ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಜಮೀರ್ ಅಹ್ಮದ್ ಕ್ವಾರಂಟೈನ್‌ಗೆ ಒಳಪಡುವ ಸಾಧ್ಯತೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್‌ರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಸಾಧ್ಯತೆ ಇದೆ. ಈ ವಿಷಯವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಿನ್ನೆ ಕೋವಿಡ್ 19 ಸೋಂಕಿನಿಂದ ವೃದ್ಧೆ ಮೃತಪಟ್ಟಿದ್ದರು. ಆ ವೃದ್ಧೆಯ ಶವಸಂಸ್ಕಾರದಲ್ಲಿ ಜಮೀರ್ ಅಹ್ಮದ್ ಭಾಗವಹಿಸಿದ್ದರು. ಹೀಗಾಗಿ, ಅವರನ್ನು ಕ್ವಾರಂಟೈನ್‌ನಲ್ಲಿ ಇಡುವ ಬಗ್ಗೆ ಆಲೋಚನೆ ನಡೆದಿದೆ.

ವಿಪತ್ತು ನಿರ್ವಹಣೆ ಕಾನೂನಿನಂತೆ ಕೇವಲ 22 ಜನರು ಮಾತ್ರ ಶವಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶವಿದೆ. ಆದರೆ, ನಿನ್ನೆ ನಡೆದಿದ್ದ ವೃದ್ಧೆಯ ಶವಸಂಸ್ಕಾರದಲ್ಲಿ 22 ಜನಕ್ಕಿಂತ ಹೆಚ್ಚಿನ ಜನ ಭಾಗವಹಿಸಿದ್ದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಬಂದಿದೆ.

Possibility We Have To Put Zameer Ahmed Under Quarantine Says Basavaraj Bommai

ವಿಶ್ವ ಆರೋಗ್ಯ ಸಂಸ್ಥೆಯ ನಿಯಮಕ್ಕಿಂತ ಹೆಚ್ಚು ಜನ ಈ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಕಾರಣ ಈ ವೇಳೆ ಸೋಂಕು ಹರಡಿರುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಮನೆಯಲ್ಲಿ ಪ್ರತ್ಯೇಕವಾಗಿರುವಂತೆ ಸೂಚಿಸುವ ಹೊರಬರಬಹುದು.

ಅಂತ್ಯಕ್ರಿಯೆ ಸಮಯದಲ್ಲಿ ಸಾಮಾಜಿಕ ಅಂತರ ಹಾಗೂ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದರು. ಆದರೆ, ಮುಂಜಾಗ್ರತೆ ಕ್ರಮವಾಗಿ ಜಮೀರ್ ಅಹ್ಮದ್ ಕ್ಯಾರಂಟೈನ್‌ ನಲ್ಲಿ ಇಡುವ ಸಾಧ್ಯತೆ ಇದೆ.

English summary
Possibility we have to put Zameer Ahmed Khan under quarantine says home minister Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X