ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಅಂಚೆ ಕಚೇರಿಯಲ್ಲಿ ಸಿಗಲಿದೆ ಮಾವಿನ ಹಣ್ಣು!

|
Google Oneindia Kannada News

ಬೆಂಗಳೂರು, ಏಪ್ರಿಲ್ 15 : ಈ ಬಾರಿ ಹಣ್ಣುಗಳ ರಾಜ ' ಮಾವು' ಜನರ ಕೈಗೆ ಸರಿಯಾಗಿ ಸಿಗುತ್ತಿಲ್ಲ. ಮಾವಿನ ಹಣ್ಣುಗಳನ್ನು ಹುಡುಕಿ ತಂದು ಚಪ್ಪರಿಸಿ ತಿನ್ನಲು ಈಗ ಲಾಕ್ ಡೌನ್ ಜಾರಿಯಲ್ಲಿದೆ. ಮಾವಿನ ಪ್ರಿಯರಿಗೆ ಸಿಹಿ ಸುದ್ದಿಯೊಂದಿದೆ.

ನೀವು ಬೇಡಿಕೆ ಸಲ್ಲಿಸಿದ ಮಾವಿನ ಹಣ್ಣು ಮನೆ ಸಮೀಪದಲ್ಲಿಯೇ ಸಿಕ್ಕಿದರೆ ಹೇಗೆ?. ಹೌದು ಇಂತಹ ದಿನ ದೂರವಿಲ್ಲ. ಅಂಚೆ ಇಲಾಖೆ ಮಾವಿನ ಹಣ್ಣನ್ನು ಜನರಿಗೆ ಪೂರೈಕೆ ಮಾಡಲಿದೆ. ಬೆಂಗಳೂರು ನಗರದಲ್ಲಿ ಏಪ್ರಿಲ್ 17ರಂದು ಈ ಸೇವೆಗೆ ಚಾಲನೆ ದೊರೆಯಲಿದೆ.

ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ (ಕೆಎಸ್‌ಎಂಡಿಎಂಸಿ) ಅಂಚೆ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಜನರಿಗೆ ಮಾವಿನ ಹಣ್ಣುಗಳನ್ನು ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಮಾವು ಬೆಳೆಯ ವಿವಿಧ ರೋಗ; ಹತೋಟಿ ಕ್ರಮಗಳು ಮಾವು ಬೆಳೆಯ ವಿವಿಧ ರೋಗ; ಹತೋಟಿ ಕ್ರಮಗಳು

Post Office In Bengaluru To Deliver Mangoes To People

ಮಾವಿನ ಹಣ್ಣು ಬೇಕಾದ ಜನರು ವೆಬ್ ಸೈಟ್‌ ಮೂಲಕ ಬೇಡಿಕೆ ಸಲ್ಲಿಸಬಹುದು. ಅಂಚೆ ಇಲಾಖೆಯಲ್ಲಿ ಬೇಡಿಕೆ ಸಲ್ಲಿಸಿದ ಮಾವಿನ ಹಣ್ಣನ್ನು ಪಡೆಯಬಹುದು.

 ಫಲ ತುಂಬಿದ ದಾಳಿಂಬೆ ಮರಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿದ ಬಳ್ಳಾರಿ ರೈತ ಮಹಿಳೆ ಫಲ ತುಂಬಿದ ದಾಳಿಂಬೆ ಮರಗಳನ್ನು ಜೆಸಿಬಿಯಿಂದ ನೆಲಸಮಗೊಳಿಸಿದ ಬಳ್ಳಾರಿ ರೈತ ಮಹಿಳೆ

ಕೆಎಸ್‌ಎಂಡಿಎಂಸಿ ವ್ಯವಸ್ಥಾಪಕ ನಿರ್ದೇಶಕ ಸಿ. ಜಿ. ನಾಗರಾಜ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಏಪ್ರಿಲ್ 17ರಿಂದ ಮಾವು ವಿತರಣೆ ಮಾಡಲು ಅಂಚೆ ಇಲಾಖೆ ಒಪ್ಪಿದೆ. ಮಾವಿನ ಕಟಾವು ಈಗ ಆರಂಭವಾಗುತ್ತಿದೆ. ಈ ಬಾರಿ ನಾವು ಶೇ 50ರಷ್ಟು ಮಾತ್ರ ಫಲಸನ್ನು ನಿರೀಕ್ಷೆ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.

ಬೆಂಗಳೂರು ನಗರಕ್ಕೆ ಮಾವಿನ ಹಣ್ಣುಗಳನ್ನು ಪೂರೈಕೆ ಮಾಡಲು 2 ಡಜನ್‌ನಷ್ಟು ರೈತರು ನೋಂದಣಿ ಮಾಡಿಕೊಂಡಿದ್ದಾರೆ. ರೈತರಿಂದ ನೇರವಾಗಿ ಖರೀದಿ ಮಾಡಿ ಜನರಿಗೆ ತಲುಪಿಸಲಾಗುತ್ತಿದೆ.

ಜನರು ಬಾದಾಮಿ, ರಸಪೂರಿ, ಸಿಂಧೂರ ಮಾವಿನ ಹಣ್ಣುಗಳಿಗಾಗಿ ಬೇಡಿಕೆ ಸಲ್ಲಿಸಬಹುದು. ವೆಬ್‌ಸೈಟ್‌ನಲ್ಲಿ ಹಣ್ಣು ಕೊಳ್ಳಲು ಬಯಸುವವರು 3 ಕೆಜಿಯ ಬಾಕ್ಸ್ ಪಡೆಯಬೇಕಿದೆ. ಆರ್. ಆರ್. ನಗರದ ಅಪಾರ್ಟ್‌ಮೆಂಟ್‌ಗೆ ಕಳೆದ ವಾರ 5 ಟನ್ ಹಣ್ಣುಗಳನ್ನು ಪೂರೈಕೆ ಮಾಡಲಾಗಿದೆ.

ಅಪಾರ್ಟ್‌ಮೆಂಟ್‌ಗಳು 250 ಕೆಜಿಯಷ್ಟು ಮಾವಿನ ಹಣ್ಣಿಗೆ ಬೇಡಿಕೆ ಸಲ್ಲಿಸಿದರೆ ರೈತರು ಲಾರಿಯ ಮೂಲಕ ತಲುಪಿಸಲಿದ್ದಾರೆ. ಈಗಾಗಲೇ 10 ಟನ್ ಹಣ್ಣಿಗೆ ವಿವಿಧ ಅಪಾರ್ಟ್‌ಮೆಂಟ್‌ಗಳು ಬೇಡಿಕೆ ಇಟ್ಟಿವೆ.

English summary
From April 17th post office in Bengaluru to deliver mangoes to people. The Karnataka State Mango Development and Marketing Corporation (KSMDMC) started arrangements to this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X