ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುವ ಬೆಂಗಳೂರು ಪೊಲೀಸ್!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 04: ಬೆಂಗಳೂರು ನಗರದ ಪೊಲೀಸ್ ಇನ್ಸ್‌ಪೆಕ್ಟರ್ ಬಡ ಮಕ್ಕಳಿಗೆ ಪಾಠ ಹೇಳಿ ಕೊಡುವ ಮೂಲಕ ಮಾದರಿಯಾಗಿದ್ದಾರೆ. ಮೂರರಿಂದ 7ನೇ ತರಗತಿಯ ಮಕ್ಕಳಿಗೆ ಪಾಠ ಕೇಳಿಕೊಡುತ್ತಿದ್ದು, ಪೊಲೀಸರ ಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.

Recommended Video

ದಾರಿ ತೋರಿದ ಗುರುವಿಗೆ ನಮನ | Happy teachers day | Oneindia Kannada

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಜಡಮ್ಮನವರ್ ಬಡ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾರೆ. ಕರ್ತವ್ಯಕ್ಕೆ ಹೋಗುವ ಮುನ್ನ 3 ರಿಂದ ಏಳನೇ ತರಗತಿ ಮಕ್ಕಳಿಗೆ ಗಣಿತ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳನ್ನು ಹೇಳಿ ಕೊಡುತ್ತಿದ್ದಾರೆ.

ಕೊರೊನಾ ಲಾಕ್‌ಡೌನ್ ಸಡಿಲ: ಇಂಗ್ಲೆಂಡ್‌ನಲ್ಲಿ ಶಾಲೆ, ಕಾಲೇಜುಗಳು ಪುನರಾರಂಭ ಕೊರೊನಾ ಲಾಕ್‌ಡೌನ್ ಸಡಿಲ: ಇಂಗ್ಲೆಂಡ್‌ನಲ್ಲಿ ಶಾಲೆ, ಕಾಲೇಜುಗಳು ಪುನರಾರಂಭ

ಬೆಂಗಳೂರಿನ ನಾಗರಬಾವಿ ವ್ಯಾಪ್ತಿಯ ವಿನಾಯಕ ನಗರದ 9ನೇ ಬ್ಲಾಕ್ ನಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ಶಾಂತಪ್ಪ ಜಡಮ್ಮನವರ್ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಈ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕರ ಕುಟುಂಬಗಳು ಹೆಚ್ಚಾಗಿವೆ.

ಅನ್‌ಲಾಕ್‌ 4 ಮಾರ್ಗಸೂಚಿ: ಶಾಲೆ, ಚಿತ್ರಮಂದಿರ ತೆರೆಯಲು ಒಪ್ಪಿಗೆ ಇಲ್ಲಅನ್‌ಲಾಕ್‌ 4 ಮಾರ್ಗಸೂಚಿ: ಶಾಲೆ, ಚಿತ್ರಮಂದಿರ ತೆರೆಯಲು ಒಪ್ಪಿಗೆ ಇಲ್ಲ

Police Sub Inspector Teaching For Children In Bengaluru

ಸುಮಾರು ಹದಿನೈದು ದಿನಗಳಿಂದ ಶಾಂತಪ್ಪ ಜಡಮ್ಮನವರ್ ಪಾಠ ಹೇಳಿಕೊಡುವ ಕಾಯಕದಲ್ಲಿ ತೊಡಗಿದ್ದಾರೆ. "ಪ್ರತಿ ದಿನ ಠಾಣೆಗೆ ಕರ್ತವ್ಯಕ್ಕೆ ಹೋಗುವ ಮುನ್ನ ಈ ಕೆಲಸ ಮುಗಿಸಿ ಹೋಗುತ್ತೇನೆ" ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

 ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರ ಬದ್ಧ; ಸುರೇಶ್ ಕುಮಾರ್ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರ ಬದ್ಧ; ಸುರೇಶ್ ಕುಮಾರ್

"ನಾನು ಒಬ್ಬ ಬಳ್ಳಾರಿಯ ವಲಸೆ ಕಾರ್ಮಿಕರ ಮಗ. ನನಗೆ ಈ‌ ಕಷ್ಟ ಗೊತ್ತಿದೆ. ಅದಕ್ಕಾಗಿ ಈ ಕಾರ್ಯದಲ್ಲಿ ತೊಡಗಿದ್ದೇನೆ" ಎಂದು ಶಾಂತಪ್ಪ ಜಡಮ್ಮನವರ್ ತಿಳಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಾಂತಪ್ಪ ಜಡಮ್ಮನವರ್ ಪಾಠ ಮಾಡುವ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಅವರು ಫೇಸ್‌ ಬುಕ್‌ನಲ್ಲಿಯೂ ಪೋಸ್ಟ್ ಹಾಕಿದ್ದಾರೆ.

English summary
Shantappa Jadammanavar police sub-inspector of Bengaluru Annapoorneshwari Nagar police station will teach to children of the migrant workers before he going to work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X