ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ್ಯುವೆಲ್ಲರಿ ಶಾಪ್ ಮಾಲೀಕನ ಅಪಹರಣ ಸುಖಾಂತ್ಯ

|
Google Oneindia Kannada News

ಬೆಂಗಳೂರು, ಜೂ.13 : ಬೆಂಗಳೂರಿನ ಸುಗುಣ ಜ್ಯುವೆಲ್ಲರಿ ಶಾಪ್ ಮಾಲೀಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಅಪಹರಣಗೊಂಡಿದ್ದ ಅಂಗಡಿ ಮಾಲೀಕನನ್ನು ರಕ್ಷಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿದ್ದು, 2 ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಗುರುವಾರ ರಾತ್ರಿ ಸುಮಾರು 10.30ರ ಸಮಯದಲ್ಲಿ ಅಂಗಡಿ ಮುಚ್ಚಿ ಮನೆಗೆ ಹೊರಟ ಸುಗುಣ ಜ್ಯುವೆಲ್ಲರಿ ಶಾಪ್ ಮಾಲೀಕ ಶ್ರೀರಾಮ್ ದಯಾಳ್ ಅವರನ್ನು ನಾಲ್ವರು ದುಷ್ಕರ್ಮಿಗಳು ಅಪಹರಿಸಿದ್ದರು. ನಂತರ ಶ್ರೀರಾಮ್ ಅವರ ಸಹೋದರ ದೀನದಯಾಳ್ ಅವರಿಗೆ ಕರೆ ಮಾಡಿ ತಮ್ಮನ ಬಿಡುಗಡೆಗಾಗಿ 10 ಲಕ್ಷ ಹಣವನ್ನ ಕೊಡುವಂತೆ ಬೇಡಿಕೆ ಇಟ್ಟಿದ್ದರು.

Police

ಸಹೋದರನ ಅಪಹರಣದ ಕುರಿತು ದೀನದಯಾಳ್ ಎಚ್ಎಎಲ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ರಾತ್ರಿ ಪುನಃ ಕರೆ ಮಾಡಿದ ಅಪಹರಣಕಾರರು, ಹಣ ಹೊಂದಿಸಿದ್ದೀರಾ? ಎಂದು ಕೇಳಿದ್ದರು. ಪೊಲೀಸರಿಗೆ ಈ ಕುರಿತು ದೀನದಯಾಳ್ ಮಾಹಿತಿ ನೀಡಿದ್ದರು. [ಬೆಂಗಳೂರು ಕೊಲೆಗೆ ಚಂಬಲ್ ಕಣಿವೆ ನಂಟು]

ಅಪಹರಣಕಾರರಿಗೆ ನಮ್ಮ ಬಳಿ ಕೇಲವ 2 ಲಕ್ಷ ರೂಪಾಯಿ ಹಣವಿದೆ. 10 ಲಕ್ಷ ಹಣವಿಲ್ಲ ಎಂದು ದೀನದಯಾಳ್ ಹೇಳಿದ್ದಾರೆ. ಅಷ್ಟು ಹಣವನ್ನು ತಂದುಕೊಂಡುವಂತೆ ಅವರು ಹೇಳಿದ್ದಾರೆ. ದೀನದಯಾಳ್ ಪೊಲೀಸರೊಂದಿಗೆ ಅವರು ಸೂಚಿಸಿದ್ದ ಮೇಡಹಳ್ಳಿ ಸೇತುವೆ ಬಳಿಗೆ ಹೋಗಿದ್ದಾರೆ.

ಹಣ ಪಡೆಯಲು ಬಂದ ಅಪಹರಣಕಾರರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು ಉಳಿದವರು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

English summary
Bangalore HAL Police rescued Suguna jewellery shop owner who kidnapped on Thursday June 12 night. Police arrested one accused who kidnapped jewellery shop owner Sriram Dalayal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X