕಾರ್ಮಿಕರ ಸಂಘ ಮತ್ತು ಕ್ರಿಯಾ ಸಮಿತಿಯೂ ಕೂಡ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಮೂಲಭೂತ ಆರೋಗ್ಯ, ಕುಡಿಯುವ ನೀರು, ಹೆರಿಗೆ ರಜೆ ಮತ್ತು ವಿಶ್ರಾಂತಿ ಕೊಠಡಿ ಸೇರಿದಂತೆ ಯಾವುದೇ ಸೌಲಭ್ಯಗಳೂ ಸಿಗುತ್ತಿಲ್ಲ ಎಂದು ಪೌರಕಾರ್ಮಿಕರು ಆರೋಪಿಸಿದ್ದಾರೆ. ಮೂಲಸೌಕರ್ಯ ಕಲ್ಪಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವೊಬ್ಬ ಶಾಸಕರಾಗಲಿ, ಸಚಿವರಾಗಲಿ ಅಥವಾ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಎಲ್ಲಾ ಗುತ್ತಿಗೆದಾರರು ಮತ್ತು ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಪೌರ ಕಾರ್ಮಿಕರು ಆರೋಪಿಸಲಾಗುತ್ತಿದೆ.

ಮನೆ-ಮನೆ ಕಸ ಸಂಗ್ರಹ; 5 ವರ್ಷಗಳ ಟೆಂಡರ್ ನೀಡಲಿದೆ ಬಿಬಿಎಂಪಿಮನೆ-ಮನೆ ಕಸ ಸಂಗ್ರಹ; 5 ವರ್ಷಗಳ ಟೆಂಡರ್ ನೀಡಲಿದೆ ಬಿಬಿಎಂಪಿ

ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಾರ್ಮಿಕರ ಆಕ್ರೋಶ

ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಾರ್ಮಿಕರ ಆಕ್ರೋಶ

ಪೌರ ಕಾರ್ಮಿಕರ ವೇತನ ಹೆಚ್ಚಳದಲ್ಲೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಎರಡು ವರ್ಷಗಳ ಸಂದಿಗ್ಧ ಪರಿಸ್ಥಿತಿಯಲ್ಲೂ ಕಾರ್ಮಿಕರ ವೇತನವನ್ನು ಚಿಲ್ಲರೇ ಲೆಕ್ಕದಲ್ಲಿ ಹೆಚ್ಚಳ ಮಾಡಲಾಗಿದೆ. ನೂರು ಇನ್ನೂರು ರೂಪಾಯಿ ಲೆಕ್ಕದಲ್ಲಿ ವೇತನವನ್ನು ಹೆಚ್ಚಳ ಮಾಡಿದ್ದಾರೆ ಎಂದು ಪೌರ ಕಾರ್ಮಿಕರು ಆರೋಪಿಸಿದ್ದಾರೆ.

ನೈರ್ಮಲ್ಯ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಖಾತ್ರಿಪಡಿಸಬೇಕು ಮತ್ತು ಕಾರ್ಮಿಕರಿಗೆ ಮೂಲಭೂತ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ವಸತಿ ನೀಡಬೇಕು ಎಂದು ಸಂಘವು ಒತ್ತಾಯಿಸಿದೆ.

ಬೇಡಿಕೆ ಈಡೇರುವವರೆಗೂ ಮಣಿಯಲ್ಲ ಎಂದ ಕಾರ್ಮಿಕರು

ಬೇಡಿಕೆ ಈಡೇರುವವರೆಗೂ ಮಣಿಯಲ್ಲ ಎಂದ ಕಾರ್ಮಿಕರು

ಮನೆಯಿಂದ ತ್ಯಾಜ್ಯ ಎತ್ತದಂತೆ ಬಿಬಿಎಂಪಿಗೆ ಕಾರ್ಮಿಕರು ಬೆದರಿಕೆ ಹಾಕಿರುವುದು ಇದೇ ಮೊದಲಲ್ಲ. ಪೌರಕಾರ್ಮಿಕರು ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ 10 ಬಾರಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದರು, ಆದರೆ ಅವುಗಳಲ್ಲಿ ಯಾವುದೂ ಒಂದು ವಾರಕ್ಕಿಂತ ಹೆಚ್ಚು ಕಾಲ ಉಳಿಯಲಿಲ್ಲ.

ಒಂದು ವಾರಕ್ಕೂ ಹೆಚ್ಚು ಕಾಲ ಮುಷ್ಕರ ನಡೆದರೆ ಮನೆ, ಬೀದಿ ಬದಿಗಳಲ್ಲಿ ತ್ಯಾಜ್ಯ ರಾಶಿ ಬೀಳಬಹುದು. ಬರೀ ಆಶ್ವಾಸನೆಗಳನ್ನು ನೀಡಲಾಗುತ್ತಿದೆ ಆದರೆ ಈ ಬಾರಿ ತಮ್ಮ ಯಾವುದೇ ಆಶ್ವಾಸನೆಗೂ ಮಣಿಯುವುದಿಲ್ಲ ಎಂದು ಕಾರ್ಮಿಕರು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 18 ಸಾವಿರ ಕಾರ್ಮಿಕರು

ಬಿಬಿಎಂಪಿ ವ್ಯಾಪ್ತಿಯಲ್ಲಿ 18 ಸಾವಿರ ಕಾರ್ಮಿಕರು

18,000 ಪೌರಕಾರ್ಮಿಕರಲ್ಲಿ 1,000 ಮಂದಿ ಮಾತ್ರ ಖಾಯಂ ಆಗಿದ್ದಾರೆ. ಸುಮಾರು 15,000 ನೇರ ಪಾವತಿ ವ್ಯವಸ್ಥೆಯಲ್ಲಿ ಬರುತ್ತದೆ ಮತ್ತು ಇನ್ನೂ 2,000 ನಗರ ಸ್ಥಳೀಯ ಸಂಸ್ಥೆಯಿಂದ ಗುತ್ತಿಗೆದಾರರಿಗೆ ಕೆಲಸ ಮಾಡುತ್ತದೆ.

ನೇರ ಪಾವತಿ ವ್ಯವಸ್ಥೆಯಲ್ಲಿರುವ 15,000 ಕಾರ್ಮಿಕರು ರಸ್ತೆಗಳನ್ನು ಗುಡಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ, ಆದರೆ ಗುತ್ತಿಗೆದಾರರ ಅಡಿಯಲ್ಲಿ ಕಾರ್ಮಿಕರು ಮನೆಗಳಿಂದ ತೇವ ಮತ್ತು ಒಣ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಈ ಕಾಯಂ ಅಲ್ಲದ ಉದ್ಯೋಗಿಗಳಿಗೆ ಕನಿಷ್ಠ 14,000 ರು. ವೇತನ ನೀಡಲಾಗುತ್ತದೆ. ಪಿಎಫ್‌ ಮತ್ತು ಇಎಸ್‌ಐ ಕಡಿತದೊಂದಿಗೆ, ಕಾರ್ಮಿಕರಿಗೆ 11,000 ರುಪಾಯಿ ಮಾತ್ರ ಸಿಗುತ್ತಿದೆ.

ಕಸ ವಿಲೇವಾರಿ ಮೇಲೆ ಪರಿಣಾಮ

ಕಸ ವಿಲೇವಾರಿ ಮೇಲೆ ಪರಿಣಾಮ

ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರದಿಂದ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆ (ಎಸ್‌ಡಬ್ಲ್ಯೂಎಂ) ಮೇಲೆ ಮುಷ್ಕರ ಭಾಗಶಃ ಪರಿಣಾಮ ಬೀರಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೊಂದಿಗೆ ನೇರ ಪಾವತಿ ಒಪ್ಪಂದ ಮಾಡಿಕೊಂಡಿರುವ 16,000 ಪೌರಕಾರ್ಮಿಕರಲ್ಲಿ ಹೆಚ್ಚಿನವರು ಕೆಲಸದಿಂದ ದೂರ ಉಳಿದಿದ್ದು, ಮನೆ-ಮನೆ ಕಸ ಸಂಗ್ರಹಣೆಗೆ ಭಾಗಶಃ ತೊಂದರೆಯಾಗಿದೆ. ಕೆಲ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

"ಹೆಚ್ಚಿನ ಪೌರಕಾರ್ಮಿಕರು ಕರ್ನಾಟಕದಾದ್ಯಂತ ಕೆಲಸದಿಂದ ದೂರ ಉಳಿದಿದ್ದಾರೆ ಮತ್ತು ಜುಲೈ 1 ರಿಂದ ಪ್ರಾರಂಭವಾಗುವ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. ಅನೇಕ ಕಸ ಸಂಗ್ರಹಿಸುವ ವ್ಯಾನ್ ಚಾಲಕರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ, ವಿಶೇಷವಾಗಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ನಿಯೋಜಿಸಲ್ಪಟ್ಟವರು" ಎಂದು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘದ ಮೈತ್ರೇಯಿ ಕೃಷ್ಣನ್ ಹೇಳಿದ್ದಾರೆ.

ಬಿಬಿಎಂಪಿಯ ಎಸ್‌ಡಬ್ಲ್ಯುಎಂ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಪ್ರತಿಕ್ರಿಯೆ ನೀಡಿ, "ಕಸ ಗುಡಿಸುವ ಕಾರ್ಯಕ್ಕೆ ತೊಂದರೆಯಾಗಿದೆ, ಆದರೆ ಬೆಂಗಳೂರಿನಾದ್ಯಂತ ಕಸ ಸಂಗ್ರಹಣೆಗೆ ಯಾವುದೇ ತೊಂದರೆಯಾಗಿಲ್ಲ. ವ್ಯಾನ್ ಡ್ರೈವರ್‌ಗಳು ಮತ್ತು ಕ್ಲೀನರ್‌ಗಳು ಗುತ್ತಿಗೆದಾರರ ಉದ್ಯೋಗಿಗಳಾಗಿರುವುದರಿಂದ ಅವರು ಮುಷ್ಕರಕ್ಕೆ ಬೆಂಬಲ ನೀಡುತ್ತಿಲ್ಲ. ಕಸ ನಿರ್ವಹಣೆಗೆ ಅಡ್ಡಿಪಡಿಸಿದರೆ ಮುಂದಿನ ಐದು ವರ್ಷಗಳ ಅವಧಿಗೆ ಕರೆಯಲಾಗುವ ಹೊಸ ಟೆಂಡರ್‌ನಿಂದ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಗುತ್ತಿಗೆದಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದೇವೆ. ಯಾವುದೇ ಅಡ್ಡಿ ಉಂಟಾಗಿಲ್ಲ" ಎಂದರು.


ಖಾಯಂ ಉದ್ಯೋಗಕ್ಕಾಗಿ ಪೌರಕಾರ್ಮಿಕರ ಬೇಡಿಕೆಗಳ ಕುರಿತು, ಕಾನೂನು ಅಡೆತಡೆಗಳಿಂದ ವಿಳಂಬವಾಗಿದೆ ಎಂದು ಹೇಳಿದರು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 1 ರಂದು ಸಂಜೆ ಸಮಸ್ಯೆ ಪರಿಹರಿಸಲು ಪರಿಶೀಲನಾ ಸಭೆ ನಡೆಸಲಿದ್ದಾರೆ.

Recommended Video

July 1 ರಿಂದ‌ ಪ್ಲಾಸ್ಟಿಕ್ ಬ್ಯಾನ್: ಯಾವ್ಯಾವ ಪ್ಲಾಸ್ಟಿಕ್‌ ವಸ್ತುಗಳಿಗೆ‌ ನಿಷೇಧ? | *India | OneIndia Kannada

English summary
Around 15,000 Pourakarmikas are going on an indefinite strike in Bengaluru from today demanding permanent employment. They have threatened they won't lift waste until their demands are met.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X