ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆ ಮೇಲೆ ಮತ್ತೆ ಮಧ್ಯಾಹ್ನ ಲಾರಿ ಸಂಚಾರ

By Kiran B Hegde
|
Google Oneindia Kannada News

ಬೆಂಗಳೂರು, ಜ. 17: ನಗರದಲ್ಲಿ ವಾಹನ ದಟ್ಟಣೆ ಅತಿಯಾಗಿದ್ದ ಹಿನ್ನೆಲೆಯಲ್ಲಿ ಭಾರೀ ವಾಹನಗಳು ವಿಶೇಷವಾಗಿ ಲಾರಿಗಳು ಬೆಳಗ್ಗೆಯಿಂದ ರಾತ್ರಿಯವರೆಗೆ ನಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಈ ನಿರ್ಧಾರದ ವಿರುದ್ಧ ಲಾರಿ ಮಾಲೀಕರು ಹಾಗೂ ಚಾಲಕರ ಸಂಘ ಮುಷ್ಕರ ಹೂಡಿದ ಹಿನ್ನೆಲೆಯಲ್ಲಿ ನಿಷೇಧ ವಾಪಸ್ ಪಡೆಯಲಾಗಿದೆ.

ಇನ್ನು ಮುಂದೆ ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ನಗರ ಪ್ರವೇಶಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಆದ್ದರಿಂದ ಮುಷ್ಕರವನ್ನು ಲಾರಿ ಮಾಲೀಕರು ವಾಪಸ್ ಪಡೆದಿದ್ದಾರೆ. [ಲಾರಿ ಮುಷ್ಕರಕ್ಕೆ ಈದ್ ಸಂಕ್ರಾಂತಿ ರಜೆ]

lorry

ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಶುಕ್ರವಾರ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಬಿ. ದಯಾನಂದ ಮುಷ್ಕರ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. [ಲಾರಿ ಮುಷ್ಕರ : ಅಗತ್ಯ ವಸ್ತುಗಳ ಬೆಲೆ ಏರಿಕೆ]

English summary
Bengaluru city traffic police have relaxed restrictions on entry of trucks into the city during daytime. Trucks can now enter during non-peak hours between 11 a.m. and 4 p.m. in addition to the 10 p.m. to 6 a.m slot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X