ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಅಭಿನಂದನೆಗಳ ಮಹಾಪೂರ

|
Google Oneindia Kannada News

ಬೆಂಗಳೂರು, ಆಗಸ್ಟ್ 07: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್​ ಎಸೆತ ಸ್ಪರ್ಧೆಯಲ್ಲಿ ಹರಿಯಾಣ ಮೂಲದ ನೀರಜ್​ ಚೋಪ್ರಾ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ನಿರ್ಮಿಸಿದ್ದಾರೆ.

ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ ಆರಂಭಿಕ ಕ್ರೀಡಾಕೂಟದಲ್ಲೇ ಭಾರತಕ್ಕೆ ಬಂಗಾರದ ಪದಕ ಜಯಿಸಿ ಮೆರಗು ತಂದಿದ್ದಾರೆ.

ಶನಿವಾರ (ಆಗಸ್ಟ್ 7) ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ನೀರಜ್ ಚೋಪ್ರಾ 87.58 ಮೀಟರ್ ದೂರು ಎಸೆಯುವ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮೂರು ಪ್ರಯತ್ನಗಳಲ್ಲಿ ಚೋಪ್ರಾ ತನ್ನ ದ್ವಿತೀಯ ಪ್ರಯತ್ನದಲ್ಲಿ ದೇಶಕ್ಕೆ ಬಂಗಾರ ತೊಡಿಸಿದರು.

 Political Leaders Applaud Neeraj Chopra For Winning Gold Medal At Tokyo Olympics

ನೀರಜ್ ಚೋಪ್ರಾಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜತೆಗೆ ಸರ್ಕಾರವೂ ಬಹುಮಾನ ಘೋಷಿಸಿದ್ದು, ಹರಿಯಾಣ ಸರ್ಕಾರ 6 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.

ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹರಿಯಾಣದ ಪಾಣಿಪತ್ ಬಳಿಯ ಖಂಡ್ರಾ ಗ್ರಾಮದವರು. ಕೂಡು ಕುಟುಂಬದಿಂದ ಬಂದ ನೀರಜ್ ಚೋಪ್ರಾ ಮನೆಯಲ್ಲಿ 16 ಜನರಿದ್ದಾರೆ. ನೀರಜ್ ತಂದೆ ಕೃಷಿ ಮಾಡುತ್ತಿದ್ದು, ಮನೆಯವರು ಸಾಧಾರಣ ಕೆಲಸ ಹಾಗೂ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಾಕೆಟ್ ಮನಿಯಿಂದಲೇ ಸಲಕರಣೆಗಳನ್ನು ಖರೀದಿಸಿ ನೀರಜ್ ಅಭ್ಯಾಸ ಮಾಡುತ್ತಿದ್ದರು.

ನೀರಜ್ ಚೋಪ್ರಾ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದು, ಭಾರತೀಯ ಸೇನೆಯಲ್ಲಿ ಸುಬೇದಾರ್ ಕೆಲಸ ಮಾಡುತ್ತಿದ್ದಾರೆ. ನೀರಜ್ ತಮ್ಮ 12ನೇ ವಯಸ್ಸಿನಲ್ಲಿ 90 ಕೆ.ಜಿ ತೂಕ ಹೊಂದಿದ್ದರು. ಬಳಿಕ ಕುಟುಂಬದವರ ಒತ್ತಾಯದ ಮೇರೆಗೆ ಜಿಮ್ ಮಾಡಿ, ಫಿಟ್ನೆಸ್ ಕಾಪಾಡಿಕೊಂಡರು. ನಂತರ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್​ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಪ್ರಧಾನಿ ಮೋದಿ, ರಾಷ್ಟ್ರಪತಿ, ಕರ್ನಾಟಕ ಸಿಎಂ ಸೇರಿದಂತೆ ದೇಶದ ಗಣ್ಯ ನಾಯಕರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಗಳ ಮೂಲಕ ಮನದುಂಬಿ ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯಿಂದ ಅಭಿನಂದನೆ
ಪ್ರಧಾನಿ ನರೇಂದ್ರ ಮೋದಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಕ್ಕೆ ಶುಭಾಶಯ ತಿಳಿಸಿದ್ದು, "ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಇತಿಹಾಸ ಬರೆದಿದೆ. ನೀರಜ್​ ಚೋಪ್ರಾರ ಇಂದಿನ ಸಾಧನೆ ಅವಿಸ್ಮರಣೀಯ. ಅವರ ಸಾಧನೆ ಮತ್ತು ಉತ್ಸಾಹ ಎಲ್ಲರಿಗೂ ಪ್ರೇರಣೆ. ಚಿನ್ನ ಗೆದ್ದ ನೀರಜ್​ ಚೊಪ್ರಾ ಅವರಿಗೆ ಅಭಿನಂದನೆಗಳು,'' ಎಂದು ಟ್ವೀಟ್​ ಮಾಡಿದ್ದಾರೆ.

ನೀರಜ್​ ಸಾಧನೆ ಇತಿಹಾಸ ಸೃಷ್ಟಿಸಿದೆ
"ನೀರಜ್ ಚೋಪ್ರಾರಿಂದ ಅಭೂತಪೂರ್ವ ಗೆಲುವು ಮೂಡಿಬಂದಿದೆ. ನಿಮ್ಮ ಜಾವೆಲಿನ್ ಎಸೆತದ ಚಿನ್ನವು ಎಲ್ಲ ಅಡೆತಡೆಗಳನ್ನು ಮುರಿದು ಇತಿಹಾಸವನ್ನು ಸೃಷ್ಟಿಸುತ್ತದೆ. ನಿಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಪದಕವನ್ನು ನೀವು ಮನೆಗೆ ತಂದಿದ್ದೀರಿ. ನಿಮ್ಮ ಸಾಧನೆ ನಮ್ಮ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಭಾರತ ಸಂಭ್ರಮಿಸಿದೆ ಹಾಗೂ ಹೃತ್ಪೂರ್ವಕ ಅಭಿನಂದನೆಗಳು,'' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ
"ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾಗೆ ಹೃತ್ಫೂರ್ವಕ ಅಭಿನಂದನೆಗಳು. ದೇಶಕ್ಕೆ ಒಂದು ಹೆಮ್ಮೆಯ ಕ್ಷಣ," ಎಂದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​ ಮಾಡಿದ್ದಾರೆ.

ಸಚಿವ ಕೆ. ಸುಧಾಕರ್ ಉದ್ಘಾರ!
ಗೋಲ್ಡ್..
ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ತೂಕದ ಮೌಲ್ಯ ಹೊಂದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತಪ್ಪಿಸಿಕೊಳ್ಳಲಾಗದ ಚಿನ್ನದ ಪದಕವನ್ನು ಗೆದ್ದರು. ಇದು ನಂಬಲಾಗದ ಸಾಧನೆ ಎಂದು ಬಣ್ಣಿಸಿದ್ದಾರೆ.

1 ಕೋಟಿ ಬಹುಮಾನ ಘೋಷಿಸಿದ ಮಣಿಪುರ
ಟೋಕಿಯೋ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ಮಣಿಪುರ ಕ್ಯಾಬಿನೆಟ್ 1 ಕೋಟಿ ಬಹುಮಾನವನ್ನು ನೀಡುವ ಮೂಲಕ ಗೌರವಿಸಲು ನಿರ್ಧರಿಸಿದೆ ಎಂದು ಸಿಎಂ ಎನ್. ಬೀರೇನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿನಂದನೆ
ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ನಿಮ್ಮ ಐತಿಹಾಸಿಕ ಪ್ರದರ್ಶನ ಮುಂದಿನ ಪೀಳಿಗೆಗೆ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

Recommended Video

ತನ್ನದೇ ದೇಶದ ಬಗ್ಗೆ ಪಾಕ್ ಮೀಡಿಯಾ ಮಾಡಿದ ಅಪಹಾಸ್ಯದ ವಿಡಿಯೋ ವೈರಲ್ | Oneindia Kannada

ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್
ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಚಿನ್ನ ಗೆದ್ದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನವಾಗಿದೆ. ಅವರ ಸಾಧನೆಯ ಬಗ್ಗೆ ನಮಗೆ ಹೆಮ್ಮೆಯಿದೆ ಮತ್ತು ಅವರು ಇನ್ನೂ ಅನೇಕ ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

English summary
Political Leaders like PM Modi, (other names) applaud Neeraj Chopra for winning Gold Medal at Tokyo Olympics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X