ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಆನೇಕಲ್‌ನಲ್ಲಿ ರೇವ್ ಪಾರ್ಟಿ, ಯುವತಿಯರ ಅರೆ ನಗ್ನ ನೃತ್ಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19; ಪೊಲೀಸರು ಆನೇಕಲ್ ಹೊರವಲಯದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. ಯುವತಿಯರು ಪಾರ್ಟಿಯಲ್ಲಿ ಅರೆ ನಗ್ನವಾಗಿ ನರ್ತಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಆನೇಕಲ್ ಹೊರವಲಯದ ಖಾಸಗಿ ರೆಸಾರ್ಟ್ ಒಂದರ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ.

ರಾಮನಗರ; ಮಾವಿನ ತೋಪಿನಲ್ಲಿ ರೇವ್ ಪಾರ್ಟಿ, 10 ಜನರ ಬಂಧನ ರಾಮನಗರ; ಮಾವಿನ ತೋಪಿನಲ್ಲಿ ರೇವ್ ಪಾರ್ಟಿ, 10 ಜನರ ಬಂಧನ

ಅರ್ಧಂಬಂರ್ಧ ಬಟ್ಟೆ ಹಾಕಿರುವ ಯುವಕ-ಯುವತಿಯರು ರೇವ್ ಪಾರ್ಟಿಯಲ್ಲಿ ನೃತ್ಯ ಮಾಡುತ್ತಿದ್ದರು. ಪಾರ್ಟಿಯಲ್ಲಿ ಡ್ರಗ್ಸ್ ಸಹ ಲಭ್ಯವಿತ್ತು ಎಂಬ ಮಾಹಿತಿ ಸಿಕ್ಕಿದೆ. ಗಾಂಜಾ,‌ ಮರಿಜುವಾನ ಸೇರಿದಂತೆ ವಿವಿಧ ಡ್ರಗ್ಸ್‌ಗಳು ಪಾರ್ಟಿಯಲ್ಲಿದ್ದವು.

ಆನೇಕಲ್ : ಕೋಟಿ ಕೋಟಿ ಬೆಲೆಬಾಳುವ ಭೂಮಿ ಸರ್ಕಾರದ ವಶಕ್ಕೆ ಆನೇಕಲ್ : ಕೋಟಿ ಕೋಟಿ ಬೆಲೆಬಾಳುವ ಭೂಮಿ ಸರ್ಕಾರದ ವಶಕ್ಕೆ

 Police Raid On Rave Party At Anekal

ಖಚಿತ ಮಾಹಿತಿ ‌ಮೇರೆಗೆ ದಾಳಿ ಮಾಡಿದ ಆನೇಕಲ್ ಪೊಲೀಸರು ಮಧ್ಯ ರಾತ್ರಿ ಡ್ರಗ್ಸ್ ಪೆಡ್ಲರ್ ಹಿಡಿಯುವ ಆಪರೇಷನ್ ನಡೆಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಯುವಕ-ಯುವತಿಯರು ಸ್ಥಳದಿಂದ ಪರಾರಿಯಾಗಿದ್ದಾರೆ.

ಆನೇಕಲ್ ನಲ್ಲಿರೌಡಿ ಪಟಾಲಂಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್ ! ಆನೇಕಲ್ ನಲ್ಲಿರೌಡಿ ಪಟಾಲಂಗೆ ಡಿವೈಎಸ್ಪಿ ಖಡಕ್ ವಾರ್ನಿಂಗ್ !

ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಅರೆ ನಗ್ನ ಸ್ಥಿತಿಯಲ್ಲಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ರೇವ್ ಪಾರ್ಟಿಯ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದರು. ಹಲವರು ಡ್ರಗ್ಸ್ ಸೇವಿಸಿರುವುದು ಖಚಿತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಾಂಜಾ ಸೇವಿಸಿ, ಅಬ್ಬರದ ಸಂಗೀತಕ್ಕೆ ಅರೆಬೆತ್ತಲೆಯಾಗಿ ನೃತ್ಯ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಆನೇಕಲ್ ಬಳಿಕ ತಮ್ಮನಾಯಕನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು.

ಆನೇಕಲ್ ಪೊಲೀಸರು ಪಾರ್ಟಿಯಲ್ಲಿದ್ದ 11 ಆರೋಪಿಗಳನ್ನು ಬಂಧಿಸಿದ್ದರು. ಪಾರ್ಟಿಯಲ್ಲಿ ಭಾಗಿಯಾಗಿದ್ದವರಲ್ಲಿ ಅನೇಕರು ಬೆಂಗಳೂರು ನಗರದವರಾಗಿದ್ದರೆ. 6 ಕಾರು, 15 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

English summary
A police team conducted a raid at a Anekal where reve party organized. Students also take part in the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X