ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಕಿಂಗ್‌ಪಿನ್ ಆರೋಪ ಹೊತ್ತಿರುವ ಉದಯ್‌ಗೌಡ ಒಡೆತನದ ಕ್ಲಬ್ ಬಂದ್

|
Google Oneindia Kannada News

ಬೆಂಗಳೂರು, ಸೆ.22: ಬಿಜೆಪಿಯ ಕಿಂಗ್ ಪಿನ್ ಆರೋಪ ಹೊತ್ತಿರುವ ಉದಯ್‌ಗೌಡ ಅವರಿಗೆ ಸೇರಿದ ಕ್ಲಬ್ ಒಂದರ ಮೇಲೆ ಶುಕ್ರವಾರ ಪೊಲೀಸರು ದಾಳಿ ನಡೆಸಿದ್ದು, ಬಳಿಕ ಬೀಗ ಹಾಕಲಾಗಿದೆ.

ಸರ್ಕಾರ ಕೆಡವಲು ಯತ್ನ: ಬಿಜೆಪಿ ವಿರುದ್ಧ ಸಭಾಧ್ಯಕ್ಷರಿಗೆ ಜೆಡಿಎಸ್‌ ದೂರು ಸರ್ಕಾರ ಕೆಡವಲು ಯತ್ನ: ಬಿಜೆಪಿ ವಿರುದ್ಧ ಸಭಾಧ್ಯಕ್ಷರಿಗೆ ಜೆಡಿಎಸ್‌ ದೂರು

ಆಪರೇಷನ್ ಕಮಲದ ಕಿಂಗ್ ಪಿನ್ ಎಂಬ ಆರೋಪವನ್ನು ಹೊತ್ತಿರುವ ಉದಯ್‌ಗೌಡ ಕಾನೂನು ಬಾಹಿರವಾಗಿ ಕ್ಲಬ್ ನಡೆಸುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಕ್ಲಬ್ ಮುಚ್ಚಲಾಗಿದೆ.

ಎಚ್‌ಡಿಕೆ 'ದಂಗೆ' ಹೇಳಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು ಎಚ್‌ಡಿಕೆ 'ದಂಗೆ' ಹೇಳಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು

ನಗರದ ಎಂಜಿ ರಸ್ತೆಯಲ್ಲಿರುವ ಕ್ಲಬ್ ಮೇಲೆ ದಾಳಿ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಾನೂನು ಬಾಹಿರವಾಗಿ ಕ್ಲಬ್ ನಡೆಸುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕ್ಲಬ್ ಗೆ ಬೀಗ ಹಾಕಲಾಗಿದೆ.

Police seizes Bjp kingpin Udayagowdas club

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದ ಹೊರ ಭಾಗಗಳಲ್ಲೂ ವ್ಯವಹಾರಗಳನ್ನು ಹೊಂದಿರುವ ಉದಯ್ ಗೌಡ ಅನೇಕ ಕ್ಲಬ್ ಗಳನ್ನು ನಡೆಸುತ್ತಿದ್ದ, ಆತನ ಎಲ್ಲಾ ವ್ಯವಹಾರಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ಪೈಕಿ ಒಂದು ಕ್ಲಬ್ ಈಗಾಗಲೇ ಮುಚ್ಚಲಾಗಿದೆ.

ಬಿಎಸ್‌ವೈ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ, ಶಾಸಕರೊಂದಿಗೆ ಜಟಾಪಟಿ ಬಿಎಸ್‌ವೈ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ, ಶಾಸಕರೊಂದಿಗೆ ಜಟಾಪಟಿ

ಫೋರ್ಜರಿ, ವಂಚನೆ, ಪ್ರಕರಣಗಳಲ್ಲಿ ಮೂರು ದಿನಗಳ ಹಿಂದಷ್ಟೇ ಶೇಷಾದ್ರಿಪುರದ ಲಿಂಕ್ ರಸ್ತೆಯಲ್ಲಿರುವ ಉದಯ್ ಗೌಡ ನ ಮನೆ ಹಾಗೂ ಆತನ ವ್ಯವಹಾರ ಸ್ನೇಹಿತ ಕೆ.ವಿ. ನಾಯ್ಡುಗೆ ಸೇರಿದ ಡಾಲರ್ಸ್ ಕಾಲೊನಿಯಲ್ಲಿರುವ ಮನೆ ಮೇಲೆ ಪೊಒಲೀಸರು ದಾಳಿ ನಡೆಸಿದ್ದರು.

English summary
Alleged kingpin of Bjp, Udayagowda owned club in M.G.Road was seized by police and alleged that club was run violating various norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X