ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕಕ್ಕೆ ಜನರ ನಿರಾಸಕ್ತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ನಗರದ ಹೊರವಲಯದ 110 ಹಳ್ಳಿಗಳಿಗೆ ಕಾವೇರಿ ನೀರು ಪೈರೈಸಲು ಜಲಮಂಡಳಿ ಮುಂದಾಗಿತ್ತು. ಆದರೆ ಜನರಿಂದ ಉತ್ತಮ ಸ್ಪಂದನೆ ದೊರೆಯದೆ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಹೊರವಲಯದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆ ಅನುಷ್ಠಾನಕ್ಕೆ ಜನರಿಂದಲೇ ಸರಿಯಾದ ಸ್ಪಂದನೆ ಲಭ್ಯವಾಗಿಲ್ಲ. 110 ಹಳ್ಳಿಗಳ ಪೈಕಿ 17 ಹಳ್ಳಿಗಳಿಗೆ ನೀರು ಪೂರೈಸಲು ಮೂಲ ಸೌಕರ್ಯ ದೊರೆತಿದ್ದರೂ ಸಂಪರ್ಕ ಪಡೆಯಲು ಅಲ್ಲಿನ ನಿವಾಸಿಗಳು ನಿರಾಸಕ್ತಿ ತೋರುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿ ಹಳ್ಳಿಗಳು: ಕಾವೇರಿ ನೀರಿಗೆ ಅರ್ಜಿ ಸಲ್ಲಿಸಿ ಬಿಬಿಎಂಪಿ ವ್ಯಾಪ್ತಿ ಹಳ್ಳಿಗಳು: ಕಾವೇರಿ ನೀರಿಗೆ ಅರ್ಜಿ ಸಲ್ಲಿಸಿ

ಬೆಂಗಳೂರು ಜಲಮಂಡಳಿಯು ಈಗಾಗಲೇ 17 ಹಳ್ಳಿಗಳಲ್ಲಿ ಪೈಪ್ ಅಳವಡಿಸಿದೆ, ಜನವರಿಯಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಲಾಗಿದೆ. ಮೊದಲು 10 ಹಳ್ಳಿಗಳಿಗೆ, ನಂತರ 7 ಹಳ್ಳಿಗಳಿಗೆ ಸೇರಿ ಒಟ್ಟು 17ಹಳ್ಳಿಗಳಲ್ಲಿ ನೀರಿನ ಸಂಪರ್ಕ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಮೂರು ತಿಂಗಳು ಕಳೆದರೂ ನಿರೀಕ್ಷಿಸಿದಷ್ಟು ಅರ್ಜಿಗಳು ಬಂದಿಲ್ಲ.

Poor response for Cauvery water connection in 17 villages

ಬಿಬಿಎಂಪಿಯ ಬ್ಯಾಟರಾಯನಪುರ, ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ದಾಸರಹಳ್ಳಿ ವಲಯಗಳಲ್ಲಿ ಒಟ್ಟು 225 ಚದರ ಕಿ.ಮೀ ವ್ಯಾಪ್ತಿಯಲ್ಲಿ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 17 ಹಳ್ಳಿಗಳಲ್ಲಿ ಮುಖ್ಯ ಪೈಪ್ ಗಳನ್ನು ಅಳವಡಿಸಲಾಗಿದೆ. ಇನ್ನು ಜನರು ಅರ್ಜಿ ಹಾಕಿದಲ್ಲಿ ಮನೆಗಳಿಗೆ ನೀರಿನ ಸಂಪರ್ಕ ಕೊಡಲು ಪೈಪ್ ಅಳವಡಿಸುವ ಕಾಮಗಾರಿ ಬಾಕಿ ಇದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದಕ್ಕಾಗಿ ಜನರೇ ಮೊದಲು ಅರ್ಜಿ ಹಾಕಿ ನಿಗದಿತ ಶುಲ್ಕ ಪಾವತಿಸಬೇಕು. ಬಹುತೇಕ ಹಳ್ಳಿಗಳಲ್ಲಿ 400 ರಿಂದ 500 ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಕೆಲವೆಡೆ ಬಡಾವಣೆಗಳಲ್ಲಿ ಒಂದೇ ಬಾರಿಗೆ ಅರ್ಜಿಗಳು ಬರಬಹುದೆಂದು ನಿರೀಕ್ಷಿಸಲಾಗಿತ್ತು.

ಬೋರ್ ವೆಲ್, ಟ್ಯಾಂಕರ್ ಅವಲಂಬನೆ: 110 ಹಳ್ಳಿಗಳಿಗೆ ಒಟ್ಟು 20 ದಶಲಕ್ಷ ಲೀಟರ್ ನೀರು ಪೂರೈಸಲು ಜಲಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಆದರೆ ಈ ಹಳ್ಳಿಯ ಜನರು ಬೋರ್ ವೆಲ್ ಹಾಗೂ ಟ್ಯಾಂಕರ್ ನೀರ್ನೇ ನಂಬಿಕೊಂಡಿದ್ದಾರೆ. 17 ಹಳ್ಳಿಗಳಲ್ಲಿ ನೀರು ಪೂರೈಸಲು ಪೈಪ್ ಅಳವಡಿಸಿದ್ದರೂ ಜನರು ಆಸಕ್ತಿ ತೋರುತತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
BWSSB is all set to provide Cauvery water connection to 17 villages which were in BBMP limit. But these villagers were less interest in filing application for water connection with the board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X