ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆಯಲ್ಲಿ ಗುಂಡಿ; ಮುಖ್ಯ ಕಾರ್ಯದರ್ಶಿಗೆ ಪತ್ರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21 : ಬೆಂಗಳೂರಿನ ಜಯನಗರ ಮತ್ತು ಬಿ. ಟಿ. ಎಂ. ವಿಧಾನಸಭಾ ಕ್ಷೇತ್ರದಲ್ಲಿನ ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿವೆ.

ಬಿ. ಟಿ. ಎಂ. ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಪತ್ರ ಬರೆದಿದ್ದಾರೆ. ಅಧಿಕಾರಿಗಳ ಜೊತೆ ಹಲವು ಬಾರಿ ಸಭೆಗಳನ್ನು ನಡೆಸಿದರೂ ರಸ್ತೆಗೆ ಡಾಂಬರೀಕರಣವಾಗಿಲ್ಲ ಎಂದು ದೂರಿದ್ದಾರೆ.

ಅಶೋಕ್ ಖೇಣಿಗೆ ರಸ್ತೆ 'ನೈಸ್' ಮಾಡಲು ವಾರದ ಗಡುವು ನೀಡಿದ ಸರಕಾರಅಶೋಕ್ ಖೇಣಿಗೆ ರಸ್ತೆ 'ನೈಸ್' ಮಾಡಲು ವಾರದ ಗಡುವು ನೀಡಿದ ಸರಕಾರ

ಜಯನಗರ ಮತ್ತು ಬಿ. ಟಿ. ಎಂ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಶ್ರೀ ಜಯದೇವ ಜಂಕ್ಷನ್ ತನಕ, ಜಿ ಡಿ ಮರದಿಂದ ಡೈರಿ ವೃತ್ತದ ವರೆಗೂ, ಜಯದೇವ ಆಸ್ಪತ್ರೆಯಿಂದ ಆರ್. ವಿ. ರಸ್ತೆಯವರೆಗೂ ನಮ್ಮ ಮೆಟ್ರೋ ನಿರ್ಮಾಣ ಕಾರ್ಯ ನಡೆಯುತ್ತಿದೆ.

ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್‌ಗಳಿಗೆ 1 ಸಾವಿರ ರೂ. ದಂಡರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್‌ಗಳಿಗೆ 1 ಸಾವಿರ ರೂ. ದಂಡ

Potholes In Bengaluru Road Letter To Chief Secretary

ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಹೆಚ್ಚು ರಸ್ತೆ ಗುಂಡಿಗಳಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಕುರಿತು ನಾನು ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಸಭೆ, ಚರ್ಚೆಗಳನ್ನು ನಡೆಸಿದ್ದು, ಆದರೆ ಈ ತನಕ ಡಾಂಬರೀಕರಣ ಕಾಮಗಾರಿ ಕೈಗೊಂಡಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಬೆಂಗಳೂರಿನ ರಸ್ತೆಗಳು ಬೆಣ್ಣೆಯಂತಾಗಬೇಕು: ಹೈಕೋರ್ಟ್ ತಾಕೀತುಬೆಂಗಳೂರಿನ ರಸ್ತೆಗಳು ಬೆಣ್ಣೆಯಂತಾಗಬೇಕು: ಹೈಕೋರ್ಟ್ ತಾಕೀತು

ಈ ರಸ್ತೆಗಳಲ್ಲಿನ ರಸ್ತೆ ಗುಂಡಿಗಳಿಂದಾಗಿ ದಿನನಿತ್ಯ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ್ದು ಸದರಿ ರಸ್ತೆಗಳ ಮುಖಾಂತರ ಜಯದೇವ, ಅಪೋಲೋ, ಫೋರ್ಟಿಸ್ ಆಸ್ಪತ್ರೆಗಳಿಗೆ ಆಗಮಿಸುವ ರೋಗಿಗಳಿಗೆ ಹಾಗೂ ಈ ಮಾರ್ಗದಲ್ಲಿ ದಿನನಿತ್ಯ ಪ್ರಯಾಣಿಸುವ ಉದ್ಯೋಗಿಗಳಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.

English summary
B.T.M assembly constituency Congress MLA Ramalinga Reddy write a letter to chief secretary Karnataka to fill potholes in roads of Jayanagar and B.T.M assembly constituency roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X