ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋಗೆ ಬಿಗಿ ಭದ್ರತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಏರೋ ಇಂಡಿಯಾ ಶೋಗೂ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ಏರೋ ಇಂಡಿಯಾ ಪ್ರದರ್ಶನಕ್ಕಾಗಿ ಬಂದಿಳಿದ ರಫೇಲ್ ವಿಮಾನಗಳು ಏರೋ ಇಂಡಿಯಾ ಪ್ರದರ್ಶನಕ್ಕಾಗಿ ಬಂದಿಳಿದ ರಫೇಲ್ ವಿಮಾನಗಳು

ಯಲಹಂಕ ಏರ್ ಪೊರ್ಸ್ ವಾಯುನೆಲೆ ಒಳ ಮತ್ತು ಹೊರ ಎರಡು ಕಿ.ಮೀ ಸುತ್ತಮುತ್ತ ಸಿಸಿಟಿವಿ ಅಳವಡಿಸಲಾಗಿದ್ದು, ನಗರದಲ್ಲಿ ಹೊಸದಾಗಿ ಯಾರ್ಯಾರು ವಾಸವಿದ್ದಾರೆ? ಅವರ ಏನು ವೃತ್ತಿ? ಯಾವ ಮೂಲದವರು ಎನ್ನುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಬೆಂಗಳೂರಿನ ವಿಭಾಗದಲ್ಲಿನ ಠಾಣೆಗಳಿಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ.

ಏರೋ ಇಂಡಿಯಾ: ಡ್ರೋಣ್, ಬಲೂನ್ ಹಾರಾಟ ನಿಷೇಧ ಏರೋ ಇಂಡಿಯಾ: ಡ್ರೋಣ್, ಬಲೂನ್ ಹಾರಾಟ ನಿಷೇಧ

ಬೆಂಗಳೂರು ಪೊಲೀಸರಿಗೆ ಇಂಟಲಿಜೆನ್ಸ್​ ಬ್ಯೂರೋ, ಸ್ಟೇಟ್ಸ್ ಇಂಟಲಿಜೆನ್ಸ್ ಮತ್ತು ಏರ್ ಶೋ ಇಂಟಲಿಜೆನ್ಸ್ ರಕ್ಷಣೆ ಕಾರ್ಯಾಚಾರಣೆಯಲ್ಲಿ ಕೈಜೋಡಿಸಲಿದ್ದಾರೆ. ನಗರದಲ್ಲಿನ ಪಿಜಿ, ಅಪಾರ್ಟ್ಮೆಂಟ್ ಹಾಗೂ ಹೊಟೇಲ್ ರೆಸ್ಟೋರೆಂಟ್ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಏರ್ ಪೋರ್ಸ್ ಒಳಗಡೆ ಮತ್ತು ಹೊರಗಡೆ ಸಿಐಎಸ್​ಎಫ್​ನಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

police seek aadhaar details of residents near air show venue

ಫೆ.20ರಿಂದ ಶುರುವಾಗುವ ಏರ್​ ಶೋಗೆ ಈಗಾಗಲೇ ವಿಮಾನಗಳು ರಿಹರ್ಸಲ್ ಆರಂಭಿಸಿವೆ. ಈಗಾಗಲೇ ಭಾರತೀಯ ವಾಯುಸೇನೆ ಸೇರುತ್ತಿರುವ ಮೊದಲ ಯುದ್ಧ ವಿಮಾನ ರಫೇಲ್ ಕೂಡ ಯಲಹಂಕ ವಾಯುನೆಲೆಗೆ ಬಂದಿಳಿದಿದ್ದು, ತನ್ನ ಸಾಮರ್ಥ್ಯ ಪ್ರದರ್ಶಿಸಲು ತಯಾರಾಗಿದೆ. ಉಳಿದಂತೆ ಸೂರ್ಯಕಿರಣ್, ಸ್ವದೇಶಿ ನಿರ್ಮಿತ ಸಾರಸ್, ಯಕೋವ್ ಲೇವ್ಸ್, ಎಇಡಬ್ಲ್ಯು ಅಂಡ್ ಸಿ, ಎಚ್​ಎಎಲ್​ ನಿರ್ಮಿತ ಎಎಲ್​ಎಚ್​ ಹೆಲಿಕಾಪ್ಟರ್, ಎಂಐ 17, ಎಂಐ 17 ವಿ5 ಹೆಲಿಕಾಪ್ಟರ್​ಗಳು ಪ್ರದರ್ಶನ ನೀಡಲಿವೆ.

English summary
In the run-up to aero india, police have started vetting residents living around yelahanka Air force station here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X