ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ರೌಡಿಶೀಟರ್‌ಗಳ ಮೇಲೆ ಪೊಲೀಸರ ಶೂಟೌಟ್

|
Google Oneindia Kannada News

ಬೆಂಗಳೂರು, ನವೆಂಬರ್ 11: ಬೆಂಗಳೂರಲ್ಲಿ ಇಂದು ಪೊಲೀಸರು ಮೂವರು ರೌಡಿ ಶೀಟರ್‌ಗಳ ಮೇಲೆ ಶೂಟೌಟ್‌ ಮಾಡಿದ್ದಾರೆ.

ಕೊಲೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನವೀನ ಅಲಿಯಾಸ್ ಅಪ್ಪು, ಹರೀಶ್ ಅಲಿಯಾಸ್ ಪಕ್ಕ ಅವರಿಗೆ ಕೆ.ಆರ್.ಪುರಂ ಪೊಲೀಸರು ಇಂದು ಬೆಳಿಗ್ಗೆ ಗುಂಡೇಟು ಹೊಡೆದಿದ್ದಾರೆ. ಇವರನ್ನು ಹಿಡಿಯುವ ಸಮಯದಲ್ಲಿ ಪೊಲೀಸ್ ಒಬ್ಬರಿಗೆ ಕೈಗೆ ಪೆಟ್ಟಾಗಿದೆ.

Police shoot put on rowdy sheeters today in Bengaluru

ಗಿರೀಶ್ ಮತ್ತು ಹರೀಶ್ ನಡುವೆ ವೈಮನಸ್ಯ ಬೆಳೆದಿತ್ತು. ಸೆಪ್ಟೆಂಬರ್ 9ರಂದು ಹೆಬ್ಬಾಳದ ಬಳಿ ಗಿರೀಶ್‌ ಅಲಿಯಾಸ್ ಅಪ್ಪು ಬಳಿ ತಡರಾತ್ರಿ ಚೇತನ್ ಎಂಬ ಅಗಂತುಕ ಅಡ್ರೆಸ್ ಕೇಳುತ್ತಾರೆ. ಆದರೆ ಚೇತನ್‌ನನ್ನು ತನ್ನ ವಿರೋಧಿ ಹರೀಶ್‌ ಕಳಿಸಿರಬೇಕು ಎಂದು ಭಾವಿಸಿದ ಗಿರೀಶ್‌ ಚೇತನ್‌ನನ್ನು ಅಪಹರಿಸಿ ಮನೆಗೆ ಕೊಂಡೊಯ್ಯುತ್ತಾನೆ.

Police shoot put on rowdy sheeters today in Bengaluru

ಮಾರನೇ ದಿನ 14/09/2018 ರಂದು ಆರು ಜನ ತನ್ನ ಗೆಳೆಯರನ್ನು ಕರೆಸಿಕೊಂಡು, ಅಪಹರಿಸಿ ತಂದ ಚೇತನ್‌ಗೆ ದೊಣ್ಣೆ, ಮಚ್ಚುಗಳಿಂದ ಹೊಡೆದು ಕೊಲ್ಲುತ್ತಾನೆ. ಆನಂತರ ಶವವನ್ನು ಹೊಸಕೋಟೆ ಬಳಿ ಹಳ್ಳಿಯೊಂದರ ಬಳಿ ಶವ ಸುಟ್ಟುಹಾಕಿರುತ್ತಾನೆ.

ಗಿರೀಶ್ ಮತ್ತು ಹರೀಶ್‌ ಅವರುಗಳು ಕೆ.ಆರ್.ಪುರಂ ಮಾಜಿ ಕಾರ್ಪೊರೇಟರ್ ಪತಿ ಶ್ರೀನಿವಾಸ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದರು. ಅಲ್ಲದೆ ಚೇತನ್ ಕೊಲೆ ಪ್ರಕರಣದಲ್ಲೂ ಬೇಕಾಗಿದ್ದರು.

Police shoot put on rowdy sheeters today in Bengaluru

ಇಂದು ಬೆಳಿಗ್ಗೆ ಗಿರೀಶ್ ಮತ್ತು ಹರೀಶ್ ಇಬ್ಬರೂ ಒಟ್ಟಿಗೆ ಕೊಡುಗೊಡಿ ಮುಖ್ಯರಸ್ತೆಯ ಬಳಿ ಹಳ್ಳಿಯೊಂದರಲ್ಲಿ ಹೋಗುತ್ತಿದ್ದ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸುವ ಯತ್ನ ಮಾಡಿದರು.

ಈ ಸಮಯ ಗಿರೀಶ್ ಓಡಿಹೋಗಲು ಯತ್ನಿಸಿದ ಕಾರಣ ಆತನ ಮಂಡಿಗೆ ಎಸ್‌ಐ ಅಬ್ದುಲ್ ಶೂಟ್ ಮಾಡಿದ್ದಾರೆ. ಮತ್ತೊಬ್ಬ ಆರೋಪಿ ಹರೀಶ್‌ ಡ್ರಾಗರ್‌ ಮೂಲಕ ಪೊಲೀಸರಿಗೆ ಇರಿಯಲು ಯತ್ನಿಸಿದ್ದಾನೆ ಆಗ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಮೇಲೂ ಗುಂಡು ಹಾರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಗಾಯಗೊಂಡಿರುವ ಪೊಲೀಸರನ್ನು ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ತಗುಲಿರುವ ಆರೋಪಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
KR Puram police shoot on two rowdy sheeters today morning. Girish and Harish are the rowdy sheeters both were on charges of murders and kidnappings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X