ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಲಿಮೆಡ್‍ಗೆ ಇಂಡಿಯಾ ಮೆಡಿಕಲ್ ಡಿವೈಸಸ್ ಕಂಪನಿ ಆಫ್ ದ ಈಯರ್ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ಭಾರತದ ಅಗ್ರಗಣ್ಯ ವೈದ್ಯಕೀಯ ಸಲಕರಣೆಗಳ ಕಂಪನಿಗಳಲ್ಲೊಂದಾದ ಪಾಲಿ ಮೆಡಿಕ್ಯೂರ್ ಲಿಮಿಟೆಡ್ (ಪಾಲಿಮೆಡ್), ಪ್ರತಿಷ್ಠಿತ "ಇಂಡಿಯಾ ಮೆಡಿಕಲ್ ಡಿವೈಸಸ್ ಕಂಪನಿ ಆಫ್ ದ ಈಯರ್ ಪ್ರಶಸ್ತಿಗೆ ಪಾತ್ರವಾಗಿದೆ. ಇಲ್ಲಿ ನಡೆಯುತ್ತಿರುವ 4ನೇ ಅಂತರರಾಷ್ಟ್ರೀಯ ಫಾರ್ಮಾ ಮತ್ತು ವೈದ್ಯಕೀಯ ಸಲಕರಣೆಗಳ ಸಮ್ಮೇಳನದಲ್ಲಿ ಭಾರತ ಸರ್ಕಾರದ ಫಾರ್ಮಸ್ಯೂಟಿಕಲ್ ಇಲಾಖೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿತು.

ಕೇಂದ್ರ ರಾಸಾಯನಿಕ & ರಸಗೊಬ್ಬರ, ಅಂಕಿ ಅಂಶಗಳು ಮತ್ತು ಯೋಜನಾ ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರಿಂದ ಪಾಲಿಮೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಿಮಾಂಶು ಬೈಡ್ ಪ್ರಶಸ್ತಿ ಸ್ವೀಕರಿಸಿದರು.

15 ಕಂಪನಿಗಳ ಜೀವ ಮಾರಕ ಔಷಧಿ, ಡ್ರಗ್ಸ್ ಗಳಿಗೆ ನಿಷೇಧ15 ಕಂಪನಿಗಳ ಜೀವ ಮಾರಕ ಔಷಧಿ, ಡ್ರಗ್ಸ್ ಗಳಿಗೆ ನಿಷೇಧ

500 ಕೋಟಿಗೂ ಅಧಿಕ ಮಟ್ಟದ ಬಂಡವಾಳದ ಕಂಪನಿಯಾದ ಪಾಲಿಮೆಡ್ ಶೇಕಡ 70ರಷ್ಟು ಆದಾಯವನ್ನು ರಫ್ತಿನಿಂದ ಗಳಿಸುತ್ತಿದ್ದು, 100ಕ್ಕೂ ಹೆಚ್ಚು ದೇಶಗಳಿಗೆ ಕಂಪನಿ ರಫ್ತು ಮಾಡುತ್ತಿದೆ. ವೈದ್ಯಕೀಯ ಸಲಕರಣೆಗಳು ಮತ್ತು ಬಳಸಿ ಬಿಸಾಕುವ ಉತ್ಪನ್ನಗಳ ಉತ್ಪಾದಕ ಕಂಪನಿಯಾಗಿ, ಕಂಪನಿಯು 125ಕ್ಕೂ ಹೆಚ್ಚು ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಇದರ ಉತ್ಪನ್ನ ಶ್ರೇಣಿಯಲ್ಲಿ ಇನ್‍ಫ್ಯೂಶನ್ ಥೆರಪಿ, ಸೆಂಟ್ರಲ್ ವೆನೊಸ್ ಕ್ಯಾಥೆಟರ್, ರಕ್ತ ನಿರ್ವೌಹಣೆ ವ್ಯವಸ್ಥೆ, ಸರ್ಜರಿ ಮತ್ತು ಗಾಯದಿಂದ ಹೊರತೆಗೆಯುವ ಸಾಧನ, ಅರಿವಳಿಕೆ, ಮೂತ್ರಶಾಸ್ತ್ರ, ಜಠರ ಸಂಬಂಧಿ ಹಾಗೂ ಡಯಾಲಿಸಿಸ್ ಸಾಧನಗಳು ಸೇರಿವೆ.

Polymed bags the prestigious India Medical Devices Company of the Year

"ದೇಶೀಯ ವೈದ್ಯಕೀಯ ಸಲಕರಣೆಗಳ ವಲಯಕ್ಕೆ ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ಉತ್ತೇಜನ ನೀಡುವ ಸರ್ಕಾರದ ಬದ್ಧತೆಗೆ ನಾವು ಅಂದರೆ ಪಾಲಿಮೆಡ್ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಈ ಪ್ರಶಸ್ತಿಯು, ಈ ನಿಟ್ಟಿನಲ್ಲಿ ನಾವು ಕೈಗೊಂಡಿರುವ ನಿಯಂತ್ರಣ ಪ್ರಯತ್ನಕ್ಕೆ ದೊರಕಿದ ಮನ್ನಣೆ ಎನ್ನುವುದು ನಮ್ಮ ಅಭಿಪ್ರಾಯ.

ಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಮೇಲಿನ ನಿಷೇಧ ತೆರವುಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಮೇಲಿನ ನಿಷೇಧ ತೆರವು

ಅತ್ಯುತ್ತಮವಾದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ, ಅನುಶೋಧನೆ ಹಾಗೂ ಗುಣಮಟ್ಟದೊಂದಿಗೆ ನಾವು ಅತ್ಯುತ್ತಮ ದರ್ಜೆಯ ಉತ್ಪನ್ನಗಳನ್ನು ಒದಗಿಸಲು ಮತ್ತು ನಮ್ಮ ಗ್ರಾಹಕರ ಅನುಭವಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಈ ಯಶಸ್ಸಿನ ಆಧಾರದಲ್ಲಿ ಮತ್ತು ಭಾರತದ ಸರ್ಕಾರದ ಬೆಂಬಲದೊಂದಿಗೆ ಯಶಸ್ವಿಯಾಗಿ ಪಿಎಂಜೆಎವೈ (ಆಯುಷ್ಮಾನ್ ಭಾರತ್) ಯೋಜನೆಯನ್ನು ಅನುಷ್ಠಾನಗೊಳಿಸಲು ಮತ್ತು 50 ಕೋಟಿ ಮಂದಿಗೆ ನಮ್ಮ ಬೆಂಬಲ ಒದಗಿಸುವ ಭರವಸೆ ನೀಡುತ್ತೇವೆ" ಎಂದು ಪಾಲಿಮೆಡ್ ವ್ಯವಸ್ಥಾಪಕ ನಿರ್ದೇಶಕ ಹಿಮಾಂಶು ಬೈದ್ ಹೇಳಿದ್ದಾರೆ.

ಈ ಸಮಾರಂಭದಲ್ಲಿ ಬೈಡ್ ಅವರು ವೈದ್ಯಕೀಯ ಸಲಕರಣೆಗಳ ಉತ್ಪಾದಕ ಕಂಪನಿ ಸಿಇಓಗಳ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು. ಸಚಿವರು ಇದರ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ನೀತಿಗಳು ಹಾಗೂ ಉದ್ಯಮ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಈ ಸಭೆಯಲ್ಲಿವಿಸ್ತೃತ ಚರ್ಚೆ ನಡೆಯಿತು.

English summary
Polymed, a leading Indian Medical device company, bagged the prestigious India Medical Devices Company of the Year. The Award was conferred by Department of Pharmaceuticals, Government of India during the 4th International Conference on Pharmaceutical & Medical Device sector being held in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X