ಬೆಂಗಳೂರಲ್ಲಿ ರೌಡಿ ಶೀಟರ್ಗಳ ಕಾಲಿಗೆ ಪೊಲೀಸರಿಂದ ಗುಂಡೇಟು
ಬೆಂಗಳೂರು, ಜನವರಿ 13: ಇಬ್ಬರು ರೌಡಿ ಶೀಟರ್ಗಳ ಕಾಲಿಗೆ ಸಿಸಿಬಿ ಪೊಲೀಸರು ಸೋಮವಾರ ಬೆಳಗ್ಗೆ ಗುಂಡು ಹಾರಿಸಿದ್ದಾರೆ.
ಮಹೇಶ್ ಅಲಿಯಾಸ್ ಹಂದಿ ಮಹೇಶ್ ಮತ್ತು ಸತೀಶ್ ಎಂಬ ರೌಡಿ ಶೀಟರ್ ಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಹೀಗಾಗಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಲು ತೆರಳಿದಾಗ ಅವರು ಪೊಲೀಸ್ ರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ.
BREAKING: ಮಂಗಳೂರಿನಲ್ಲಿ ಸಿಡಿದ ಪೊಲೀಸ್ ಗುಂಡು; ಮೂವರ ಸ್ಥಿತಿ ಗಂಭೀರ
ಈ ವೇಳೆ ಪೊಲೀಸರು ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದರೂ, ಅವರು ಪೊಲೀಸ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ಆರೋಪಿ ಮಹೇಶ್ ವಿರುದ್ಧ 2 ಕೊಲೆ ಪ್ರಕರಣ ಸೇರಿ ಒಟ್ಟ 5 ಪ್ರಕರಣಗಳು ಹಾಗೂ ಸತೀಶ್ ವಿರುದ್ಧ 3 ಕೊಲೆ ಸೇರಿ 5 ಪ್ರಕರಣಗಳು ದಾಖಲಾಗಿದ್ದವು. ಗಾಯಗೊಂಡ ರೌಡಿಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ತಮ್ಮ ಆತ್ಮ ರಕ್ಷಣೆಗಾಗಿ ಇಬ್ಬರು ರೌಡಿಶೀಟರ್ಗಳ ಮೇಲೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಬಿಟಿಎಂ ಲೇಔಟ್ನ ರಂಕಾ ಕಾಲೋನಿ ಬಳಿ ನಡೆದಿದೆ.
Comments
English summary
Two rowdies were shot below the knee by the Bengaluru City Crime Branch after they tried to escape and even assaulted a CCB team member with a knife near BTM lake, on Monday morning.
Story first published: Monday, January 13, 2020, 13:35 [IST]