ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೈಂ ವರದಿಗೆ ಪೆರಿಸ್ಕೋಪ್ ಬಳಸಿ : ಆಯುಕ್ತ ಎಂಎನ್ ರೆಡ್ಡಿ ಕರೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 12: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಸದುಪಯೋಗಪಡಿಸಿಕೊಳ್ಳುತ್ತಿರುವ ಬೆಂಗಳೂರು ಪೊಲೀಸರ ತಂತ್ರಜ್ಞಾನ ಬಳಕೆಗೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಟ್ವಿಟ್ಟರ್ ನ ಪೆರಿಸ್ಕೋಪ್ ಅಪ್ಲಿಕೇಷನ್ ಬಳಕೆ ಬಗ್ಗೆ ನಾಗರಿಕರಿಗೆ ಪೊಲೀಸರು ತಿಳಿಸಿಕೊಟ್ಟಿದ್ದು, ಕ್ರೈಂ ವರದಿಗೆ ಹೊಸ ಭಾಷ್ಯ ಬರೆಯಲಾಗಿದೆ.

ಕ್ರೈಂ ನಡೆಯುವಾಗ ಲೈವ್ ಸ್ಟ್ರೀಮಿಂಗ್ ಮೂಲಕ ತಕ್ಷಣವೇ ಪೊಲೀಸರಿಗೆ ವರದಿ ಮಾಡುವ ಅನುಕೂಲವನ್ನು ಪೆರಿಸ್ಕೋಪ್ ಅಪ್ಲಿಕೇಷನ್ ನೀಡುತ್ತದೆ.

MN Reddi

ಸುಮಾರು 62.5 K ಟ್ವಿಟ್ಟರ್ ಹಿಂಬಾಲಕರನ್ನು ಹೊಂದಿರುವ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಇತ್ತೀಚೆಗೆ ಸ್ಮಾರ್ಟ್ ಸಿಟಿ ಅಪ್ಲಿಕೇಷನ್ ಗಳನ್ನು ಪರಿಚಯಿಸಿದ್ದರು. ಇದರ ಮುಂದುವರೆದ ಭಾಗವಾಗಿ ಪೊಲೀಸ್ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸಾಧನವನ್ನು ಪರಿಚಯಿಸಿದ್ದಾರೆ.

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಕಲ್ಪನೆಗೆ ಸಾಮಾಜಿಕ ತಾಣಗಳು ಹೇಗೆ ಪೂರಕವಾಗಬಲ್ಲದು. ಅಪರಾಧ ತಡೆ ನಿಟ್ಟಿನಲ್ಲಿ ನಾಗರಿಕರು ಏನು ಮಾಡಬಹುದು? ದಿನ ಪತ್ರಿಕೆ ಓದುತ್ತಿದ್ದವರ ಕೈಗೆ ಸ್ಮಾರ್ಟ್ ಫೋನ್ ಬಂದಿದೆ. ಇದನ್ನು ಬಳಕೆ ಮಾಡಿಕೊಂಡೆ ಸುರಕ್ಷಿತ ಸಮಾಜ ನಿರ್ಮಾಣ ಹೇಗೆ ಎಂಬ ವಿಚಾರಗಳನ್ನು ಎಂಎನ್ ರೆಡ್ಡಿ ಅವರು 'ಸೋಷಿಶಿಯಲ್ ಮೀಡಿಯಾ ಆನ್ ಕಮ್ಯೂನಿಟಿ ಪಾಲಿಸಿ' ಕಾರ್ಯಕ್ರಮದಲ್ಲಿ ವಿವರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಪೂರ್ಣ ವಿವರ ಇಲ್ಲಿ ಓದಿ]

ನಗರದಲ್ಲಿ ಅನೇಕ ಕಡೆ ಸಿಸಿಟಿವಿ ಕೆಮರಾಗಳಿದ್ದರೂ ಲೈವ್ ಸ್ಟ್ರೀಟಿಂಗ್ ಮಾಡಲು ಸಾಧ್ಯವಿಲ್ಲ. ನಾಗರಿಕರ ಬೆಂಬಲವಿದ್ದರೆ ಕ್ರೈಂ ಬಗ್ಗೆ ತಕ್ಷಣವೇ ತಿಳಿಯಬಹುದು. ಕಂಟ್ರೋಲ್ ರೂಮಿಗೆ ಅಲರ್ಟ್ ಮಾಡುವ ಹೊಸ ವಿಧಾನ ಇದು ಎನ್ನಬಹುದು ಎಂದು ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ.

English summary
Twitter-owned livestreaming app Periscope could soon become a crime-fighting tool. Police in the city of Bengaluru want to encourage citizens to livestream crimes as they happen, essentially asking bystanders to broadcast crimes to the Internet in real time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X