ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳದಲ್ಲಿ ಮರುಮತದಾನ: ಎಡಗೈ ಮಧ್ಯ ಬೆರಳಿಗೆ ಅಳಿಸಲಾಗದ ಶಾಯಿ

By Nayana
|
Google Oneindia Kannada News

ಬೆಂಗಳೂರು, ಮೇ 14: ತಾಂತ್ರಿಕ ಕಾರಣಗಳಿಂದ ಮತ್ತು ಚುನಾವಣಾ ಸಿಬ್ಬಂದಿಯ ಲೋಪದೋಷದಿಂದಾಗಿ ಮತದಾನಕ್ಕೆ ಅಡ್ಡಿ ಉಂಟಾಗಿ ರಾಜ್ಯದ ಮೂರು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ.

ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಒಂದು ಮತಗಟ್ಟೆ ಮತ್ತು ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮರುಮತದಾನ ನಡೆಯಲಿದೆ. ಮರು ಮತದಾನ ನಡೆಯುವ ಮತಗಟ್ಟೆಯ ಮತದಾರರಿಗೆ ಎಡಗೈ ಮಧ್ಯ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದೆ.

ಕೊಪ್ಪಳ : ಶೇ 100ಕ್ಕೂ ಅಧಿಕ ಮತದಾನ, ಇಂದು ಮರು ಮತದಾನ ಕೊಪ್ಪಳ : ಶೇ 100ಕ್ಕೂ ಅಧಿಕ ಮತದಾನ, ಇಂದು ಮರು ಮತದಾನ

ಲೊಟ್ಟೆ ಗೊಲ್ಲಹಳ್ಳಿಯ ಗಾಂಧಿ ವಿದ್ಯಾಲಯ ಕನ್ನಡ ಮತ್ತು ತಮಿಳು ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಯಂತ್ರ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ಸ್ಥಗಿತಗೊಳಿಸಲಾಗಿತ್ತು. ಹೆಬ್ಬಾಳದಲ್ಲಿ ಈ ಮತಗಟ್ಟೆ ಕೇಂದ್ರದಲ್ಲಿ 1444 ಮತದಾರರಿದ್ದು, ಕೇವಲ 44 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಳಿಗ್ಗೆಯಿಂದ ಉತ್ಸಾಹದೊಂದಿಗೆ ಮತದಾನ ಮಾಡಲು ಬಂದಿದ್ದ ಮತದಾರರು ಮತಯಂತ್ರದಲ್ಲಿ ದೋಷವಿದ್ದರಿಂದ ನಿರಾಸೆಯಿಂದ ವಾಪಸಾಸಿದ್ದರು.

Polling resume in three polling stations

ನಂತರ ಬೆಳಿಗ್ಗೆಯಿಂದ ಇಲ್ಲಿಯವರಗೆ ಇದೇ ರೀತಿ ದೋಷ ಕಂಡು ಬಂದಿದೆ. ಅಧಿಕಾರಿಗಳು ಕೂಡ ಬಂದು ಮತಯಂತ್ರವನ್ನು ಸರಿಪಡಿಸಲು ಮುಂದಾಗಿದ್ದರೂ ಲೊಟ್ಟೆಗೊಲ್ಲಹಳ್ಳಿಯ ಮತಗಟ್ಟೆಯ ಮತಯಂತ್ರ ಸರಿಯಾಗದ ಕಾರಣ, ಮತದಾನ ಮಾಡಲು ಸಾಧ್ಯವಾಗಿಲ್ಲ.

ಇನ್ನು ಕುಷ್ಗಿಯ 20 ಮತ್ತು 21ರ ಮತಗಟ್ಟೆಯಲ್ಲಿ ಮತದಾನ ತಪ್ಪಾಗಿದೆ. ಸುಮಾರು 275 ಮಂದಿಯ ಮತದಾನ ತಪ್ಪಾಗಿ ನಡೆದಿದೆ. ಲೊಟ್ಟೆಗೊಲ್ಲಹಳ್ಳಿಯಲ್ಲಿ 1444 ಮತದಾರರಿದ್ದು, 704 ಮಹಿಳೆಯರಿದ್ದಾರೆ.

English summary
including Lottegollahalli booth in Hebbal assembly constituency, re polling in three polling stations has been taken place on Monday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X