• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಓ ಮನಸೇ...ಡಿಸೆಂಬರ್ 14ಕ್ಕೆ ಮತ್ತೆ ಬರ್ತಿದೆ

By Mahesh
|

ಬೆಂಗಳೂರು, ಡಿ.9: 'ಸಾಫ್ಟ್' ಬರಹಗಳ ಪತ್ರಿಕೆ ಓ ಮನಸೇ ರಿಲೀಸ್ ಮಾಡ್ತೀನಿ ಎಂದು ಹೇಳಿದ್ದ ಕನ್ನಡದ ಯುವ ಮನಸ್ಸನ್ನು ಕದ್ದ ರವಿ ಬೆಳೆಗೆರೆ ಅವರು ಜನಶ್ರೀ ವಾಹಿನಿಗೆ ಹೋಗಿ ಕೂತ ಮೇಲೆ ಎಲ್ಲವನ್ನು ಮರೆತು ಬಿಟ್ಟರು ಎಂದು ಅಭಿಮಾನಿಗಳು ಗೊಣಗುವುದರೊಳಗೆ ರವಿ ಅವರಿಂದ ಉತ್ತರ ಬಂದಿದೆ.

ಓ ಮನಸೇ ಆರಂಭಗೊಳ್ಳುವುದು ಖಾತ್ರಿಯಾಗಿತ್ತು. ಆದರೆ, ಸೆಪ್ಟೆಂಬರ್ ತಿಂಗಳಿನಲ್ಲಿ ಓದುಗರ ಕೈ ಸೇರಬೇಕಿದ್ದ ಪತ್ರಿಕೆ ಈಗ ಡಿಸೆಂಬರ್ ತಿಂಗಳಿನಲ್ಲಿ ಖಂಡಿತವಾಗಿ ಲೋಕಾರ್ಪಣೆಗೊಳ್ಳುತ್ತಿದೆಯಂತೆ.

ಹಿರಿಯ ಪತ್ರಕರ್ತ ಉದಯ ಮರಕಿಣಿ ಅವರ ಸಂಪಾದಕತ್ವದಲ್ಲಿ ಓ ಮನಸೇ ಮತ್ತೆ ಪ್ರಕಟಣೆಯಾಗುತ್ತಿದೆ. ಬೆಂಗಳೂರಿನ ಬೆಳೆಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆಯಲ್ಲಿ ಡಿ.14 ರಂದು ಲೋಕಾರ್ಪಣೆಯಾಗುತ್ತಿದೆ ಎಂದು ರವಿ ಬೆಳೆಗೆರೆ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಇದರ ಜತೆಗೆ ದೇಶದಾದ್ಯಂತ ಚರ್ಚೆಗೊಳಗಾದ ಆರುಷಿ ಹೇಮರಾಜ್ ಹತ್ಯೆ ರಹಸ್ಯಗಳ ಬಗ್ಗೆ ಬೆಳಕು ಚೆಲ್ಲುವ ಕೃತಿ ಕೂಡಾ ಅಂದೇ ಬಿಡುಗಡೆ ಭಾಗ್ಯ ಕಾಣುತ್ತಿದೆ.

ಓ ಮನಸೆ ಮುಖ್ಯ ಲೇಖನ ಬಗ್ಗೆ ಊಹಿಸಿ ಎಂದು ಅಧಿಕೃತ ಫೇಸ್ ಬುಕ್ ಪುಟದಲ್ಲಿ ಕೇಳಲಾಗಿದೆ ಅದರ ವಿವರ ಕೆಳಗಿದೆ. ಈ ಹಿಂದೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ 'ಈ ವಾರದ ಮನಸಿನ ಮಾತು' ಅಂಕಣದಲ್ಲಿ ರವಿ ಬೆಳೆಗೆರೆ ಹೇಳಿದ್ದೇನು ಎಂಬುದನ್ನು ಇಲ್ಲಿ ಓದಿ.

ಮನಸ್ಸು ಕೂಡಾ ರಜಾ ಹಾಕುತ್ತಾ? ಹಾಕುತ್ತೆ ಅಂತ ನಾವು ಪ್ರೂವ್ ಮಾಡಿದೀವಿ. ‘ಓ ಮನಸೇ..' ಪತ್ರಿಕೆ ನಾಲ್ಕುವರ್ಷದ ಗ್ಯಾಪ್ ನಂತರ ನಾಡಿದ್ದು ಡಿಸೆಂಬರ್ 14ಕ್ಕೆ ಮತ್ತೆ ಬರ್ತಿದೆ. ನಮಗಂತೂ ಸಡಗರದ ಜ್ವರ ಹಿಡಿದಿದೆ. ಈ ತಂಪುಹೊತ್ತಲ್ಲಿ ನಿಮಗೊಂದು ಪ್ರಶ್ನೆ.

‘ಓ ಮನಸೇ..' ಯ ಮುಖ್ಯ ಲೇಖನ ಯಾವ ವಿಷಯದ ಬಗ್ಗೆ ಇರಬಹುದು? ಸುಮ್ಮನೇ ಗೆಸ್ ಮಾಡಿ. ನಿಮ್ಮ ಕೆಲಸ ಹಗುರ ಮಾಡೋದಕ್ಕೆ ನಾವೇ ನಾಲ್ಕು ಕ್ಲೂ ಕೊಡ್ತೀವಿ. 1. ಈ ಲೇಖನದಿಂದ ಯುವ ಪೀಳಿಗೆಗೆ ಬೇಜಾನ್ ಉಪಯೋಗ ಇದೆ. 2. ಜಾಬ್ ಸ್ಯಾಟಿಸ್ಪಾಕ್ಷನ್ ಮತ್ತು ಜೇಬು ಸ್ಯಾಟಿಸ್ಪಾಕ್ಷನ್ ಎರಡೂ ಏಕಕಾಲಕ್ಕೆ ಲಭ್ಯ. 3. ಜನ ನಿಮ್ಮನ್ನು ಕಣ್ಣರಳಿಸಿ ನೋಡಬಹುದು ಅಥವಾ ಬಾಯ್ತುಂಬಾ ಟೀಕಿಸಬಹುದು. 4. ಮಾತು ಬಂಗಾರ ಅನ್ನುವ ನಾಣ್ಣುಡಿ ನಿಮಗೆ ಪದೇಪದೇ ನೆನಪಾಗಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Popular Kannada Magazine O Manase re launch date is rescheduled, it will hit the stand on Dec.14 says Hai Bangalore tabloid and O Manase owner cum editor and also Janasri TV Channel CEO Ravi Belagere. Uday Marakani will be editor in chief of O Manase magazine which attracted many youths in the past.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more