• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಸ ಹಾಕೋ ಜಾಗದಲ್ಲಿ ರಂಗೋಲಿ ಬಿಡಿಸಿ ಗಾಂಧಿಗಿರಿ ತೋರಿದ ಪೌರಕಾರ್ಮಿಕರು

|

ಬೆಂಗಳೂರು, ಅಕ್ಟೋಬರ್ 31: ತ್ಯಾಜ್ಯ ಎಸೆಯೋ ಮುನ್ನ ಈ ರಂಗೋಲಿನಾದ್ರು ನೋಡ್ರಪ್ಪಾ, ಕಸ ಬಿಸಾಡುವ ಮನಸಾಗಲ್ಲ ಎಂದು ಹೇಳುತ್ತಾ ತ್ಯಾಜ್ಯ ಎಸೆಯುವ ಜಾಗದಲ್ಲಿ ರಂಗೋಲಿ ಬಿಡಿಸುವ ಮೂಲಕ ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಛತೆ ಬಗ್ಗೆ ಜಾಗೃತಿಗೆ ಮುಂದಾಗಿದ್ದಾರೆ.

ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ಮಾಡಲು ಹೈಕೋರ್ಟ್ ಬಿಬಿಎಂಪಿಗೆ ಪದೇ ಪದೇ ಚಾಟಿ ಬೀಸುತ್ತಿದೆ. ಅಷ್ಟೇ ಅಲ್ಲದೆ ಅಕ್ಟೋಬರ್ 31ರೊಳಗೆ ಕಸಮುಕ್ತ ನಗರವನ್ನಾಗಿ ಮಾಡಲು ಅಂತಿಮ ಗಡುವು ನೀಡಿದೆ.

ಸಂಬಳವಿಲ್ಲದೆ ಸಾಯುತ್ತಿರುವ ಪೌರಕಾರ್ಮಿಕರು:ಸರ್ಕಾರದ ವಿರುದ್ಧ ಆಕ್ರೋಶ

ಬಿಬಿಎಂಪಿಯ ಪ್ರತಿಯೊಂದು ವೈಫಲ್ಯವನ್ನು ಹುಡುಕುತ್ತಿರುವ ಹೈಕೋರ್ಟ್ ಒಂದೊಂದೇ ವಿಚಾರವನ್ನು ಕೈಗೆತ್ತಿಕೊಂಡು ಸರಿಪಡಿಸಿಉವ ಪ್ರಯತ್ನ ಮಾಡುತ್ತಿದೆ. ಹಾಗೆಯೇ ಬಿಬಿಎಂಪಿಯು ಕೂಡ ತನಗಾದ ಪ್ರಯತ್ನವನ್ನು ಆರಂಭಿಸಿದೆ. ಕಸ ಮುಕ್ತ ನಗರವನ್ನಾಗಿಸಲು ಪೌರಕಾರ್ಮಿಕರು ಉಪಾಯೊಂದನ್ನು ಮಾಡಿದ್ದು, ತ್ಯಾಜ್ಯ ಎಸೆಯುವ ಜಾಗದಲ್ಲಿ ರಂಗೋಲಿಯನ್ನು ಹಾಕುವ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಕಥೆ 1 : ಕಸ ಹಾಕುವವರ ಮನೆಗೆ ನಾನು ತಪ್ಪದೆ ಬರುತ್ತೇನೆ!

ಇದಕ್ಕೆ ಪೂರಕವಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂಬಿ ಕಾಂಪೌಂಡ್ ಬದಿಯಲ್ಲಿರುವ ಕಸದ ಬ್ಲಾಕ್‌ಸ್ಪಾಟ್‌ನಲ್ಲಿ ಪೌರಕಾರ್ಮಿಕರು ರಂಗೋಲಿ ಬಿಡಿಸಿ ಗಮನ ಸೆಳೆದಿದ್ದಾರೆ. ಅದೇ ರೀತಿ ನಗರದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಹಾಗೆಂದ ಮಾತ್ರಕ್ಕೆ ಕಸ ಹಾಕುವವರ ಸಂಖ್ಯೆಯೇನೂ ಕಡಿಮೆ ಆಗಿಲ್ಲ ಆದರೆ ಇದೊಂದು ವಿನೂತನ ಪ್ರಯತ್ನವಾಗಿದೆ.

ಐಐಎಂಬಿ ಸುತ್ತಮುತ್ತಲಿನ ನಿವಾಸಿಗಳು ನಿತ್ಯ ಕಸವನ್ನು ತಂದು ಕಾಂಪೌಂಡ್ ಬಳಿಯಲ್ಲಿ ಬಿಸಾಡುತ್ತಿದ್ದರು. ತ್ಯಾಜ್ಯವನ್ನು ಕಾಂಪೌಂಡ್ ಬಳಿ ಹಾಕದಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಇಲ್ಲಿ ಕಸ ಹಾಕದಂತೆ ನಿತ್ಯ ಜನರಲ್ಲಿ ಮನವಿ ಮಾಡಿಕೊಳ್ಳುತ್ತಲೇ ಇದ್ದೇವೆ ಎಂದು ಪೌರಕಾರ್ಮಿಕರು ತಿಳಿಸಿದ್ದಾರೆ.

ಗ್ರಾಮ ಪಂಚಾಯ್ತಿಗಳಲ್ಲೂ ಶೀಘ್ರ ಘನತ್ಯಾಜ್ಯ ನಿರ್ವಹಣಾ ಘಟಕ

ಪರ ಕಾರ್ಮಿಕರು ಕಸವನ್ನು ತೆರವುಗೊಳಿಸಿ ಬಳಿಕ ಮತ್ತೆ ತಂದು ಸುರಿಯುತ್ತಿದ್ದಾರೆ ಹಾಗಾಗಿ ಕಾರ್ಮಿಕರು ರಂಗೋಲಿ ಬಿಡಿಸುವಂತಹ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Poura Karmikas have taken an innovative initiation by decorating Rangoli on waste in public premises as part of waste free Bengaluru campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more