ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಲಸಿಕೆ ಅಭಿಯಾನ: ಬಿಬಿಎಂಪಿ ಹೊರವಲಯದಲ್ಲಿ ಕಳಪೆ ಸಾಧನೆ

|
Google Oneindia Kannada News

ಬೆಂಗಳೂರು,ಜನವರಿ 25: ಕೊರೊನಾ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಮತೆ ಬಿಬಿಎಂಪಿ ಹೊರ ವಲಯದಲ್ಲಿ ಕಳಪೆ ಸಾಧನೆಯಾಗಿದೆ. ಬೇರೆ ವಲಯಗಳಿಗಿಂತ ಬಿಬಿಎಂಪಿ ಹೊರ ವಲಯದಲ್ಲಿ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ.

ಮಹಾದೇವಪುರ, ಯಲಹಂಕ, ದಾಸರಹಳ್ಳಿ, ಬೊಮ್ಮನಹಳ್ಳಿ ಮತ್ತು ಆರ್ ಆರ್ ನಗರಗಳಲ್ಲಿ ಲಸಿಕೆ ಬಗ್ಗೆ ಭಯದ ಕಾರಣದಿಂದ ಲಸಿಕೆ ಪಡೆದವರ ಸಂಖ್ಯೆ ತೀವ್ರ ಕಡಿಮೆ ಪ್ರಮಾಣದಲ್ಲಿದೆ. ಈ ಬಗ್ಗೆ ಅರಿವು ಸರ್ಕಾರ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಪಡೆಯಲು ಎರಡೇ ಅವಕಾಶಬೆಂಗಳೂರು: ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಪಡೆಯಲು ಎರಡೇ ಅವಕಾಶ

ಲಸಿಕೆ ಪಡೆಯಲು ಯೂನಿರ್ವಸಿಟಿಗಳು, ಆಸ್ಪತ್ರೆಗಳು ಹಾಗೂ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿರುವುದಾಗಿ ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ

ಮೊದಲ ಹಂತದಲ್ಲಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಇದರಿಂದ ಕಡಿಮೆ ಪ್ರಮಾಣದ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಆದರೆ, ಮುಂದಿನ ವಾರ ಲಸಿಕೆ ಸುರಕ್ಷಿತ ಎಂಬುದು ಜನರಿಗೆ ಮನವರಿಕೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆಯುವ ಸಾಧ್ಯತೆಯಿದೆ.

ಕಡಿಮೆ ಜನಸಂಖ್ಯೆ

ಕಡಿಮೆ ಜನಸಂಖ್ಯೆ

ಈ ವಲಯಗಳಲ್ಲಿ ಕಡಿಮೆ ಜನಸಂಖ್ಯೆ ಇರುವ ಕಾರಣ ಕಡಿಮೆ ಸಂಖ್ಯೆಯ ಆರೋಗ್ಯ ಕಾರ್ಯಕರ್ತರಿರುವುದು ಮತ್ತೊಂದು ಕಾರಣವಾಗಿದೆ. ಜನವರಿ 18 ರಿಂದ 21ರವರೆಗೆ ಯಲಹಂಕ ವಲಯದಲ್ಲಿ ಕೇವಲ 1805, ಬೊಮ್ಮನಹಳ್ಳಿಯಲ್ಲಿ 1672, ದಾಸರಹಳ್ಳಿಯಲ್ಲಿ 1,198 ಮತ್ತು ಮಹಾದೇವಪುರದಲ್ಲಿ ಕೇವಲ 757 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ಅನೇಕ ಮಂದಿಯಲ್ಲಿ ಅಡ್ಡಪರಿಣಾಮ

ಅನೇಕ ಮಂದಿಯಲ್ಲಿ ಅಡ್ಡಪರಿಣಾಮ

ಅನೇಕ ಜನರಲ್ಲಿ ಅಡ್ಡ ಪರಿಣಾಮದ ಭೀತಿಯಿದೆ. ಆದ್ದರಿಂದ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ ಎಂದು ದಾಸರಹಳ್ಳಿ ಆರೋಗ್ಯಾಧಿಕಾರಿ ಹೇಳಿದ್ದಾರೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ಪಡೆದಿರುವ ಮಹಾದೇವಪುರ ವಲಯದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Recommended Video

'Parakram' ವೇದಿಕೆಯಲ್ಲಿ ಪ್ರಭಾವಿಗಳ ಮುಖಾಮುಖಿ-ನಾ ಅತ್ತ.. ನೀ ಇತ್ತ ಅಂತಿದ್ದಾರೆ ಮೋದಿ-ದೀದಿ | Oneindia Kannada
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಕಡಿಮೆ

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಕಡಿಮೆ

ಈ ಮಧ್ಯೆ ದಕ್ಷಿಣ ಮತ್ತು ಪೂರ್ವ ಗಿಂತ ಹೊರವಲಯಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಡಿಮೆ ಸಂಖ್ಯೆಯಲ್ಲಿವೆ. ಬೊಮ್ಮೊನಹಳ್ಳಿಯಲ್ಲಿ ಕೇವಲ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೆ, ದಕ್ಷಿಣ ಮತ್ತು ಪೂರ್ವದಲ್ಲಿ ತಲಾ 30 ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವುದಾಗಿ ಬೊಮ್ಮನಹಳ್ಳಿ ವಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Since the launch of the vaccine, Bengaluru Urban has seen a poor turnout, with the number of beneficiaries in the outer zones of Bruhat Bengaluru Mahanagara Palike relatively lower than in other zones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X