ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Shobha Khatavkar: ಬೆಂಗಳೂರು: ಪೊಲೀಸ್ ಅಧಿಕಾರಿ ಶೋಭಾ ಕಟಾವ್ಕರ್ ಶವವಾಗಿ ಪತ್ತೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 15: ಪೊಲೀಸ್ ಅಧಿಕಾರಿ ಶೋಭಾ ಕಟಾವ್ಕರ್ (53 ವರ್ಷ) ಬೆಂಗಳೂರಿನ ತಮ್ಮ ಮನೆಯಲ್ಲಿ ಇಂದು (ಶುಕ್ರವಾರ) ಶವವಾಗಿ ಪತ್ತೆಯಾಗಿದ್ದಾರೆ.

ಬೆಂಗಳೂರಿನ ಪುಟ್ಟೆನಹಳ್ಳಿಯ ತಮ್ಮ ನಿವಾಸದಲ್ಲಿ ಎಸ್​ಪಿ ಶೋಭಾ ಕಟಾವ್ಕರ್ ಸಾವನಪ್ಪಿದ್ದಾರೆ. ಎಸ್​ಪಿ ಶೋಭಾ ಕಟಾವ್ಕರ್ ಮನೆಯಲ್ಲಿ ಒಬ್ಬರೇ ಇದ್ದರು ಎಂದು ಹೇಳಲಾಗುತ್ತಿದ್ದು, ಮನೆಯವರೆಲ್ಲಾ ಹಾಸನಕ್ಕೆ ತೆರಳಿದ್ದರು.

ಮನೆಯಲ್ಲಿ ಒಬ್ಬರೇ ಇದ್ದ ಎಸ್​ಪಿ ಶೋಭಾ ಕಟಾವ್ಕರ್ ಅವರಿಗೆ ಮನೆಯವರು ಕರೆ ಮಾಡಿದ್ದಾರೆ, ಈ ವೇಳೆ ಎಸ್‌ಪಿ ಶೋಭಾ ಕರೆ ಸ್ವೀಕರಿಸಿರಲಿಲ್ಲ. ಆಗ ಮನೆಯವರು ಸೆಕ್ಯುರಿಟಿ ಕರೆ ಮಾಡಿ ಪರಿಶೀಲನೆ ಮಾಡಲು ಸೂಚಿಸಿದ್ದಾರೆ. ಈ ವೇಳೆ ಎಸ್ಪಿ ಶೋಭಾ ಕಟಾವ್ಕರ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

Bengaluru: Police Officer Shobha Katavkar Found Dead In Her Home

ಎಸ್ಪಿ ಶೋಭಾ ಕಟಾವ್ಕರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ಸಹಜ ಸಾವು ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ಶೋಭಾ ಕಟಾವ್ಕರ್ ಎಸ್‌ಪಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿದ್ದರು.

Recommended Video

ಉಕ್ರೇನ್ ಪರಿಸ್ಥಿತಿ ತುಂಬಾ ಹದಗೆಡ್ತಿದೆ!! | Oneindia Kannada

English summary
Police officer Shobha Katavkar (53) was found dead today (Friday) at her home in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X