ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಟ್ರಾಫಿಕ್‌ ಪೊಲೀಸರ ಆರೋಗ್ಯ ಅಧ್ಯಯನ

By Ashwath
|
Google Oneindia Kannada News

ಬೆಂಗಳೂರು, ಮೇ.13: ನಗರದಲ್ಲಿ ಕಾರ್ಯ‌ನಿರ್ವ‌ಹಿಸುವ ಟ್ರಾಫಿಕ್‌ ಪೊಲೀಸರ ಆರೋಗ್ಯದ ಬಗ್ಗೆ ನ್ಯಾಷನಲ್‌ ರೆಫರಲ್‌ ಸೆಂಟರ್‌‌ ಫಾರ್‌‌‌ ಲೆಡ್‌ ಪ್ರಾಜೆಕ್ಟ್‌‌ ಇನ್‌ ಇಂಡಿಯಾ ಸಂಸ್ಥೆ ಅಧ್ಯಯನ ಕೈಗೊಳ್ಳಲಿದೆ.

ವಾಹನಗಳ ಹೊಗೆ ಮತ್ತು ದೂಳು ಸೇವಿಸಿ ಸಂಚಾರ ಪೊಲೀಸರ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ಸಂಚಾರ ಪೊಲೀಸರ ಬಗ್ಗೆ ಅಧ್ಯಯನ ನಡೆಸಬೇಕೆಂದು ಪೊಲೀಸ್‌ ಇಲಾಖೆ ನ್ಯಾಷನಲ್‌ ರೆಫರಲ್‌ ಸೆಂಟರ್‌ ಫಾರ್‌‌ ಲೆಡ್‌‌ ಪ್ರೊಜೆಕ್ಟ್‌‌‌ ಇನ್‌‌‌ ಇಂಡಿಯಾ ಸಂಸ್ಥೆಗೆ ಮನವಿ ಮಾಡಿತ್ತು.[ಮಾನವೀಯತೆ ಮೆರೆದ ದೊಡೇಜಾಗೆ ಅಭಿನಂದನೆ]

ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಪ್ರಯೋಜಕತ್ವದಲ್ಲಿ ಈ ಅಧ್ಯಯನ ಜೂನ್‌ ತಿಂಗಳಿನಿಂದ ಆರಂಭವಾಗಲಿದೆ.[ಈ ಟ್ರಾಫಿಕ್‌ ಪೊಲೀಸ್‌ ಅಂದ್ರೆ ಜನರಿಗೆ ಅಚ್ಚುಮೆಚ್ಚು]

bangalore city traffic police

ಪ್ರಾಯೋಗಿಕವಾಗಿ ಪಶ್ಚಿಮ ಸಂಚಾರ ವಿಭಾಗದ 941 ಮಂದಿ ಪೊಲೀಸರ ಆರೋಗ್ಯ ತಪಾಸಣೆ ಮತ್ತು ಅಧ್ಯಯನ ನಡೆಸಲಾಗುತ್ತದೆ. ಇದರ ಫಲಿತಾಂಶವನ್ನು ಆಧರಿಸಿ ಉಳಿದ ಸಂಚಾರ ಪೊಲೀಸರ ಆರೋಗ್ಯ ಅಧ್ಯಯನ ಕೈಗೊಳ್ಳಲಾಗುತ್ತದೆ.

ಹೊಗೆ ಮತ್ತು ದೂಳು ಸೇವಿಸಿ, ಹಲವು ಸಂಚಾರ ಪೊಲೀಸರು ಶ್ವಾಸಕೋಶದ ಸಮಸ್ಯೆಯಿಂದ ನರಳುತ್ತಿದ್ದಾರೆ. ಸೀಸದ ಅಂಶ ರಕ್ತದಲ್ಲಿ ಸೇರಿ ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣಕ್ಕಾಗಿ ಅಧ್ಯಯನ ನಡೆಸಲಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

English summary
Karnataka State Pollution Control Board (KSPCB), the Bangalore Traffic Police and the National Referral Centre for Lead Poisoning in India (NRCLPI) will conduct a study across the City to determine the level of lead in the blood of traffic police personnel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X